ಕಾಂಗ್ರೆಸ್ ನಲ್ಲಿ ಒಕ್ಕಲಿಗ ನಾಯಕರಿಗೆ ಕೊರತೆಯಿಲ್ಲ: ಜೆಡಿಎಸ್ ನಲ್ಲಿ ಕುಟುಂಬಕ್ಕೆ ಮಾತ್ರ ಸೀಮಿತ: ಸಚಿವ ಕೃಷ್ಣಬೈರೇಗೌಡ

ಕೋಲಾರ: ರಾಜ್ಯದಲ್ಲಿ ಮುಂದಿನ 25 ವರ್ಷಗಳವರೆಗೆ ಆಗುವಷ್ಟು ನಾಯಕತ್ವವನ್ನು ವಹಿಸು ಒಕ್ಕಲಿಗ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಆದರೆ, ಜೆಡಿಎಸ್ ನಲ್ಲಿ ಕೇವಲ ಒಂದು ಕುಟುಂಬದ ಅಭಿವೃದ್ಧಿ ಬೆಳವಣಿಗೆಗೆ ಸೀಮಿತವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಮುದಾಯವು ಎಚ್ಚತ್ತುಕೊಳ್ಳಬೇಕಾಗಿದೆ ಎಂದು ಕಂದಾಯ ಸಚಿವ ಸಿ.ಬಿ ಕೃಷ್ಣಬೈರೇಗೌಡ ತಿಳಿಸಿದರು.

ನಗರದ ಹೊರವಲಯದ ನಂದಿನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಾಂಗ್ರೆಸ್ ಬೆಂಬಲಿತ ಒಕ್ಕಲಿಗ ಸಮುದಾಯದ ಮುಖಂಡರ ಹಾಗೂ ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುಟುಂಬ ಬೆಳೆದರೆ ಒಕ್ಕಲಿಗರು ಬೆಳದಂತೆ ಅಂತ ಮನಸ್ಥಿತಿ ಅವರಿಗಿದೆ. ಎಲ್ಲರಿಗೂ ಅವಕಾಶಗಳು ಸಿಗಬೇಕಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಒಕ್ಕಲಿಗ ಸಮುದಾಯದ ಎಂಟು ಅಭ್ಯರ್ಥಿಗಳ ಸ್ವರ್ಧೆಗೆ ಅವಕಾಶ ನೀಡಿದ್ದೇವೆ. ಬಿಜೆಪಿ ಜೆಡಿಎಸ್‌ ಮೈತ್ರಿಯಿಂದ ಆರು ಕಡೆ ಸ್ಪರ್ಧೆ ಮಾಡಲಿದ್ದು, ಅದರಲ್ಲೂ ಮಾಜಿ ಪ್ರಧಾನಿ ದೇವೇಗೌಡರ ಮಗ ಒಂದು ಕಡೆ ಮತ್ತೊಂದು ಕಡೆ ಅವರ ಮೊಮ್ಮಗ ಇನ್ನೊಂದು ಕಡೆ ಅಳಿಯ ಬೇರೆಯವರಿಗೆ ಅರ್ಹತೆ ಇಲ್ಲವೇ ಅಥವಾ ಒಕ್ಕಲಿಗರು ಬೆಳೆಯಬಾರದು ಎಂಬುದು ಅವರ ಉದ್ದೇಶವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಇದ್ದು, ಮುಂದೆ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಅವಕಾಶಗಳನ್ನು ಕಾಂಗ್ರೆಸ್ ಪಕ್ಷವು ಮಾಡಿಕೊಡಲಿದೆ. ಅವರೊಂದಿಗೆ ಸಾಕಷ್ಟು ಮಂದಿಗೆ ಸಚಿವ ಸ್ಥಾನಗಳೊಂದಿಗೆ ನಿಗಮ ಮಂಡಳಿ ಅಧ್ಯಕ್ಷ ಮತ್ತು ನಿರ್ದೇಶಕರಾಗಿ ಮಾಡಿದ್ದಾರೆ. ಆದರೆ, ಜೆಡಿಎಸ್, ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಮುಂದೆ ಮುಖ್ಯಮಂತ್ರಿ ಮಾಡುವ ಅವಕಾಶಗಳು ಇದ್ದಾವಾ ಯೋಚನೆ ಮಾಡಿ. ಒಕ್ಕಲಿಗ ಸಮಾಜದ ಬಗ್ಗೆ ಯಾರಿಗೆ ಕಾಳಜಿ ಇದ್ದೀಯೋ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕೇಂದ್ರದಲ್ಲಿನ ಬಿಜೆಪಿ ಪಕ್ಷವು ಕರ್ನಾಟಕ ರಾಜ್ಯದ ತೆರಿಗೆ ವಂಚನೆ ಮಾಡಿದರೆ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಮಾತ್ರವೇ ಈ ತಾರತಮ್ಯ ನೀತಿಯ ವಿರುದ್ಧ ಪ್ರಶ್ನೆ ಮಾಡಿದ್ದಾರೆ. ಜೆಡಿಎಸ್‌ ಬಿಜೆಪಿಯ 27 ಸಂಸದರಿಗೆ ಯಾಕೆ ರಾಜ್ಯದ ಪರವಾದ ಕಾಳಜಿ ಇಲ್ಲ. ಪ್ರಶ್ನೆ ಮಾಡುವ ಮನಸ್ಥಿತಿ ಕಳೆದುಕೊಂಡಿದ್ದಾರೆ. ಕರ್ನಾಟಕಕ್ಕೆ ನ್ಯಾಯ ಬೇಕು ರಾಜ್ಯದ ಧ್ವನಿಯಾಗಿ ಸಂಕಲ್ಪಕ್ಕಾಗಿ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಬೇಕು ಅದರಿಂದಾಗಿ ಕೆ.ವಿ ಗೌತಮ್ ನಮ್ಮ ಜಿಲ್ಲೆಯ ಮತ್ತು ರಾಜ್ಯದ ಪರವಾಗಿ ಮಾತನಾಡಲು ಅವಕಾಶ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಮಾತನಾಡಿ, ಒಂದು ಪಕ್ಷದ ಕುಟುಂಬದ ಹಿಡಿತದಲ್ಲಿ ಇರಬೇಕು ಎನ್ನುವ ಸಿದ್ದಾಂತದಿಂದ ಅನೇಕ ಒಕ್ಕಲಿಗ ನಾಯಕರು ತಮ್ಮ ಜೀವನವನ್ನು ಆಳು ಮಾಡಿಕೊಂಡಿದ್ದಾರೆ. ವೈಯಕ್ತಿಕ ವರ್ಚಸ್ಸನಿಂದ ಬೆಳೆದವರು ಇದ್ದಾರೆ. ಜಿಲ್ಲೆಯಲ್ಲಿ ಅ ಕುಟುಂಬವನ್ನು ಹಿಂಬಾಲಿಸಿದ್ದು ಕಡಿಮೆ ರೈತರ ಮಕ್ಕಳು ಅಂತ ಹೇಳಿ ಒಮ್ಮೆ ಕೂಡ ಕೃಷಿ ಸಚಿವರಾಗಲಿಲ್ಲ ಅವರಿಗೆ ಎಲ್ಲ ಪವರ್ ಪುಲ್ ಖಾತೆಗಳೇ ಬೇಕಾಗಿತ್ತು. ಕಾಂಗ್ರೆಸ್ ನಾಯಕರನ್ನು ಗುರುತಿಸಿ ನಾಯಕತ್ವವನ್ನು ವಹಿಸುತ್ತದೆ ಅನಿಟ್ಟಿನಲ್ಲಿ ಕಾಂಗ್ರೆಸ್ ಬೆಂಬಲಿಸಬೇಕಾಗಿದೆ ಎಂದರು

