ಕಲ್ಲು ಕೊಟ್ಟು ಪ್ರಜ್ಞೆ ತಪ್ಪಿಸಿ ವೃದ್ದೆ ಬಳಿ ಚಿನ್ನ ಕಳವು ಮಾಡಿರುವ ಘಟನೆ ಆನೇಕಲ್ ತಾಲೂಕಿನ ಕೆಂಪಡ್ರಹಳ್ಳಿಯಲ್ಲಿ ನಡೆದಿದೆ.
ವೃದ್ಧೆ ಬಳಿ ಇದ್ದ ಸುಮಾರು 40 ಗ್ರಾಂ ಚಿನ್ನದ ಒಡವೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಅಡ್ರೆಸ್ ಕೇಳುವ ನೆಪದಲ್ಲಿ ವೃದ್ಧೆ ಬಳಿ ಬಂದ ದಂಪತಿ ಒಡವೆ ಎಗರಿಸಿದ್ದಾರೆ.
ವೃದ್ಧೆ ಸಾವಿತ್ರಮ್ಮ ತೋಟದಲ್ಲಿ ಕೆಲಸ ಮುಗಿಸಿ ಬರುತ್ತಿದ್ದರು.ಈ ವೇಳೆ ಟಿವಿಎಸ್ ಎಕ್ಸೆಲ್ ನಲ್ಲಿ ಬಂದಿದ್ದ ದಂಪತಿಗಳು, ಸಾವಿತ್ರಮ್ಮ ಕತ್ನಲ್ಲಿದ್ದ ಒಡವೆ ಕಿವಿಯಲ್ಲಿದ್ದ ಓಲೆ ಕದ್ದು ಎಸ್ಕೇಪ್ ಆಗಿದ್ದಾರೆ.
ಸ್ಥಳೀಯ ಸಿಸಿ ಟಿವಿಯಲ್ಲಿ ಓಡಾಟದ ದೃಶ್ಯ ಸೆರೆಯಾಗಿದೆ. ಒಡವೆ ಕಳೆದುಕೊಂಡ ಸಾವಿತ್ರಮ್ಮ ಕಂಗಾಲಾಗಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.