ಕಾಶ್ಮೀರಿ ಕೇಸರಿ ಹೂ ಬೆಳೆದ ದೊಡ್ಡಬಳ್ಳಾಪುರದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ(ಟೆಕ್ಕಿ) ಪವನ್

ದೊಡ್ಡಬಳ್ಳಾಪುರದ ಪವನ್ ಎಂಬ ಯುವ ಐಟಿ ಉದ್ಯೋಗಿ ಮನೆಯಲ್ಲೇ ಕಾಶ್ಮೀರಿ ಕೇಸರಿ ಹೂವು ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ.

ನೋಡೋಕೆ ಥೇಟ್ ಈರುಳ್ಳಿ ತರ ಕಾಣುವ ಕೇಸರಿ ಗಡ್ಡೆಗಳು ಜಮ್ಮು-ಕಾಶ್ಮೀರದ ಪ್ರಮುಖ ಬೆಳೆಯಾಗಿದೆ. ಹೌದು, ಈ ಗಡ್ಡೆಗಳು ಕಾಶ್ಮೀರದ ಪ್ರಮುಖ ಬೆಳೆಯಾದ ಕೇಸರಿ ಬೆಳೆಯಾಗಿದೆ. ದೊಡ್ಡಬಳ್ಳಾಪುರದ 24 ವರ್ಷದ ಯುವಕ ಪವನ್ ಧನಂಜಯ್ ಮಾರುತಿ ನಗರದಲ್ಲಿರುವ ತಮ್ಮ ಮನೆಯಲ್ಲಿಯೇ ಕಾಶ್ಮೀರದ ಹವಾಮಾನವನ್ನು ಸೃಷ್ಟಿ ಮಾಡಿ ಕೇಸರಿ ಬೆಳೆದು ಯಶಸ್ವಿಯಾಗಿದ್ದಾರೆ.

ಈ ಕೇಸರಿ ಗಡ್ಡೆ ವರ್ಷದಲ್ಲಿ ಒಮ್ಮೆ ಮಾತ್ರ ಕೇಸರಿ ಹೂ ಬಿಡುತ್ತೆ. ಅದೂ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ. ಬಳಿಕ ವಾರದಲ್ಲಿ ಹೂ ಖಾಲಿಯಾದರೆ ಮತ್ತೆ ಕೇಸರಿ ಹೂ ಬರುವುದು ಮುಂದಿನ ವರ್ಷಕ್ಕೆ. ಏಪ್ರಿಲ್ ತಿಂಗಳಲ್ಲಿ ಕೇಸರಿ ಗಡ್ಡೆಯನ್ನು ನಾಟಿ ಮಾಡಲಾಗುತ್ತದೆ. ಅದು ಸೆಪ್ಟೆಂಬರ್ ತಿಂಗಳಲ್ಲಿ ಮೊಳಕೆ ಬಿಡಲು ಶುರು ಮಾಡಿ, ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ ಹೂ ಬಿಡುತ್ತೆ. ಈ ಹೂ ಬಿಡುವ ಸಮಯ ಅಂದರೆ ಎರಡು ಮೂರು ತಿಂಗಳು ಮಾತ್ರ ಈ ಕೋಲ್ಡ್ ಸ್ಟೋರೇಜ್ ಅವಶ್ಯಕತೆ ಇರುತ್ತದೆ ಎಂದು ಪವನ್ ತಿಳಿಸಿದ್ದಾರೆ.

ಹೂ ಬಿಟ್ಟಾಗ ಹೂವಿನಿಂದ ಶಲಾಕೆಯ ರೂಪದಲ್ಲಿ ಕೇಸರಿ ಹೊರಗಡೆ ಬರುತ್ತೆ. ದಾಸವಾಳದ ಹೂವಿನ ಮಧ್ಯದಿಂದ ಬರುವ ಶಲಾಕೆಯಂತೆ ಇಲ್ಲಿಯೂ ಕೇಸರಿ ಶಲಾಕೆಗಳು ಹೂವಿನಿಂದ ಆಚೆ ಬರುತ್ತವೆ. ಅವುಗಳನ್ನು ಹೂವುಗಳಿಂದ ಹುಷಾರಾಗಿ ಬೇರ್ಪಡಿಸಿ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಲಾಗುವ ಕೇಸರಿಯನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇಡುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದ್ದಾರೆ.

