ವಿಧಾನಸಭಾ ಚುನಾವಣೆ ಹಿನ್ನೆಲೆ, ಇಂದು ನಾಮಪತ್ರ ಸಲ್ಲಿಸುವುದಕ್ಕೆ ಕೊನೆ ದಿನವಾಗಿದೆ. ಈಗಾಗಲೇ ಟಿಕೆಟ್ ಪಡೆದ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವುದಕ್ಕಿಂತ ಮುನ್ನಾ ಅಪಾರ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸುವುದರ ಮೂಲಕ ಶಕ್ತಿ ಪ್ರದರ್ಶನ ನಡೆಸಿ ಜೈಕಾರ ಹಾಕಿಸಿಕೊಂಡು ಕಾರ್ಯಕರ್ತರಿಗೆ ಹುಮ್ಮಸ್ಸು ನೀಡಿದ್ದಾರೆ.
ಇಂದು ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಬಿ.ಮುನೇಗೌಡ ಅಪಾರ ಕಾರ್ಯಕರ್ತರನ್ನು ಒಗ್ಗೂಡಿಸಿ, ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಬಿರು ಬಿಸಿಲಿನ ಬೇಗೆ ತಣಿಸಲು ಕಾರ್ಯಕರ್ತರಿಗೆ ವಿತರಿಸಲು
ತಂದಿದ್ದ ಮಜ್ಜಿಗೆ ಹಾಗೂ ನೀರಿನ ಪ್ಯಾಕೆಟ್ ಗಳನ್ನು ಪ್ರಾಣಿಗಳಿಗೆ ಎಸೆದಂತೆ ಕಾರ್ಯಕರ್ತರಿಗೆ ಎಸೆದು ಅಮಾನವೀಯಾಗಿ ಜೆಡಿಎಸ್ ಮುಖಂಡರು ನಡೆದುಕೊಂಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಕಾರ್ಯಕರ್ತರ ಮುಂದೆ ಮೊಸಳೆ ಕಣ್ಣೀರು ಸುರಿಸಿ, ಹಿಂದೆ ಕಾರ್ಯಕರ್ತರನ್ನು ಹೀನಾಯವಾಗಿ ನಡೆಸಿಕೊಂಡರಾ..? ಎಂಬ ಮಾತನ್ನು ಕಾರ್ಯಕರ್ತರು ಪಿಸುಗುಟ್ಟಿಕೊಂಡು ಬಂದ ದಾರಿಗೆ ಸುಂಕ ಇಲ್ಲದೇ ಸಪ್ಪೆಮೊರೆ ಹಾಕಿಕೊಂಡು ಮನೆಗಳಿಗೆ ಹೊರಟ ಕಾರ್ಯಕರ್ತರು.