ಈ ಸಂದರ್ಭದಲ್ಲಿ ಮಾಲೂರು ಶಾಸಕ ಕೆ.ವೈ ನಂಜೇಗೌಡ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್‌ ಪಕ್ಷವು ಜಾತ್ಯಾತೀತ ಎಂಬುದನ್ನು ಮರೆತು ಹೋಗಿದೆ ಇನ್ನೂ ಒಕ್ಕಲಿಗ ಸಮುದಾಯವನ್ನು ಬೆಳೆಸುತ್ತೇ ಜೆಡಿಎಸ್ ಒಕ್ಕಲಿಗ ಪರವಾಗಿಲ್ಲ ಅದು ಕುಟುಂಬದ ಪರವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಜನಾಂಗ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಜೊತೆಗೆ ನಿರಂತರವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಿದ್ದರಿದ್ದೇವೆ ಎಂದರು

ವೇದಿಕೆಯಲ್ಲಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಸಮುದಾಯದ ಮುಖಂಡರಾದ ಶಿಡ್ಲಘಟ್ಟ ರಾಜೀವ್ ಗೌಡ, ಚಿಂತಾಮಣಿ ಎಂ.ಸಿ ಬಾಲಾಜಿ, ಬ್ಯಾಟಪ್ಪ, ಅಲಂಗೂರು ಶಿವಣ್ಣ, ದಯಾನಂದ್, ಸೀಸಂದ್ರ ಗೋಪಾಲಗೌಡ, ಮುಂತಾದವರು ಇದ್ದರು

Leave a Reply

Your email address will not be published. Required fields are marked *