ತಾಲೂಕಿನ ಬೂದಿಗೆರೆ ದೇಶನಾರಾಯಣಸ್ವಾಮಿ ಕಲ್ಯಾಣಿಯಲ್ಲಿ ಬಾತುಕೋಳಿಗಳ ಮಾರಣಹೋಮ. ಕಳೆದ ಒಂದು ವಾರದಿಂದ ಸುಮಾರು ನೂರು ಬಾತುಕೋಳಿಗಳು ಸಾವನ್ನಪ್ಪುತ್ತಿವೆ, ದಿಢೀರನೆ ಬಾತುಕೋಳಿಗಳ ಸಾವನ್ನಪ್ಪುತ್ತಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಬಾತುಕೋಳಿಗಳ ನಿಗೂಢ ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಸ್ಥಳೀಯರ ಮಾಹಿತಿ ಪ್ರಕಾರ ವಿಷ ಹಾಕಿ ಬಾತುಕೋಳಿಗಳನ್ನ ಕೊಂದಿರುವ ಸಂಶಯ ಕೇಳಿಬಂದಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.