ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ನ್ಯಾಯಾಧೀಶ ಸಂದೀಪ್ ಸಾಲಿಯಾನ ಆದೇಶದ ಮೇರೆಗೆ ಕಾನೂನು ಸೇವಾ ಪ್ರಾಧಿಕಾರ ತಂಡ ತಾಲೂಕಿನ ಮಧುರನಹೊಸಹಳ್ಳಿ, ಹಾದ್ರೀಪುರ, ನಾರನಹಳ್ಳಿ ಸೇರಿ 7 ಗ್ರಾಮಗಳಲ್ಲಿನ ಅಂಗನವಾಡಿ ಮತ್ತು ಶಾಲಾಗಳಿಗೆ ಭೇಟಿ ನೀಡಿ ಇಂದು ಸ್ವಚ್ಛತೆ, ಶಾಲಾ ಆವರಣ, ಶಾಲಾ ಕೊಠಡಿ, ಮಕ್ಕಳಗೆ ನೀಡುವ ಆಹಾರ ಪದಾರ್ಥಗಳು ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಲಾಯಿತು.
ಅಂಗನವಾಡಿ ಕೇಂದ್ರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಬಾಗಿಲು, ಕೊಠಡಿಯನ್ನು ತಕ್ಷಣ ಸರಿ ಪಡಿಸುವಂತೆ ಸೂಚನೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಯಿತು.
ಕಳೆದ ಒಂದು ವರ್ಷದಿಂದ ಚರಂಡಿ ಸ್ವಚ್ಚತೆ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪ ಹಿನ್ನೆಲೆ, ಗ್ರಾಮದಲ್ಲಿನ ಚರಂಡಿ, ಕುಡಿಯುವ ನೀರಿನ ವ್ಯವಸ್ಥೆಯನ್ನ ಸಹ ಪರಿಶೀಲನೆ ಮಾಡಲಾಯಿತು.
ಸ್ವಚ್ಚತೆಗೆ ಮೊದಲ ಆದ್ಯತೆ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರದಿಂದ ಗ್ರಾಮ ಪಂಚಾಯಿತಿ ಪಿಡಿಒಗೆ ಸೂಚನೆ ನೀಡಲಾಯಿತು.