ಕೆಂಪು, ನೀಲಿ, ನೇರಳೆ, ಕಪ್ಪು ಮತ್ತು ಮಿಶ್ರ ಬಣ್ಣದ ಮೆಕ್ಕೆಜೋಳದ ತೆನೆಗಳು ಈಗ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ಹೊಲಗಳಲ್ಲಿ ಅರಳಿವೆ. ಸಾಮಾನ್ಯವಾಗಿ ಹಳದಿ ಅಥವಾ ಬಿಳಿ ಬಣ್ಣದಲ್ಲೇ ಕಂಡುಬರುವ ಜೋಳಕ್ಕಿಂತ ವಿಭಿನ್ನ ಬಣ್ಣದಲ್ಲಿ ಮಿನುಗುವ ಈ ತಳಿಗಳು ಕೃತಕವಾಗಿ ಬಣ್ಣ ಹಚ್ಚಿದವುಗಳಲ್ಲ, ಸಹಜವಾಗಿ ಬಣ್ಣಗಳನ್ನು ಹೊಂದಿರುವ ಅಪರೂಪದ ಜೋಳದ ಪ್ರಭೇದಗಳು.
ಈ ವಿಶೇಷ ಜೋಳವನ್ನು ತಾಲ್ಲೂಕಿನ ರೈತ ಎ.ಎಂ. ತ್ಯಾಗರಾಜ್ ತಮ್ಮ ಹೊಲದಲ್ಲಿ ಯಶಸ್ವಿಯಾಗಿ ಬೆಳೆಸಿದ್ದಾರೆ. ಕಡು ಕೆಂಪು, ನೇರಳೆ, ನೀಲಿ, ಹಳದಿ ಮತ್ತು ಕೆಂಪು–ಕಪ್ಪು ಮಿಶ್ರಿತ ಬಣ್ಣದ ಕಾಳುಗಳಿಂದ ತುಂಬಿದ ತೆನೆಗಳನ್ನು ನೋಡಲು ಸುತ್ತಮುತ್ತಲಿನ ರೈತರು ಹರಿದು ಬರುತ್ತಿದ್ದಾರೆ.
ಬಣ್ಣ ಬಣ್ಣ ಜೋಳದ ಇತಿಹಾಸ
ದಕ್ಷಿಣ ಅಮೆರಿಕಾದಲ್ಲಿ ಸುಮಾರು 3000 ವರ್ಷಗಳ ಹಿಂದೆಯೇ ಈ ಬಣ್ಣದ ಜೋಳ ಬೆಳೆದ ದಾಖಲೆಗಳಿವೆ. ಕ್ರಿ.ಶ. 1330 ರಿಂದ 1521ರವರೆಗೆ ಮೆಕ್ಸಿಕೋ ದೇಶದಲ್ಲಿ ವಾಸಿಸಿದ್ದ ಅಜಟೆಕ್ ಜನಾಂಗದವರ ಪ್ರಮುಖ ಆಹಾರವೂ ಇದೇ. ಇಂದಿಗೂ ಮೆಕ್ಸಿಕೋ, ಪೆರು ಮತ್ತು ಇತರೆ ದಕ್ಷಿಣ ಅಮೆರಿಕಾ ದೇಶಗಳಲ್ಲಿ ಈ ಜೋಳವನ್ನು ಆಹಾರ ಹಾಗೂ ಪಾನೀಯ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಪೆರು ದೇಶದ ಪ್ರಸಿದ್ಧ “ಚೀಚಾ ಮೊರಾಡ” ಪಾನೀಯ ಇದೇ ಬಣ್ಣದ ಜೋಳದಿಂದ ತಯಾರಾಗುತ್ತದೆ.
ನಮ್ಮ ದೇಶದಲ್ಲಿಯೂ ಮಿಜೋರಾಂ ರಾಜ್ಯದಲ್ಲಿ ಈ ಜೋಳವನ್ನು “ಮಿಮ್ ಬಾನ್” (ಜಿಗುಟಾದ ಜೋಳ) ಎಂಬ ಹೆಸರಿನಲ್ಲಿ ಬೆಳೆಯುತ್ತಾರೆ. ಇದಕ್ಕೆ ಸಿಹಿ ಮತ್ತು ಒಗರಿನ ರುಚಿಯಿದ್ದು, ಬೇಯಿಸಿದಾಗ ಇನ್ನಷ್ಟು ರುಚಿಕರವಾಗುತ್ತದೆ.
