ಬೇಕಂತಲೇ ಯಾರೋ ಕಿಡಿಗೇಡಿಗಳು ರಾತ್ರೋರಾತ್ರಿ ಗುಜರಿ ಅಂಗಡಿಗೆ ಬೆಂಕಿ ಇಟ್ಟು ಪರಾರಿಯಾಗಿರುವ ಘಟನೆ ನಗರದ ಡಿಕ್ರಾಸ್ ರಸ್ತೆಯ ವಿ-ಕೇರ್ ಆಸ್ಪತ್ರೆ ಮುಭಾಗ ನಡೆದಿದೆ.
ನಗರದ ಚಿಕ್ಕಪೇಟೆ ನಿವಾಸಿ ಸುಬಾನ್ ಎಂಬ ವ್ಯಕ್ತಿಯ ಗುಜರಿ ಅಂಗಡಿ ಇದಾಗಿದ್ದು, ಅಂಗಡಿಗೆ ಬೆಂಕಿ ಬಿದ್ದಿರುವುದನ್ನ ಕಂಡ ವಿಕೇರ್ ಆಸ್ಪತ್ರೆ ಸಿಬ್ಬಂದಿ ಕೂಡಲೇ ಅಂಗಡಿ ಮಾಲೀಕನಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಮಾಲೀಕ ಬರುವಷ್ಟರಲ್ಲಿ ಕೆಲ ವಸ್ತುಗಳು ಬೆಂಕಿಗಾಹುತಿಯಾಗಿದ್ದವು.
ಇಂದು ಬೆಳಗ್ಗೆ ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಯವುದೇ ಪ್ರಾಣಾಪಾಯ ಸಂಭವಿಸಿಲ್ಲ.ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.