ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಕ್ಸಿಡಿ ಕಂಪನಿಯ ಆಡಳಿತದ ಮಂಡಳಿಯ ವಿರುದ್ಧದ ಸಿಐಟಿಯು ನೇತೃತ್ವದ ಎಕ್ಷಿಡಿ ಕ್ಲಚ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಸೋಮವಾರ ಕಂಪನಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕಂಪನಿಯ ಯೂನಿಯನ್ ಅಧ್ಯಕ್ಷ ಹರೀಶ್ ಮಾತನಾಡಿ, ಸುಮಾರು ಒಂದುವರೆ ವರ್ಷದ ಹಿಂದೆಯಿಂದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸಾಕಷ್ಟು ಬಾರಿ ಮನವಿಗಳನ್ನು ಕೊಟ್ಟರೂ ಈಡೇರಿಸಲು ಕಂಪನಿಯ ಆಡಳಿತ ಮಂಡಳಿ ಸಿದ್ದವಾಗಿಲ್ಲ. ಕಾರ್ಮಿಕರ ಮತ್ತು ಆಡಳಿತ ಮಂಡಳಿಯ ಮಧ್ಯೆ ಸುಮಾರು 30 ರಿಂದ 40 ಸಭೆಗಳು ಆಗಿವೆ ಒಂದು ಬೇಡಿಕೆಯನ್ನು ಸಹ ಈಡೇರಿಸಲು ಸಾಧ್ಯವಾಗಲಿಲ್ಲ ಈ ಸಂಬಂಧವಾಗಿ ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಕಾರ್ಮಿಕ ಜಿಲ್ಲಾ ಆಯುಕ್ತರಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಅನಿವಾರ್ಯವಾಗಿ ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುವ ಸಂದರ್ಭ ಬಂದಿದೆ ಎಂದು ತಿಳಿಸಿದರು.

ಕಾರ್ಮಿಕರ ಬೇಡಿಕೆಗಳನ್ನು ನಿರಂತರವಾಗಿ ಆಡಳಿತ ಮಂಡಳಿ ನಿರಾಕರಿಸಿಕೊಂಡು ಬಂದಿದೆ ವೇತನ ಹೆಚ್ಚಳದ ಸಂಬಂಧಿಸಿದಂತೆ ಕಾನೂನಿನಲ್ಲಿ ಇದ್ದರೂ ಜಾರಿ ಮಾಡಲು ಹಿಂದೇಟು ಹಾಕಿದ್ದಾರೆ. ಕಾರ್ಖಾನೆಯ ದೃಢೀಕೃತ ಸ್ಥಾಯಿ ಆದೇಶಗಳನ್ನು ಪಾಲಿಸುವ ಪತ್ರಕ್ಕೆ ಸಂಘದ ಸದಸ್ಯರು ಸಹಿ ಹಾಕಿದ್ದರೂ ಕಂಪನಿಯಲ್ಲಿನ ಹಿಂದೆ ಇದ್ದ 17 ಜನ ಕಾರ್ಮಿಕರನ್ನು ವೇತನ ಸಮಾನತೆಯೊಂದಿಗೆ ಕಾರ್ಮಿಕರ ಗ್ರೇಡಿಗೆ ಅವರನ್ನು ತರಬೇಕು ಅವರಿಗೆ ಸಮಾನ ಸೇವಾವಧಿಯ ಕಾರ್ಮಿಕರಿಗೆ ನೀಡುವ ವೇತನಕ್ಕೆ ಸಮಾನವಾಗಿ ವೇತನ ಅವರಿಗೂ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರ ಬೇಡಿಕೆಗಳ ಬಗ್ಗೆ ಜೆಡಿ, ಆಡಳಿತ ಮಂಡಳಿ, ಸಂಘದ ಪದಾಧಿಕಾರಿಗಳೊಂದಿಗೆ ಪರಸ್ಪರ ಮಾತುಕತೆ ಮೂಲಕ ಈಡೇರಿಸಬೇಕು ಸಂಘದ ಸದಸ್ಯತ್ವದ ಶುಲ್ಕವನ್ನು ಮಾಸಿಕ ವೇತನದಿಂದ ಕಡಿತಗೊಳಿಸಿ ಸಂಘದ ಖಾತೆಗೆ ನೇರವಾಗಿ ನೀಡಬೇಕು ಇಲ್ಲದೇ ಹೋದರೆ ಬೇರೆ ಮಾರ್ಗದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕಾಗುತ್ತದೆ ಎಂದು ಕಂಪನಿಯ ಆಡಳಿತ ಮಂಡಳಿಯ ವಿರುದ್ಧ ಗುಡುಗಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ ಕಾರ್ಮಿಕ ಬೇಡಿಕೆಗಳ ಬಗ್ಗೆ ಟ್ರೇಡ್ ಯೂನಿಯನ್ ಜೊತೆ ಚರ್ಚೆ ಮಾಡದಿರುವುದು ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ ಕಾರ್ಮಿಕರ ಸಂಬಳದಿಂದ ಪರಸ್ಪರ ಕಡಿತಗೊಳಿಸುವುದು, ಸುಳ್ಳು ದೂರುಗಳ ಆಧಾರದ ಮೇಲೆ ಅವರ ಮೇಲೆ ಕೇಸ್ ನೀಡುವುದು, ಅಮಾನತು, ಶಿಸ್ತು ಕ್ರಮ ವಹಿಸುವುದು ಆಡಳಿತದ ಕೆಲಸವಾಗಬಾರದು ಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳುಬೇಕು ಕಾರ್ಮಿಕರ ಮತ್ತು ಯೂನಿಯನ್ ಸದಸ್ಯರ ವಿರುದ್ಧ ಕ್ರಮ ವಹಿಸಬಾರದು ಉದ್ಯೋಗ ಒಪ್ಪಂದಗಳನ್ನು ಉಲ್ಲಂಘಿಸಿ ಗುತ್ತಿಗೆ ಕಾರ್ಮಿಕರ ಬಲವಂತದ ಉದ್ಯೋಗವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಕ್ಷಿಡಿ ಕ್ಲಚ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಪ್ರಮೋದ್, ಉಪಾಧ್ಯಕ್ಷರಾದ ರಮೇಶ್, ಶರತ್ ಖಜಾಂಚಿ ಮಂಜುನಾಥ್, ಸಹಕಾರ್ಯದರ್ಶಿ ಪೃಥ್ವಿ, ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಬಿ ಕೃಷ್ಣಪ್ಪ, ಕಾರ್ಯದರ್ಶಿ ಎಂ.ಭೀಮರಾಜ್ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *