ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ದೊಡ್ಡಬಳ್ಳಾಪುರದ 95 ಮಂದಿ ಪ್ರವಾಸಿಗರು ಸುರಕ್ಷಿತ

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಸುತ್ತಮುತ್ತಲಿನ ಹಳ್ಳಿಗಳಾದ ಹಾಡೋನಹಳ್ಳಿ, ಲಕ್ಷ್ಮೀದೇವಿಪುರ, ತಿರುಮಗೊಂಡನಹಳ್ಳಿ, ತಿಮ್ಮೋಜನಹಳ್ಳಿ, ತೂಬಗೆರೆ, ಹೀರೆಮುದ್ದೇನಹಳ್ಳಿ, ನೆಲಗುದಿಗೆ ಗ್ರಾಮಗಳಿಂದ 95 ಜನ 9 ದಿನಗಳ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು.

ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ 95 ಮಂದಿ ಪ್ರವಾಸಿಗರು ಸದ್ಯ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಏ.19 ರಂದು ಬೆಳಗ್ಗೆ 21 ಜನರ ಒಂದು ತಂಡ ಅಮೃತಸರ ತಲುಪಿದರೆ, ವಿಮಾನ ಟಿಕೆಟ್ ಗೊಂದಲದ ಕಾರಣ 74 ಮಂದಿಯ ಮತ್ತೊಂದು ತಂಡ ದೇವನಹಳ್ಳಿ ಎಂ.ಆರ್. ಟ್ರಾವೆಲ್ ಏಜೆನ್ಸಿ ಮೂಲಕ ದೆಹಲಿಗೆ ತೆರಳಿ ಅಲ್ಲಿಂದ ಅಮೃತಸರದಲ್ಲಿ ಎಲ್ಲರೂ ಒಟ್ಟಾಗಿ ಸೇರಿದ್ದರು.

ಅಮೃತಸರದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಬಳಿಕ ಶ್ರೀನಗರಕ್ಕೆ ಪ್ರವಾಸ ತೆರಳಿದ್ದರು. ಇವರು ಉಳಿದುಕೊಳ್ಳಬೇಕಾದ ಹೋಟೆಲ್ ಉಗ್ರರ ದಾಳಿಗೆ ಒಳಗಾದ ಪಹಲ್ಗಾಮ್‌ನ ಬೈಸರನ್ ಸಮೀಪದಲ್ಲಿಯೇ ಎರಡು ದಿನಗಳ ಕಾಲ ಉಳಿದುಕೊಳ್ಳಲು ಕೊಠಡಿಗಳನ್ನು ಕಾಯ್ದಿರಿಸಿದ್ದರು. ಆದರೆ, ಆ ರಸ್ತೆಯಲ್ಲಿ ಬೆಟ್ಟ ಕುಸಿದು ಸಂಚಾರ ಸ್ಥಗಿತಗೊಂಡ ಕಾರಣ ಮಾರ್ಗ ಬದಲಿಸಿದ ಬೆಂಗಳೂರಿನ 15 ಜನ ಸೇರಿದಂತೆ 110 ಮಂದಿಯ ಪ್ರವಾಸಿಗರು, ಕಟ್ರಾ ವೈಷ್ಣವಿ ದೇವಿ ದರ್ಶನ ಮುಗಿಸಿ, ಕುನುಮೊನಾಲಿಗೆ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ…

Leave a Reply

Your email address will not be published. Required fields are marked *