ಕಾವೇರಿ ನದಿ ನೀರಿನ ಹೋರಾಟ: ಸೆ.26ಕ್ಕೆ ಬೆಂಗಳೂರು ಬಂದ್: ಓಲಾ-ಊಬರ್ ಸಂಘಟನೆ ಬಂದ್ ಗೆ ಬೆಂಬಲ

ಕಾವೇರಿ ನದಿ ನೀರಿನ ಹೋರಾಟ ಇಡೀ ಕರ್ನಾಟಕದಾದ್ಯಂತ ವ್ಯಾಪಿಸುತ್ತಿದೆ. ಇದೇ ಸೆಪ್ಟೆಂಬರ್ 26ರಂದು ಮಂಗಳವಾರ ಬೆಂಗಳೂರು ಬಂದ್ ಗೆ ಹಲವು ಸಂಘಟನೆಗಳು ಕರೆ ನೀಡಿವೆ. ಈ ಹಿನ್ನೆಲೆ ಬೆಂಗಳೂರು ಬಂದ್‌ಗೆ ಓಲಾ-ಊಬರ್ ಸಂಘಟನೆ ಕೂಡ ಬೆಂಬಲ ಸೂಚಿಸಿದೆ.

ಈ‌ ಕುರಿತಂತೆ ಓಲಾ-ಊಬರ್ ಸಂಘಟನೆಯ ಅಧ್ಯಕ್ಷ ತನ್ವೀರ್ ಪಾಷಾ ಮಾತನಾಡಿ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ಓಲಾ-ಊಬರ್ ಸಂಘಟನೆ ಖಂಡಿಸುತ್ತದೆ. ನಾಡು-ನುಡಿ-ಜಲ ವಿಷಯ ಬಂದಾಗ ನಮ್ಮ ಹೋರಾಟ ಸದಾ‌ ಇದ್ದೇ ಇರುತ್ತದೆ. ಹೀಗಾಗಿ ಬೆಂಗಳೂರು ಬಂದ್‌ಗೆ ನಾವು ಸಂಪೂರ್ಣವಾಗಿ ಬೆಂಬಲ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *