ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೊಂದಲ ಸೃಷ್ಟಿಯಾಗಿದೆ. ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಗೆದ್ದಿರುವ ಸರ್ಕಾರವು ಜನರಿಗೆ ಗ್ಯಾರಂಟಿ ಸೌಲಭ್ಯ ತಲುಪಿಸುವಲ್ಲಿ ವಿಫಲವಾಗುತ್ತಿದೆ. ಜನರಿಂದ ಟ್ಯಾಕ್ಸ್ ಮೂಲಕ ಹಣ ಪಡೆದು ನಮ್ಮ ಸರ್ಕಾರ ಎಲ್ಲಾ ಫ್ರೀ ನೀಡುತ್ತದೆ ಎಂದು ನಂಬಿಸಿ ಜನರಿಗೆ ಮೋಸ ಮಾಡುತ್ತಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನಗರದ ಡಿಕ್ರಾಸ್ ಬಳಿ ಶಾಸಕ ಧೀರಜ್ ಮುನಿರಾಜ್ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಸ್ಕಾಂ ಡೆಪಾಸಿಟ್ ದರ ಶೇ.65ರಷ್ಟು ಹೆಚ್ಚು ಮಾಡಲಾಗಿದೆ. ಗ್ಯಾರಂಟಿ ಸೌಲಭ್ಯ ಘೋಷಣೆ ವೇಳೆ ಯಾವ ಮಾನದಂಡ ಅನುಸರಿಸಲಿಲ್ಲ, ಈಗ ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಜಿಎಸ್ ಟಿ ಬಿಲ್ ಸೇರಿದಂತೆ ಇತರೆ ಮಾನದಂಡಗಳನ್ನು ಜನರ ಮೇಲೆ ಹೇರಿ ಗ್ಯಾರಂಟಿ ಸೌಲಭ್ಯ ಜನರಿಗೆ ತಲುಪದ ರೀತಿ ಮಾಡಲಾಗುತ್ತಿದೆ ಎಂದರು.
ಸಚಿವ ಚೆಲುವರಾಯಸ್ವಾಮಿ ಹೇಳಿದ ಹಾಗೆ ನಾವು ವೋಟ್ ಗಾಗಿ ಗ್ಯಾರಂಟಿ ಸೌಲಭ್ಯ ಗಿಮಿಕ್ ಮಾಡಿದ್ದೇವೆ ಎಂದಿದ್ದಾರೆ. ಅವರು ಹೇಳಿದಾಗೆ ಗಿಮಿಕ್ ಮಾಡಿ ಜನರಿಗೆ ಟೋಪಿ ಹಾಕುವ ಕೆಲಸ ಮಾಡಿದ್ದಾರೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಗುಡುಗಿದ್ದಾರೆ.
ಈ ಹಿಂದೆ ಜೆಡಿಎಸ್ ಜೊತೆ ನಾವಷ್ಟಕ್ಕೆ ನಾವೆ ಹೋಗಿ ಮೈತ್ರಿ ಮಾಡಿ ಸರ್ಕಾರ ರಚನೆ ಮಾಡಿಲ್ಲ, ಜೆಡಿಎಸ್ ನವರೆ ಬಂದು ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಸಿಎಂ ಆಗಿದ್ದು, ನಮಗೆ ಸಿಎಂ ಸ್ಥಾನ ನಮಗೆ ಬಿಟ್ಟುಕೊಟ್ಟಿದ್ದರೆ ಅದು ದಾನ ಮಾಡಿದ ಹಾಗೆ ಎಂದು ತಿಳಿಸಿದರು.
E lofer BJP yavaru yen sachana , brastarige brasta nanmaklu, papa avaru yeno kodtavre, uri atikondide avarigella ,