
ಇಂದು(ಅ.12) ದೊಡ್ಡಬಳ್ಳಾಪುರ ತಾಲೂಕಿನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೆಪಿಸಿಸಿ ವಕ್ತಾರ ಲಕ್ಷ್ಮಿಪತಿ ಅವರ ಹುಟ್ಟುಹಬ್ಬ ಆಚರಣೆ.

ಲಕ್ಷ್ಮಿಪತಿ ಅವರ ಹುಟ್ಟುಹಬ್ಬ ಆಚರಣೆ ಮಾಡಲು ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ. ಈ ಹಿನ್ನೆಲೆ ಇಂದು ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಹಿತೈಶಿಗಳು ಸೇರಿದಂತೆ ಇತರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಲಕ್ಷ್ಮೀಪತಿಯವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಲಾಗುತ್ತಿದೆ. ಅದೇರೀತಿ ನಾವು ವಿಭಿನ್ನವಾಗಿ ಜನ್ಮದಿನದ ಶುಭಾಶಯ ಕೋರಲು 50, 100 ರೂ. ಮುಖಬೆಲೆಯ ನೋಟಿನ ಹಾರ ಸಿದ್ಧಪಡಿಸಿದ್ದೇವೆ ಎಂದು ವಕೀಲ ಮನು ಆರ್.ವಿ ಹೇಳಿದ್ದಾರೆ.

ಅದೇರೀತಿ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ವಯೋವೃದ್ಧರಿಗೆ ಉಲ್ಲನ್ ಕಂಬಳಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು….

ನಗರದ ಹಲವೆಡೆ ಲಕ್ಷ್ಮಿಪತಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಕಟೌಟ್ ಗಳು, ಬ್ಯಾನರ್ ಗಳು ರಾರಾಜಿಸುತ್ತಿವೆ.