ಕಾನೂನು ಬಾಹಿರ ಜಮೀನು ಮಂಜೂರಾತಿ ಆಗಿರುವುದನ್ನು ವಜಾ ಮಾಡಬೇಕು- ಕೆರೆ ಒತ್ತುವರಿ ತೆರವು-ಅಕ್ರಮ ಮದ್ಯ ಮಾರಾಟ ನಿಷೇಧ ಮಾಡಬೇಕು- ಯು.ಮುನಿರಾಜು ಒತ್ತಾಯ

ಕಾನೂನು ಬಾಹಿರವಾಗಿ ಜಮೀನು ಮಂಜೂರಾತಿ ಆಗಿರುವುದನ್ನ ವಜಾ ಮಾಡಬೇಕು, ಪಾಲನಜೋಗಹಳ್ಳಿ, ತಮ್ಮಶೆಟ್ಟಿಹಳ್ಳಿ, ರೋಜಿಪುರ ಮತ್ತು ಬಾಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವು ಮಾಡ ಬೇಕು, ಅರೇಹಳ್ಳಿ ಗುಡ್ಡದಹಳ್ಳಿ ನಿವಾಸಿಗಳಿಗೆ ಹಕ್ಕುಪತ್ರ ನೀಡ ಬೇಕು ಮತ್ತು ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಯು.ಮುನಿರಾಜು ಒತ್ತಾಯಿಸಿ ಧರಣಿ ಸತ್ಯಾಗ್ರಹವನ್ನ ನಡೆಸಿದರು.

ಸರ್ಕಾರಿ ಜಾಗ ಮತ್ತು ಕೆರೆಯನ್ನ ಭೂಗಳ್ಳರಿಂದ ರಕ್ಷಣೆ ಮಾಡುವಂತೆ ಒತ್ತಾಯಿಸಿ ಪ್ರಬುದ್ಧ ಕರ್ನಾಟಕ ಭೀಮಸೇನೆ ದೊಡ್ಡಬಳ್ಳಾಪುರ ತಹಶೀಲ್ದಾರ್ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹವನ್ನ ಮಾಡಿದರು.

ಸರ್ಕಾರಿ ಜಾಗವನ್ನ ಅಧಿಕಾರಿಗಳು ಉಳಿಸದಿದ್ದಾರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ನೀಡಿದರು.

ಪ್ರತಿಭಟನೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷರಾದ ಯು.ಮುನಿರಾಜು, ಅರೇಹಳ್ಳಿ ಗುಡ್ಡದಹಳ್ಳಿಯ ಸರ್ವೆ ನಂಬರ್ 57ರ 6 ಎಕರೆ ಜಮೀನನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದೆ, ದಾಖಲೆಗಳನ್ನ ಪರಿಶೀಲಿಸಿ ಮಂಜೂರಾತಿಯನ್ನ ವಜಾ ಮಾಡಬೇಕು, ಪಾಲನಜೋಗಹಳ್ಳಿಯ ಸರ್ವೆ ನಂಬರ್ 63 ಮತ್ತು23ರಲ್ಲಿರುವ ಕೆರೆಯನ್ನ ಒತ್ತುವರಿ ಮಾಡಿ ಲೇಔಟ್ ಸಂಪರ್ಕಕ್ಕಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಬಫರ್‌ಝೂನ್‌ನಲ್ಲಿ ಲೇಔಟ್ ನಿರ್ಮಾಣ ಮಾಡಿ ನಿವೇಶನಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂದರು.
ತಮ್ಮಶೆಟ್ಟಿಹಳ್ಳಿ, ರೋಜಿಪುರ ಮತ್ತು ಬಾಶೆಟ್ಟಿಹಳ್ಳಿಯ ಕೆರೆಗಳನ್ನ ಒತ್ತುವರಿ ಮಾಡಲಾಗಿದೆ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ದಾಖಲೆಗಳನ್ನ ಪರಿಶೀಲನೆ ಮಾಡಿ ಕೆರೆಯ ಗಡಿಯನ್ನ ಗುರುತಿಸಿ ಒತ್ತುವರಿಯನ್ನ ತೆರವು ಮಾಡಬೇಕು. ಅರೇಹಳ್ಳಿ ಗುಡ್ಡದಹಳ್ಳಿಯ ಸರ್ವೆ ನಂಬರ್ 86ರ 2-16 ಎಕರೆ ಜಾಗದಲ್ಲಿ ಬಡವರು ಗುಡಿಸಲುಗಳನ್ನ ಹಾಕಿಕೊಂಡು ಕಳೆದ 40 ವರ್ಷದದಿಂದ ವಾಸ ಮಾಡುತ್ತಿದ್ದಾರೆ, ಅವರಿಗೆ ಹಕ್ಕುಪತ್ರಗಳು ಮತ್ತು ಪಂಚಾಯಿತಿಯಿಂದ ಫಾರಂ ನಂ 9 ಮತ್ತು 11 ನೀಡುವಂತೆ ಒತ್ತಾಯಿಸಿದರು
ತಾಲೂಕಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದ್ದು, ಸಿಎಲ್-7 ಬಾರ್ ಅಂಡ್ ರೆಸ್ಟೋರೆಂಟ್ ಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ, ಇದರಿಂದ ಯುವಕರು ಮದ್ಯ ವ್ಯವಸನಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ, ಬಾರ್ ಗಳಿಗೆ ಲೇಸೆನ್ಸ್ ನೀಡಬಾರದೆಂದ್ದು ಒತ್ತಾಯಿಸದರು, ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಅಬಕಾರಿ ಇನ್ಸ್ ಪೇಕ್ಟರ್ ರಾಘವೆಂದ್ರ ಮನವಿ ಸ್ವೀಕರಿಸಿ ಕ್ರಮ ತೆಗೆದುಕೊಳ್ಳುವ ಭರವಸೆಯನ್ನ ನೀಡಿದರು.
ಪ್ರತಿಭಟನೆಯಲ್ಲಿ ವಕೀಲರಾದ ಪುಟ್ಟೇಗೌಡ, ಗೌರವ ಅಧ್ಯಕ್ಷರಾದ ವಿ.ನಾಗರಾಜು, ಜಿಲ್ಲಾಧ್ಯಕ್ಷರಾದ ಎ.ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಮುನಿರಾಜು, ಜಿಲ್ಲಾ ಉಪಾಧ್ಯಕ್ಷರಾದ ನಾಗರಾಜು.ವೈ.ಸಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಪ್ಪಯ್ಯಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸಂಚಾಲಕರಾದ ರವಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ವೆಂಕಟರಮಣಪ್ಪ, ತಾಲೂಕು ಉಪಾಧ್ಯಕ್ಷರಾದ ರಾಮಕೃಷ್ಣ, ಹೋಬಳಿ ಅಧ್ಯಕ್ಷ ನರಸಿಂಹಮೂರ್ತಿ, ರಾಜ್ಯ ಕಾರ್ಯದರ್ಶಿ ಮುನಿರಾಜು ಇದ್ದರು.

Leave a Reply

Your email address will not be published. Required fields are marked *