ಪೋಷಕಾಂಶಗಳ ಆಗರ
ಮೆಕ್ಸಿಕೋ ಮತ್ತು ಪೆರು ದೇಶಗಳಲ್ಲಿ ಹೆಚ್ಚಾಗಿ ಬೆಳೆದಿರುವ ಈ ಜೋಳ ಪೋಷಕಾಂಶಗಳ ಭಂಡಾರವಾಗಿದೆ. ಕಬ್ಬಿಣಾಂಶ ಹೆಚ್ಚಿದ್ದು, ರಕ್ತ ಉತ್ಪತ್ತಿಗೆ ನೆರವಾಗುತ್ತದೆ ಹಾಗೂ ರಕ್ತಹೀನತೆ ತಡೆಗಟ್ಟುತ್ತದೆ. ದೇಹದಾರ್ಢ್ಯತೆ ಹೆಚ್ಚಿಸುತ್ತದೆ. ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್ ಸೇರಿದಂತೆ ವಿಟಮಿನ್ A ಮತ್ತು ವಿಟಮಿನ್ B ಸಮೃದ್ಧವಾಗಿದೆ.
ಆರೋಗ್ಯ ಪ್ರಯೋಜನಗಳು
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮಧುಮೇಹ ಮತ್ತು ಬೊಜ್ಜು ನಿಯಂತ್ರಣಕ್ಕೆ ಸಹಕಾರಿ. ಉರಿಯೂತ ನಿವಾರಕ ಹಾಗೂ ಕ್ಯಾನ್ಸರ್ ವಿರೋಧಿ ಗುಣಗಳನ್ನೂ ಹೊಂದಿದೆ. ನರಮಂಡಲದ ಕಾರ್ಯನಿರ್ವಹಣೆ ಸುಧಾರಿಸುತ್ತದೆ. ರಕ್ತದೊತ್ತಡ ನಿಯಂತ್ರಣ ಮತ್ತು ಮೂತ್ರಪಿಂಡ, ಕಣ್ಣಿನ ಆರೋಗ್ಯ ಸುಧಾರಿಸಲು ಸಹಕಾರಿ.
ಅಮೆರಿಕಾ ದೇಶಗಳಲ್ಲಿ ಬಣ್ಣದ ಜೋಳದಿಂದ ಪಾಪ್‌ಕಾರ್ನ್, ಚಿಪ್ಸ್, ಹಿಟ್ಟು ಹಾಗೂ ಪಾನೀಯಗಳನ್ನು ತಯಾರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದನ್ನು “ಸೂಪರ್ ಫುಡ್” ಎಂದು ಕರೆಯಲಾಗುತ್ತಿದ್ದು, ಹೆಚ್ಚು ಬೇಡಿಕೆ ಇದೆ. ಆದರೆ ಇಂತಹ ಅಪರೂಪದ ಜೋಳವನ್ನು ನೋಡುವುದಕ್ಕೆ ಅಮೆರಿಕಾದತ್ತ ಮುಖ ಮಾಡುವ ಅಗತ್ಯವಿಲ್ಲ. ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ರೈತ ಎ.ಎಂ. ತ್ಯಾಗರಾಜ್ ಅವರ ಹೊಲದಲ್ಲಿಯೇ ಈ ನಿಧಿ ಸಿಗುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ…
ಬೆಂಗಳೂರು ಗ್ರಾಮಾಂತರ: ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ದೊಡ್ಡಬಳ್ಳಾಪುರ ತಾಲೂಕು ಇದೀಗ ಬರಪೀಡಿತ ತಾಲೂಕುಗಳ ಪಟ್ಟಿಗೆ…
ಧಾರವಾಡ: ಭೂಮಿಯ ‘ಅ-ಖರಾಬ್’ ತೆರವುಗೊಳಿಸಲು 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ವಿರುದ್ಧ…
ರಾಜ್ಯದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಿಗೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಭೂತಪೂರ್ವ ವೇಗ ನೀಡಿದ್ದಾರೆ. ಒಂದೆಡೆ ಮೇಕೆದಾಟು ಯೋಜನೆ…
ದೊಡ್ಡಬಳ್ಳಾಪುರ: ಪತಿಯೊಂದಿಗೆ ಲಾಡ್ಜ್‌ಗೆ ತೆರಳಿದ್ದ 21 ವರ್ಷದ ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಮೃತರನ್ನು ಗೌರಿಬಿದನೂರು ತಾಲೂಕಿನ…
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಸಹ ಆಡಳಿತ ಉಸ್ತುವಾರಿಯಾಗಿ…