
ಚಾಮರಾಜನಗರ ಜಿಲ್ಲೆ ಯಳಂದೂರಿನಲ್ಲಿ ಪುನೀತ್, ಶೇಖರ್ ,ಪುರುಷೋತ್ತಮ್ ಎಂಬ ಮೂವರು ನಕಲಿ ಪತ್ರಕರ್ತರನ್ನ ಬಂಧಿಸಲಾಗಿದೆ.
ಯಳಂದೂರು-ಬಿಆರ್ ಹಿಲ್ಸ್ ನಡುವೆ ನಡೆಯುತ್ತಿದ್ದ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದ ನಕಲಿ ಪತ್ರಕರ್ತರು, ಸ್ಥಳದಲ್ಲಿದ್ದ ಮೇಸ್ತ್ರಿ ಬಳಿ ಹಣಕ್ಕಾಗಾಗಿ ಒತ್ತಾಯಿಸಿದ್ದಾರೆ.
ಹಣ ನೀಡದಿದ್ದರೆ ಸುದ್ದಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹಣ ನೀಡಲು ಒಪ್ಪದ ಮೇಸ್ತ್ರಿ ಚಲುವರಾಜ್ ಮೇಲೆ ಹ*ಲ್ಲೆ ಮಾಡಿದ್ದರು.
ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಈಗ ಮೂವರು ನಕಲಿ ಪತ್ರಕರ್ತರನ್ನ ಬಂಧಿಸಲಾಗಿದೆ.