ಕಲುಷಿತ ನೀರು ಕುಡಿದು ಇಬ್ಬರ ಸಾವು: 80‌ ಮಂದಿ‌ ಅಸ್ವಸ್ಥ: ಮೂವರ ಸ್ಥಿತಿ ಗಂಭೀರ..!

ಬಹುತೇಕ ಗ್ರಾಮೀಣ ಮನೆಗಳಿಗೆ ನಲ್ಲಿಗಳ ಮೂಲಕ ಶುದ್ಧೀಕರಿಸಿದ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ತೆಲಂಗಾಣ ರಾಜ್ಯದಲ್ಲಿ ಕಲುಷಿತ ನೀರು‌ ಕುಡಿದು ಇಬ್ಬರು ಸಾವನ್ನಪ್ಪಿದ್ದು, ಸುಮಾರು 80 ಮಂದಿ ಅಸ್ವಸ್ಥಗೊಂಡಿದ್ದು, ಅವರಲ್ಲಿ ಮೂವರು ಗಂಭೀರ ಸ್ಥಿತಿಯಲ್ಲಿದ್ದಾರೆ.

ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಮಂಡಲದ ಸಂಜೀವರಾವ್‌ಪೇಟೆಯ ಬಾವಿಯ ಕಲುಷಿತ ನೀರನ್ನು ಸೇವಿಸಿದ್ದರಿಂದ ಈ ಘಟನೆ ನಡೆದಿದೆ.

ಮಿಷನ್ ಭಗೀರಥ ಯೋಜನೆ ಮೂಲಕ ನೀರು ಪೂರೈಕೆಯಲ್ಲಿ ನಿರಂತರ ಅಡಚಣೆಯ ನಂತರ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ಸಂಜೀವರಾವ್ ಪೇಟೆಯ ಎರಡು ಕಾಲೋನಿಗಳ ನಿವಾಸಿಗಳು ಮಿಷನ್ ಭಗೀರಥ ಯೋಜನೆಯ ಮೂಲಕ ನೀರು ಪೂರೈಕೆಯಲ್ಲಿ ವ್ಯತ್ಯಯವಾದ ನಂತರ ಬಾವಿಯ ನೀರನ್ನು ಆಶ್ರಯಿಸಿದ್ದಾರೆ.

ಬಾವಿಯಲ್ಲಿನ ನೀರು ಕಲುಷಿತಗೊಂಡಿದೆ ಎಂದು ವರದಿಗಳು ಹೇಳಿವೆ. ಆದರೆ ಬೇರೆ ದಾರಿಯಿಲ್ಲದೇ ಬಾವಿಯ ನೀರನ್ಮುನು ಸೇವಿಸಿದ ಎಲ್ಲರಿಗೂ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.

ಮಹೇಶ್ (22) ಮತ್ತು ಸಾಯಮ್ಮ (70) ಎಂಬ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರೆ. ಅಸ್ವಸ್ಥರಾದ 50 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಒಬ್ಬರನ್ನು ಸಂಗಾರೆಡ್ಡಿ ಸರ್ಕಾರಿ ಆಸ್ಪತ್ರೆಗೆ, ಇಬ್ಬರನ್ನು ನಾರಾಯಣಖೇಡ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಗ್ರಾಮಸ್ಥರ ಪ್ರಕಾರ, ಗ್ರಾಮದಲ್ಲಿ ಮೂರು ಟ್ಯಾಂಕ್‌ಗಳಿದ್ದವು, ಮಿಷನ್ ಭಗೀರಥ ಯೋಜನೆಗೆ ಎರಡು ಟ್ಯಾಂಕ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಹಳೆಯ ಟ್ಯಾಂಕ್‌ಗೆ ಬಾವಿಗೆ ಸಂಪರ್ಕ ಕಲ್ಪಿಸಲಾಗಿದೆ. ಎರಡು ಬಿ.ಸಿ ಕಾಲೋನಿಗಳ ನಿವಾಸಿಗಳು ಬಾವಿ ನೀರಿನ ಟ್ಯಾಂಕ್ ಮೂಲಕ ಸರಬರಾಜು ಮಾಡಿದ ನೀರನ್ನು ಕುಡಿದು ಅಸ್ವಸ್ಥರಾದರು ಎಂದಿದ್ದಾರೆ.

ನಾರಾಯಣಖೇಡ್ ಶಾಸಕ ಪಿ.ಸಂಜೀವ ರೆಡ್ಡಿ ಮಾತನಾಡಿ, ಕಂದಾಯ ವಿಭಾಗಾಧಿಕಾರಿ (ಆರ್‌ಡಿಒ) ಅಶೋಕ್ ಚಕ್ರವರ್ತಿ, ಆಸ್ಪತ್ರೆ ಸೇವೆಗಳ ಜಿಲ್ಲಾ ಸಂಯೋಜಕ (ಡಿಸಿಎಚ್‌ಎಸ್), ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಡಿಎಂಎಚ್‌ಒ) ಡಾ.ಗಾಯತ್ರಿದೇವಿ ಮತ್ತು ಉಪ ಡಿಎಂಎಚ್‌ಒ ಡಾ.ಸಂಧ್ಯಾರಾಣಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ಶುದ್ಧ ಕುಡಿಯುವ ನೀರನ್ನ ಸರಬರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!