ಕಸ್ಟಮ್ಸ್ ಡಿಆರ್ ಐ ತಂಡದಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ತಂದಿದ್ದ ಕೋಟಿ ಕೋಟಿ ಮೌಲ್ಯದ ಕೊಕೇನ್ ವಶಕ್ಕೆ ಪಡೆಯಲಾಗಿದೆ.
ವಿದೇಶದಿಂದ ತಂದಿದ್ದ ಬರೋಬ್ಬರಿ 30 ಕೋಟಿ ಮೌಲ್ಯದ ಮೂರು ಕೆಜಿ ಕೊಕೇನ್ ವಶಕ್ಕೆ ಪಡೆಯಲಾಗಿದೆ. ಸ್ಮಗ್ಲರ್ ಒಬ್ಬ ದೋಹಾದಿಂದ ಬೆಂಗಳೂರಿಗೆ ಇಂಡಿಗೋ 6E1302 ವಿಮಾನದಲ್ಲಿ ಲಗೇಜ್ ಬ್ಯಾಗ್ ನಲ್ಲಿ 3 ಕೆಜಿ ಕೊಕೇನ್ ಅಡಗಿಸಿಟ್ಟುಕೊಂಡು ತಂದಿದ್ದ.
ಏರ್ಪೋಟ್ ನಲ್ಲಿ ಲಗೇಜ್ ಬ್ಯಾಗ್ ಚೆಕಿಂಗ್ ವೇಳೆ ಕೊಕೇನ್ ಪತ್ತೆಯಾಗಿದೆ. ಕೂಡಲೇ ಕೊಕೇನ್ ಸಮೇತ ಆರೋಪಿಯನ್ನ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ
ಶಾರ್ಜಾ, ದುಬೈ, ಶ್ರೀಲಂಕಾ, ಬಹ್ರೇನ್ ಮತ್ತು ಕೊಲಂಬೊದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಮತ್ತು ವಿದೇಶಿ ಹಣವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಒಟ್ಟು 11 ಪ್ರಕರಣಗಳಲ್ಲಿ ವಿವಿಧ ದೇಶಗಳಿಂದ ಬಂದ 8 ಪ್ರಯಾಣಿಕರನ್ನು ಬಂಧಿಸಿ 6.6 ಕೋಟಿ ಮೌಲ್ಯದ 9 ಕೆಜಿ 375 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಅದೇರೀತಿ 1.59 ಕೋಟಿ ಮೌಲ್ಯದ ವಿದೇಶಿ ಹಣ ವಶಪಡಿಸಿಕೊಳ್ಳಲಾಗಿದೆ.