ಕೊಡಗಿನ ವಿರಾಜಪೇಟೆ ಸಮೀಪದ ಪೂದ್ದುಮಾಣಿ ಗ್ರಾಮದಲ್ಲಿ ಕಾಫಿ ಕೊಯುವ ಸಂದರ್ಭದಲ್ಲಿ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಓರ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ಹೆಚ್ ಸಿ ಲೋಹಿತ್(32), ಮೃತಪಟ್ಟ ದುರ್ದೈವಿ. ನಿನ್ನೆಯಿಂದ ನಾಪತ್ತೆಯಾಗಿದ್ದ ಲೋಹಿತ್ ನನ್ನು ಹುಡುಕಾಡುತ್ತಿದ್ದಾಗ ಇಂದು ಕಾಫಿ ತೋಟದಲ್ಲಿ ಮೃತ ದೇಹ ಪತ್ತೆಯಾಗಿದೆ.
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.