ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರದಲ್ಲಿ ಉದ್ಭವವಾಗಿರುವ ವಿವಾದ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ನೆರೆ ರಾಜ್ಯಕ್ಕೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ಹಲವು ಸಂಘಟನೆಗಳಿಂದ ಬೆಂಗಳೂರು ಬಂದ್ ಘೋಷಣೆ ಮಾಡಿ ಪ್ರತಿಭಟನೆ ನಡೆಸಲಾಯಿತು.
ಅದೇರೀತಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಬಿಎಸ್ ಚಂದ್ರಶೇಖರ್ ರವರ ನೇತೃತ್ವದಲ್ಲಿಂದು ಬೆಂಗಳೂರು ಬಂದ್ ಕರೆ ಬೆಂಬಲಿಸಿ ಮಾರಸಂದ್ರ ಟೋಲ್ ಬಳಿ ರಸ್ತೆ ತಡೆ ಮಾಡಿ ಕಾವೇರಿ ಹೋರಾಟಕ್ಕೆ ಸಂಘಟನೆಯಿಂದ ಬೆಂಬಲವನ್ನು ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ.ಎಸ್.ಚಂದ್ರಶೇಖರ್ ಅವರು ಮಾತನಾಡಿ, ಕಾವೇರಿ ಹೋರಾಟದ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳದೆ ಇದ್ದ ಪಕ್ಷದಲ್ಲಿ ನಮ್ಮ ಸಂಘಟನೆ ನಿರಂತರವಾಗಿ ಉಗ್ರವಾದ ಹೋರಾಟ ಮಾಡುತ್ತದೆ ಎಂದು ಎಚ್ಚರಿ ನೀಡಿದರು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್, ಉಪಾಧ್ಯಕ್ಷ ಆರಾಧ್ಯ, ರಾಜ್ಯ ಘಟಕದ ದೊಡ್ಡೇಗೌಡ, ಖಜಾಂಚಿ ಚೇತನ್ ಗೌಡ, ನಾಗೇಶ್, ನರೇಂದ್ರ, ವಾಸು, ಚಂದ್ರು, ಪುನೀತ್, ಭುವನ್, ತಾಲೂಕು ಯುವ ಘಟಕದ ಅಧ್ಯಕ್ಷರಾದ ರಂಜಿತ್ ಕುಮಾರ್, ಬಸವರಾಜ್, ಅಂಬರೀಶ್, ಲಕ್ಷ್ಮಿಕಾಂತ್, ಆಟೋ ಘಟಕದ ತನ್ವೀರ್ ಹಾಗೂ ಪದಾಧಿಕಾರಿಗಳು, ಮಹಿಳಾ ಘಟಕದ ಅಧ್ಯಕ್ಷರಾದ ರಾಧಮ್ಮ, ಗಂಗಮ್ಮ ಹಾಗೂ ಹೊಸಹಳ್ಳಿ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.