ಚಿಕ್ಕಬಳ್ಳಾಪುರ ಹೊರ ಪೊಲೀಸ್ ಉಪಠಾಣೆಯ ಹೆಡ್ ಕಾನ್ಸ್ಟೇಬಲ್ ಒಬ್ಬರು ಕಳ್ಳನೊಂದಿಗೆ ಸೇರಿ ತಾನೂ ಕಳ್ಳತನದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಿದ್ದರಾಮರೆಡ್ಡಿ (38), ಚಿಕ್ಕಬಳ್ಳಾಪುರ ರೈಲ್ವೆ ಹೊರ ಪೊಲೀಸ್ ಉಪಠಾಣೆಯ ಮುಖ್ಯಪೇದೆ ಬಂಧಿತ ಆರೋಪಿ. ಆಗಸ್ಟ್ ನಲ್ಲಿ ತ್ರಿಶೂರ್ ನಿಂದ ಬೆಂಗಳೂರಿಗೆ ರೈಲಿನಲ್ಲಿ ಬರ್ತಿದ್ದ ಪ್ರಯಾಣಿಕರ ಬ್ಯಾಗ್ ಬೈಯ್ಯಪ್ಪನಹಳ್ಳಿ ಸ್ಟೇಷನ್ ಬಳಿ ಕಳುವಾಗಿತ್ತು, ಆ ಬ್ಯಾಗ್ ನಲ್ಲಿ ಸುಮಾರು 10ಲಕ್ಷ ರೂ. ಮೌಲ್ಯದ ಚಿನ್ನಾಭರಣವಿತ್ತು. ದೂರಿನ ಮೇರೆಗೆ ಈ ಸಂಬಂಧ ಇತ್ತಿಚೆಗೆ ಕೆ.ಆರ್.ಪುರಂ ರೈಲ್ವೆ ಸ್ಟೇಷನ್ ಬಳಿ ಸಾಬಣ್ಣ ಎಂಬುವನ ಬಂಧನ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಹೆಡ್ ಕಾನ್ಸ್ಟೇಬಲ್ ವಿಚಾರ ಬಯಲಿಗೆ ಬಂದಿದೆ.
ಹೆಡ್ ಕಾನ್ಸ್ಟೇಬಲ್ ಸಿದ್ದರಾಮರೆಡ್ಡಿಯು ಸಾಬಣ್ಣ ಜೊತೆ ಸೇರಿ ರೈಲ್ವೆ ಪ್ರಯಾಣಿಕರ ವಸ್ತುಗಳ ಕಳ್ಳತನ ಮಾಡುತ್ತಿದ್ದರು.ರೈಲುಗಳಲ್ಲಿ ಬೆಳಗಿನ ಜಾವ ಪ್ರಯಾಣಿಕರು ನಿದ್ದೆ ಮಾಡುವ ವೇಳೆ ಕಳ್ಳ ಪೊಲೀಸ್ ಆಟ ಪ್ರಾರಂಭವಾಗುತ್ತಿತ್ತು.
ದೋಚಿದ್ದ ಚಿನ್ನಾಭರಣ ಮತ್ತು ನಗದನ್ನು ಇಬ್ಬರು ಶೇರ್ ಮಾಡುಕೊಳ್ಳಲಾಗುತ್ತಿತ್ತು. ಈ ಇಬ್ಬರ ಬಂಧನದಿಂದ 2 ರೈಲ್ವೆ ಠಾಣಾ ವ್ಯಾಪ್ತಿಯ 4 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿ ಹೆಡ್ ಕಾನ್ಸ್ ಟೇಬಲ್ ಸಿದ್ದರಾಮರೆಡ್ಡಿ ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ.