ಕೋಲಾರ: ಕುಂಬಾರ ಸಮುದಾಯದವರ ಸಮಸ್ಯೆ, ಕುಂದುಕೊರತೆಗಳನ್ನು ಹೇಳಿಕೊಳ್ಳಲು ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೇ ಗೈರುಹಾಜರಿಯಾಗಿದ್ದು, ಸರ್ವಜ್ಞ ಜಯಂತಿಯಂದು ಪ್ರತಿ ಬಾರಿಯೂ ಕಡೆಗಣಿಸಿಕೊಂಡು ಬಂದಿದ್ದಾರೆ ಎಂದು ದಕ್ಷಿಣ ಭಾರತ ಕುಂಬಾರ ಫೆಡರೇಶನ್ ರಾಜ್ಯ ಯವ ಘಟಕದ ಅಧ್ಯಕ್ಷ ಡಾ.ಕೆ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುಂಬಾರ ಸಮುದಾಯದ ವತಿಯಿಂದ ಆಯೋಜಿಸಿದ್ದ ಸಂತಕವಿ ಶ್ರೀ ಸರ್ವಜ್ಞ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕುಂಬಾರ ಸಮುದಾಯವು ಸಣ್ಣ ಸಮುದಾಯ ಎಂದು ನಿರ್ಲಕ್ಷ್ಯ ತೋರಿದ್ದಾರೆ. ಮುಂದೆ ಸಮುದಾಯವು ಒಗ್ಗಟ್ಟುನ್ನು ಪ್ರದರ್ಶಿಸಬೇಕು ಇಲ್ಲದೇ ಹೋದರೆ ನಿರಂತರವಾಗಿ ಕಡೆಗಣಿಸುತ್ತಾರೆ. ನಮ್ಮಲ್ಲಿ ಹೆಸರಿಗಷ್ಟೆ ಕುಂಬಾರ ನಿಗಮ ಮಂಡಳಿ ರಚನೆಯಾಗಿದೆ ಅದಕ್ಕೆ ಬಜೆಟ್ ನಲ್ಲಿ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಇದೇ ರೀತಿ ಮುಂದುವರೆದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸಮುದಾಯದ ಶಿಕ್ಷಣ, ಉದ್ಯೋಗಕ್ಕಾಗಿ ಈಗಿರುವ ಮೀಸಲಾತಿಯಲ್ಲಿಯೇ ಒಳ ಮೀಸಲಾತಿ ಜಾರಿ ಮಾಡಬೇಕು ಮಕ್ಕಳ ಶೈಕ್ಷಣಿಕವಾಗಿ ಮುಂದುವರೆಯಲು ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಪ್ರತಿ ತಾಲೂಕಿನಲ್ಲಿ ಸರ್ವಜ್ಞರ ಸಮುದಾಯ ಭವನ ನಿರ್ಮಾಣ ಮಾಡಬೇಕು ನಮ್ಮನ್ನು ಚುನಾವಣೆಗೆ ಮಾತ್ರ ಜನಪ್ರತಿನಿಧಿಗಳು ಬಳಸಿಕೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಮತಯಾಚನೆಗೆ ಬಂದಾಗ ತಕ್ಕಪಾಠ ಕಲಿಸೋಣತ್ತೇವೆ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಂಬಾರ ವಿಧ್ಯಾರ್ಥಿ ನಿಲಯದ ಅಧ್ಯಕ್ಷ ತಬಲ ನಾರಾಯಣಪ್ಪ ಮಾತನಾಡಿ ಕುಂಬಾರ ಸಮುದಾಯದವರನ್ನು ಕರೆದರು ಇಂತಹ ಕಾರ್ಯಕ್ರಮಗಳಿಗೆ ಬರೋದಿಲ್ಲ ಅದರಿಂದಲೇ ನಮ್ಮಂತಹ ಸಣ್ಣ ಸಮುದಾಯಗಳನ್ನು ಎಂಎಲ್ಎ ಎಂಎಲ್ಸಿ ಎಂಪಿಗಳು ನಿರ್ಲಕ್ಷ್ಯ ತೋರಿಸುತ್ತಾರೆ ಮುಂದೆ ನಮ್ಮಲ್ಲಿನ ಒಗ್ಗಟ್ಟು ನೋಡಿ ಬೇರೆ ಸಮುದಾಯಗಳಿಗೆ ಮಾದರಿಯಾಗಬೇಕು ಅರೀತಿಯಲ್ಲಿ ಸಂಘಟಿತರಾಗಬೇಕು ಮಕ್ಕಳಿಗೆ ವಿದ್ಯೆ ಮತ್ತು ಶಿಸ್ತು ಕಲಿಸಲು ಪೋಷಕರು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಪಂ ಯೋಜನಾ ನಿರ್ದೇಶಕ ರವಿಚಂದ್ರ ಮಾತನಾಡಿ ಸಮಾಜದಲ್ಲಿ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಸರ್ವಜ್ಞ ಕವಿ ವಚನಗಳೇ ಸಾಕ್ಷಿಯಾಗಿವೆ ಕುಂಬಾರ ಸಮುದಾಯದ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ವಿಶ್ವ ಕರ್ಮ ಯೋಜನೆಯನ್ನು ಪ್ರಾರಂಭಿಸಿದ್ದು ಇದರ ಸದುಪಯೋಗ ಪಡಿಸಿಕೊಂಡು ಸ್ವಂತ ಉದ್ಯೋಗದೊಂದಿಗೆ ನಾಲ್ಕು ಜನಕ್ಕೆ ಉದ್ಯೋಗ ಕೊಡಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಕುವೆಂಪು ನಗರದಲ್ಲಿರುವ ವಸತಿ ನಿಲಯದಿಂದ ಮೆರವಣಿಗೆ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸರ್ವಜ್ಞರ ಭಾವಚಿತ್ರದ ಪಲ್ಲಕ್ಕಿಗಳು ಹಾಗೂ ಕಲಾತಂಡಗಳೊಂದಿಗೆ ರಂಗಮಂದಿರಕ್ಕೆ ಆಗಮಿಸಿದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ, ಜವಳಿ ಮತ್ತು ಕೈಮಗ್ಗ ಇಲಾಖೆಯ ಮಂಜುನಾಥ್, ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಕಲ್ಲಂಡೂರು ಶ್ರೀನಿವಾಸಪ್ಪ, ಪದಾಧಿಕಾರಿಗಳಾದ ಶ್ರೀನಿವಾಸ್, ರೆಡ್ಡೆಪ್ಪ, ನಂದೀಶ್,ನಾರಾಯಣಸ್ವಾಮಿ, ಮಂಜುನಾಥ್ ಚಿಕ್ಕರೆಡ್ಡೆಪ್ಪ, ಕೃಷ್ಣಮೂರ್ತಿ, ಜ್ಞಾನ ಮೂರ್ತಿ ಮುಂತಾದವರು ಇದ್ದರು