ಕಾನೂನು ತೊಡಕು- ಬಿ.ಸಿ.ಆನಂದ್ ಗೆ ಮತ ಹಾಕಿದರೆ ವ್ಯರ್ಥ- ದಿ.ಎಚ್ ಅಪ್ಪಯ್ಯಣ್ಣನವರಿಗೆ ಶಾಂತಿ ಸಿಗಬೇಕಾದರೆ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಆನಂದ್ ಗೆಲ್ಲಿಸಿ- ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ

ಮೇ.25ರಂದು ನಡೆಯಲಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್)ದ ನಿರ್ದೇಶಕ ಸ್ಥಾನದ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಜೆಡಿಎಸ್ ಪಕ್ಷದಿಂದ ಹುಸ್ಕೂರ್ ಆನಂದ್ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಕ್ರಮ ಸಂಖ್ಯೆ. 2, ಗುರುತು, ಹಣ್ಣಿನ‌ ಬುಟ್ಟಿ ಗುರುತು. ದಿ.ಎಚ್.ಅಪ್ಪಯ್ಯಣ್ಣನವರಿಗೆ ಆತ್ಮಕ್ಕೆ ಶಾಂತಿ ಹಾಗೂ ನ್ಯಾಯ ಒದಗಿಸಲು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಹೇಳಿದರು.

ಕೆಲವರು ಜೆಡಿಎಸ್ ದೊಡ್ಡಬಳ್ಳಾಪುರದಲ್ಲಿ‌ ಇಲ್ಲ ಎಂದು ಮೂದಲಿಸಿದ್ದಾರೆ. ಬಮೂಲ್ ಚುನಾವಣೆಗೆ ಜೆಡಿಎಸ್ ನಿಂದ ಸೂಕ್ತ ಅಭ್ಯರ್ಥಿ ಯಾರೂ ಇಲ್ಲ ಎಂದು ಹೇಳಿದ್ದಾರೆ.. ಅದಕ್ಕೆ ನಾವು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ. ನೂರಕ್ಕೆ ನೂರರಷ್ಟು ಜೆಡಿಎಸ್ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆ ಎಂದರು.

ಬಿಜೆಪಿಯವರು ಹುಸ್ಕೂರ್ ಆನಂದ್ ಅವರಿಗೆ ವಿಪರೀತ ತೊಂದರೆ ಕೊಟ್ಟಿದ್ದಾರೆ… ಅಪ್ಪಯ್ಯಣ್ಣನವರಿಗೆ ಶಾಂತಿ ಸಿಗಬೇಕಾದರೆ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಬಿಜೆಪಿ ಅಭ್ಯರ್ಥಿ ಬಿ.ಸಿ ಆನಂದ್ ಅವರಿಗೆ ವೋಟ್ ಮಾಡಿ ನಿರಾಸೆ ಮಾಡಿಕೊಳ್ಳಬೇಡಿ, ನಿಮ್ಮ ವೋಟ್ ನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದರು.

ದೊಡ್ಡಬಳ್ಳಾಪುರ ತಾಲೂಕು ಯಾವುದೇ ಚುನಾವಣೆ ಬಂದರೂ ವಿಶೇಷ ಪಾತ್ರ ವಹಿಸುತ್ತದೆ. ಈ ಹಿಂದೆ ಬಮೂಲ್ ಚುನಾವಣೆಯಲ್ಲಿ ದಿ.ಅಪ್ಪಯ್ಯಣ್ಣನವರು ನೋವು ಅನುಭವಿಸಿದ್ದರು. ಆ ನೋವಿನಿಂದ ಹೊರ ಬರಲು ಒಮ್ಮತವಾಗಿ ಹುಸ್ಕೂರ್ ಆನಂದ್ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು‌ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದರು.

ಹುಸ್ಕೂರ್ ಆನಂದ್ ಸ್ಪರ್ಧೆ ಮಾಡುವುದಕ್ಕೆ ಯಾರೆಲ್ಲಾ ತೊಂದರೆ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ… ವೋಟ್ ಮಾಡುವವರು ರೈತಾಪಿ ವರ್ಗ. ಅವರ ಶಕ್ತಿ ತುಂಬುವ ಕಾರ್ಯ ಮಾಡುತ್ತೇವೆ. ಇನ್ನೂ ಕೇವಲ 96 ಗಂಟೆ ಬಾಕಿ ಇದೆ. ನಾವು ಸಾಕಷ್ಟು ಕೆಲಸ ಮಾಡಬೇಕಾಗಿದೆ. ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ ಎಂದರು.

ಕಾಂಗ್ರೆಸ್ ಮುಖಂಡರು ಬಮೂಲ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ಕುರಿತು ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದರು.

ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಆನಂದ್ ಮಾತನಾಡಿ, ಕೆಲವರು ಬೇಕಂತಲೇ ನನ್ನ ಮೇಲೆ 8 ಕೇಸ್ ಹಾಕಿ ಕಿರುಕುಳ ಮಾಡಿದ್ದಾರೆ… ಸ್ಪರ್ಧೆ ಮಾಡಲು ಕೋರ್ಟ್ ನಿಂದ ಆದೇಶ ತಂದಿದ್ದೇನೆ.  ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡರು, ಮುಖಂಡರು, ಕಾರ್ಯಕರ್ತರು ನೀವೇ ಸೂಕ್ತ ಹಾಗೂ ಉತ್ತಮ‌ ಅಭ್ಯರ್ಥಿ ಎಂದು ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರ ನಿರ್ಧಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಗೆಲುವಿಗೆ ಎಲ್ಲರು‌ ಸಹಕರಿಸಬೇಕು. ಅಧಿಕಾರಕ್ಕೆಬಂದ ಮೇಲೆ‌ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಯೋಜನೆ ನಿರೂಪಿಸಿದ್ದೇನೆ ಎಂದರು.

ಈ ವೇಳೆ ಎ.ನರಸಿಂಹಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ನಗರ ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ, ಬೆಂ.ಗ್ರಾ ಮಹಿಳಾ ವಕ್ತಾರೆ ಶಶಿಕಲಾ, ಹೋಬಳಿ ಅಧ್ಯಕ್ಷರಾದ ಜಗನ್ನಾಥ ಚಾರಿ, ರಂಗಸ್ವಾಮಿ, ಸತೀಶ್, ಸಿದ್ದಪ್ಪ, ರಾಜಗೋಪಾಲ್, ಜಗದೀಶ, ಅಶ್ವತ್ಥನಾರಾಯಣ್  ಸೇರಿದಂತೆ ಇತರರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!