ಕಾಶ್ಮೀರದ ಭೂಮಿಯಲ್ಲಿ ಬೆಳೆಯುವ ಕೇಸರಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕಲಾಗುತ್ತದೆ. ಆದ್ರೆ ಇಲ್ಲಿ ಒಂದು ರೂಮಿನಲ್ಲಿ ಅದಕ್ಕೆ ಬೇಕಾದ ವಾತಾವರಣವನ್ನು ಸೃಷ್ಟಿ ಮಾಡಿ ಕಾಶ್ಮೀರ ಕೇಸರಿ ಬೆಳೆಯಲಾಗುತ್ತದೆ. ಇದಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಹಾಕಲಾಗುವುದಿಲ್ಲ‌. ನೈಸರ್ಗಿಕವಾಗಿ ಇರುತ್ತದೆ. 20 ಕೆಜಿ ಕೇಸರಿ ಗಡ್ಡೆಯಲ್ಲಿ 30 ಗ್ರಾಂ ಕೇಸರಿ ಬರುತ್ತೆ‌. ಒಂದು ಗ್ರಾಂ ಕೇಸರಿಗೆ ಒಂದು ಸಾವಿರ ರೂಪಾಯಿಗೂ ಹೆಚ್ಚು ಮಾರಾಟವಾಗುತ್ತದೆ ಎಂದು ತಿಳಿಸಿದ್ದಾರೆ.

ಐದರಿಂದ ಏಳು ವರ್ಷಗಳ ವರೆಗೆ ಕೇಸರಿ ಗಡ್ಡೆ ಹೂಗಳನ್ನು ಬಿಡುತ್ತೆ. ಇದರಿಂದ ರೈತರಿಗೆ ಲಾಭವೂ ಸಿಗುತ್ತೆ. ಅಲ್ಲದೆ ಕ್ಯಾನ್ಸರ್ ಗೆ ಔಷಧೀಯ ಗುಣಗಳನ್ನು ಹೊಂದಿರುವ ಅಂಶಗಳು ಈ ಕೇಸರಿಯಲ್ಲಿದ್ದು ಮಾರುಕಟ್ಟೆಯಲ್ಲಿ ಕೇಸರಿಗೆ ಹೆಚ್ಚಿನ ಡಿಮ್ಯಾಂಡ್ ಇದೆ ಎಂದು ಹೇಳಿದ್ದಾರೆ.

ಕೇಸರಿಯನ್ನು ಸದ್ಯ ಮಾರಾಟ ಮಾಡದೆ ಸ್ನೇಹಿತರಿಗೆ ಬಳಸಲು ನೀಡಿ ಅವರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಗೆಡ್ಡೆಗಳನ್ನು ಫ್ರೀಜ್‌ನಲ್ಲಿ ಇಟ್ಟು ಕೇಸರಿ ಹೂವು ಬೆಳೆಸಬಹುದು ಎನ್ನುವುದು ಸುಳ್ಳು. ಅದಕ್ಕೆ ಕನಿಷ್ಠ ವಿಶಾಲ ಜಾಗ ಅಗತ್ಯವಿದ್ದು, ಕಾಶ್ಮೀರದಲ್ಲಿ ಕೇಸರಿ ಹೂವುಗಳನ್ನು ಬೆಳೆಯುವ ಪಾಂಪೋರ್ ಎನ್ನುವ ಪ್ರದೇಶದಲ್ಲಿ ಇರುವ 16 ಡಿಗ್ರಿ ಉಷ್ಣಾಂಶವನ್ನು ಕೊಠಡಿಯಲ್ಲಿ ಕಾಪಾಡಿಕೊಂಡಿದ್ದೇನೆ ಎಂದು ತಿಳಿಸಿದರು.

ಕೇಸರಿಯನ್ನು ಬೆಳೆಸುವ ವಿಧಾನ :

ಕೋಣೆಯಲ್ಲಿ ಇರಿಸಿರುವ ಉಷ್ಣಾಂಶ ನಿಯಂತ್ರಕವು ಗಾಳಿಯಲ್ಲಿ ತೇವಾಂಶದ ಮಟ್ಟವನ್ನು ಹೆಚ್ಚಿಸುತ್ತದೆ. ಹೂಬಿಡುವ ಸಮಯದಲ್ಲಿ ತಾಪಮಾನವು 6 ಡಿಗ್ರಿ ಸೆಲ್ಸಿಯಸ್‌ನಿಂದ 9 ಡಿಗ್ರಿ ಸೆಲ್ಸಿಯಸ್ ಮಿತಿಯಲ್ಲಿರಬೇಕು. ಇದರಿಂದ ಕೇಸರಿಯು ಉತ್ತಮವಾದ, ಪೋಷಕಾಂಶ-ಭರಿತ ಮಂಜಿನಿಂದ ಪೋಷಿಸಲ್ಪಡುತ್ತದೆ. ಕೇಸರಿ ಗಡ್ಡೆಗಳ ಸರಿಯಾದ ಬೆಳವಣಿಗೆಗೆ ವಾರಕ್ಕೊಮ್ಮೆ ನೀರುಣಿಸಬೇಕು.

ಮಾರುಕಟ್ಟೆ ಹೇಗೆ ?ಕಾಶ್ಮೀರದಲ್ಲಿ ಪ್ರತಿ ಗ್ರಾಂ ಕೇಸರಿಗೆ 900 ರೂ.ಗಳಿಂದ 1,500 ರೂ. ವರೆಗೆ ದರ ಇರುತ್ತದೆ. ಇದನ್ನು ಅಂಗಡಿಯವರು, ಬೇಕರಿಯವರು ಮತ್ತು ಅಡುಗೆಯವರು ಖರೀದಿ ಮಾಡುತ್ತಾರೆ.

