ದೊಡ್ಡಬಳ್ಳಾಪುರ: ಕಾರಿನ ಗಾಜು ಒಡೆದು ವ್ಯಾನಿಟಿಬ್ಯಾಗ್ ನಲ್ಲಿಟ್ಟಿದ್ದ 80 ಸಾವಿರ ಮೌಲ್ಯದ 13 ಗ್ರಾಂ ಚಿನ್ನಾಭರಣ ದೋಚಿರುವ ಘಟನೆ ದೇವನಹಳ್ಳಿ ರಸ್ತೆಯ ಖಾಸಗಿ ರೆಸಾರ್ಟ್ ನಲ್ಲಿ ನಡೆದಿದೆ.
ವಿಶ್ವನಾಥಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಹಶಿಕ್ಷಕಿಯಾಗಿರುವ ತೇಜಮಣಿ ಅವರು ಸಹವರ್ತಿ ಶಿಕ್ಷಕರೊಂದಿಗೆ ಭಾನುವಾರ ರಾತ್ರಿ ಪರಿಚಯಸ್ಥರ ಮದುವೆ ಹೋಗಿದ್ದರು. ರಾತ್ರಿ ತಮ್ಮ ವ್ಯಾನಿಟಿ ಬ್ಯಾಗ್ ನ್ನು ಕಾರಿನಲ್ಲಿಟ್ಟು ಆರತಕ್ಷತೆಗೆ ತೆರಳಿದ್ದ ತೇಜಮಣಿ ಅವರು ಅದೇ ರಾತ್ರಿ ಸುಮಾರು 9:30ಕ್ಕೆ ಬಂದು ನೋಡಿದಾಗ ಕಾರಿನ ಹಿಂಬದಿಯ ಗಾಜು ಒಡೆದಿತ್ತು, ವ್ಯಾನಿಟಿ ಬ್ಯಾಗ್ ನಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಸರ, ಒಂದೂವರೆ ಗ್ರಾಮ ತೂಕದ ಫಿಷ್ ಪೆಂಡೆಂಟ್, ಮೂರುವರೆ ತೂಕದ ಸ್ಟಡ್(ವೈಟ್ ಸ್ಟೋನ್) ನ್ನು ಕಳ್ಳರು ದೋಚಿದ್ದಾರೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.