ಕಾರು ಮತ್ತು ಕುರಿ ತುಂಬಿದ್ದ ಟೆಂಪೊ ನಡುವೆ ಭೀಕರ ಅಪಘಾತವಾಗಿರೋ ಘಟನೆ ನೆಲಮಂಗಲ ರಸ್ತೆಯ 11ನೇ ಮೈಲಿ ಹಾಗೂ ಕಾಡನೂರು ಮಾರ್ಗ ಮಧ್ಯೆ ಇಂದು ಸಂಜೆ ನಡೆದಿದೆ.
ಡಿಕ್ಕಿ ರಭಸಕ್ಕೆ ಕುರಿಗಳನ್ನು ಸಾಗಿಸುತ್ತಿದ್ದ ಟೆಂಪೋ ಪಲ್ಟಿಯಾಗಿದ್ದು, ಕೆಲ ಕುರಿಗಳು ಸಾವನ್ನಪ್ಪಿವೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.