ಕೇಸರಿಯಿಂದ ದೇಹಕ್ಕೆ ಶಕ್ತಿ : ಸಾಮಾನ್ಯವಾಗಿ ಕೇಸರಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳನ್ನು ತಯಾರಿಸಲು ಮತ್ತು ಬಾಣಂತಿಯರು ಸೇವಿಸುತ್ತಾರೆ. ಬಾಣಂತಿಯರು ಕೇಸರಿಯನ್ನು ಸೇವಿಸಿದರೆ ಮಗು ಬೆಳ್ಳಗೆ ಹುಟ್ಟುತ್ತದೆ ಎಂಬ ನಂಬಿಕೆ ಇದೆ. ಆದರೆ ಕೇಸರಿಯನ್ನು ಹಾಲಿಗೆ ಮಿಶ್ರಣ ಮಾಡಿ ಕುಡಿದರೆ ಆಯಾಸ ಹೋಗುತ್ತದೆ. ದೇಹಕ್ಕೆ ಶಕ್ತಿ ಬರುತ್ತದೆ ಎಂದು ಮಾಹಿತಿ ನೀಡಿದರು.

Ramesh Babu

Journalist

Recent Posts

ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ- ಆರ್.ವಿ. ಮಹೇಶ್

ದೊಡ್ಡಬಳ್ಳಾಪುರ: ಬರಗಾಲದ ಸಂದರ್ಭದಲ್ಲಿ ಜಲಮೂಲಗಳ ಸಂರಕ್ಷಣೆ ಹಾಗೂ ಕೆರೆಗಳ ಪುನಶ್ಚೇತನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುತ್ತಿರುವ ಕೆರೆ…

2 hours ago

ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ 18ರ ಹರೆಯದ ವಿದ್ಯಾರ್ಥಿ

ದೇವನಹಳ್ಳಿ: ಹಾಸ್ಟೆಲ್ ಕೊಠಡಿಯಲ್ಲಿ ಡಿಪ್ಲೋಮಾ ವಿದ್ಯಾರ್ಥಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಉಪಕರಣಾಗಾರ…

2 hours ago

ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ತೇಜಸ್ವಿನಿ.ಸಿ

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ…

3 hours ago

ಬರದ ನಡುವೆ ಜಾನುವಾರುಗಳಿಗೆ ಹಸಿರು ಆಸರೆ: 70 ಎಕರೆಯಲ್ಲಿ ಹಸಿಹುಲ್ಲು ಬೆಳವಣಿಗೆಗೆ ಜಿಪಂ ಕ್ರಮ: ಮತ್ತಷ್ಟು ಸರ್ಕಾರಿ ಜಮೀನು ಹುಲ್ಲುಗಾವಲಾಗಿ ಪರಿವರ್ತನೆ

ಬೆಂಗಳೂರು ಗ್ರಾಮಾಂತರ: ಮಳೆ ಕೈಕೊಟ್ಟ ಪರಿಣಾಮ ಕೃಷಿ ಬೆಳೆಗಳ ಜತೆಗೆ ಜಾನುವಾರುಗಳ ಮೇವಿನ ಮೇಲೂ ಬರದ ಕರಿನೆರಳು ಆವರಿಸುತ್ತಿರುವ ಹಿನ್ನೆಲೆಯಲ್ಲಿ…

15 hours ago

ನಕಲಿ ಔಷಧಿಗಳ ಮಾರಾಟ ಜಾಲದ ಕಿಂಗ್‌ಪಿನ್ ಪ್ರಶಾಂತ್ ಪೊಲೀಸರ ವಶಕ್ಕೆ

ದೇವನಹಳ್ಳಿ: ನಕಲಿ ಔಷಧಿಗಳ ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ, ಪ್ರಕರಣದ ಕಿಂಗ್‌ಪಿನ್ ಎಂದು ಪೊಲೀಸರು ಗುರುತಿಸಿರುವ ಪ್ರಶಾಂತ್…

1 day ago

ಒಂದು ವಾರದೊಳಗೆ ಮಳೆಯಾಗದಿದ್ದರೆ ಬಿತ್ತನೆಯಾದ ಬೆಳೆಗೂ ಕುತ್ತು | ರಾಗಿ, ಮೆಕ್ಕೆಜೋಳಕ್ಕೆ ತೇವಾಂಶದ ಕೊರತೆ | ಕೆರೆ-ಕುಂಟೆಗಳು ಖಾಲಿ, ಮೇವಿನ ಕೊರತೆಯ ಆತಂಕ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆಯ ಕೊರತೆಯಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಇದೀಗ ಮತ್ತೊಂದು ಆತಂಕ…

2 days ago