ಕಲ್ಲು ಗಣಿಗಾರಿಕೆ ಅಮಾಯಕ ಕಾರ್ಮಿಕರ ಸಾವು: ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕ್ಕೆ ಯಲುವಗುಳಿ ನಾಗರಾಜ್ ಆಗ್ರಹ

ಕೋಲಾರ: ಜಿಲ್ಲೆಯ ಟೇಕಲ್‌ ಹೋಬಳಿಯ ಮಾಕಾರಹಳ್ಳಿಯಲ್ಲಿ ಸೋಮವಾರ ಕಲ್ಲು ಗಣಿಗಾರಿಕೆ ವೇಳೆ ಕಲ್ಲು ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಪದೇಪದೇ ಇಂತಹ ಸಾವು ನೋವುಗಳ ಘಟನೆಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಜೆಡಿಎಸ್‌ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಯಲುವಗುಳಿ ನಾಗರಾಜ್ ಆರೋಪಿಸಿದರು.

ಘಟನೆ ಕುರಿತು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು, ಜಿಲ್ಲೆಯಲ್ಲಿ ರಾಜಾರೋಷವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆಯಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಇಂತಹ ಸಾವುಗಳಿಗೆ ಬೆಲೆ ಇಲ್ಲವಾಗಿವೆ ಮಾಲೀಕರಿಗೂ ಕಾರ್ಮಿಕರ ಹಿತ ಮುಖ್ಯವಾಗಿಲ್ಲ ಕಲ್ಲು ಒಡೆಯಲು ಬೃಹತ್‌ ಯಂತ್ರಗಳು, ಸ್ಫೋಟಕ ಬಳಸಿದರೂ ಪೊಲೀಸರಾಗಲಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಾಗಲಿ ಕ್ರಮ ವಹಿಸುತ್ತಿಲ್ಲ. ಅರಣ್ಯ ಇಲಾಖೆ ನಿಯಮಗಳು, ಗಣಿ ಇಲಾಖೆ ನಿಯಮಗಳು, ಸ್ಫೋಟಕ ಬಳಕೆ ಕಾನೂನುಗಳನ್ನು ಉಲ್ಲಂಘಿಸಿದ್ದರೂ ಯಾಕೆ ಕ್ರಮ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಕಲ್ಲು ಗಣಿಗಾರಿಕೆಗಳಿಗೆ ಕಾರ್ಮಿಕ ಇಲಾಖೆಯ ಕಾನೂನುಗಳು ಅನ್ವಯವಾಗುತ್ತವೆ ಆದರೆ ಜಿಲ್ಲೆಯಲ್ಲಿ ಯಾವುದು ಜಾರಿಯಾಗುತ್ತಿಲ್ಲ ಕಲ್ಲು ಗಣಿಗಾರಿಕೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಾರ್ಮಿರಿಗೆ ಕಾನೂನು ಬದ್ಧ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗುವುದಿಲ್ಲ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಸಹ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಕಾನೂನು ವಿರುದ್ದವಾಗಿ ಅಕ್ರಮವಾಗಿ ನಡೆಸುತ್ತಿರುವ ಕಲ್ಲುಗಣಿಗಾರಿಕೆಯ ವಿರುದ್ಧ ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕು. ಅಕ್ರಮ ಕಲ್ಲುಗಣಿಗಾರಿಕೆಯ ಹಿಂದೆ ಇರುವ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕಲ್ಲು ಗಣಿಗಾರಿಕೆ ಹೆಸರಲ್ಲಿ ರಾಷ್ಟ್ರೀಯ ಸಂಪತ್ತಿನ ಲೂಟಿ ಬಹಿರಂಗವಾಗಿ ಹಾಗೂ ರಾಜಾರೋಷವಾಗಿ ಹಾಡುಹಗಲೇ ನಡೆದರೂ ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗಿಲ್ಲ ಕೆಲವರ ಒತ್ತಡಕ್ಕೆ ಅಧಿಕಾರಿಗಳು ಸರಕಾರಿ ಸಂಪತ್ತು ರಕ್ಷಣೆ ಮಾಡುವ ಸುಳ್ಳು ಭರವಸೆಗಳು ನೀಡುತ್ತಲೇ ಇದ್ದಾರೆ ಹೊರತು ಅದನ್ನು ರಕ್ಷಿಸುವ ಗೋಜಿಗೆ ಇದುವರೆಗೂ ಹೋಗದಿರುವುದು ಅನುಮಾನಕ್ಕೆ ಎಡೆ ಮಾಡಿದೆ ಜೊತೆಗೆ ಕೆರೆಗಳ ಪಕ್ಕದಲ್ಲೇ ಕಲ್ಲು ಪುಡಿ ಮಾಡಲು ಅನುಮತಿ ನೀಡಿ ಕೆರಗಳ ಸೌಂದರ್ಯ ಹಾಳು ಮಾಡಲು ಹೊರಟಿದ್ದಾರೆ ಅವುಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಯಲುವಗುಳಿ ನಾಗರಾಜ್ ಒತ್ತಾಯಿಸಿದರು.

Leave a Reply

Your email address will not be published. Required fields are marked *