ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಷಿಪ್: 5 ಚಿನ್ನ, 5 ಬೆಳ್ಳಿ, 4 ಕಂಚು ಸೇರಿದಂತೆ ಒಟ್ಟು 25 ಬಹುಮಾನ ಗೆದ್ದ ತಾಲೂಕಿನ ಯೋಗ ಪ್ರತಿಭೆಗಳು

ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ​​ಮತ್ತು ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪುಟ್ಟಮ್ಮ ಬೆಂಕಿಲಕ್ಷ್ಮಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಷಿಪ್ ನಲ್ಲಿ ತಾಲ್ಲೂಕಿನ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಭಾಗವಹಿಸಿ 5 ಚಿನ್ನ, 5 ಬೆಳ್ಳಿ, 4 ಕಂಚು ಸೇರಿದಂತೆ ಒಟ್ಟು 25 ಬಹುಮಾನಗಳನ್ನು ಪಡೆದುಕೊಳ್ಳುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಯೋಗಕೇಂದ್ರದ ಗೌರವ ಕಾರ್ಯದರ್ಶಿ ನಟರಾಜು ತಿಳಿಸಿದ್ದಾರೆ.

ಬಹುಮಾನ ಗೆದ್ದ ಯೋಗಪಟುಗಳು :-

8 ರಿಂದ 10 ವರ್ಷದ ಬಾಲಕರ ವಿಭಾಗದಲ್ಲಿ ಜೆ.ಸಿ.ಪ್ರಥಮಶೆಟ್ಟಿ ದ್ವಿತೀಯ ಸ್ಥಾನ, ಯಶ್ವಿನ್.ಎಸ್ 5ನೇ ಸ್ಥಾನ.

8 ರಿಂದ 10 ವರ್ಷದ ಬಾಲಕಿಯರ ವಿಭಾಗದಲ್ಲಿ ಎಸ್.ಅಪೂರ್ವ ದ್ವಿತೀಯ ಸ್ಥಾನ, ಎನ್ ಖುಷಿಪ್ರಿಯ ತೃತೀಯ ಸ್ಥಾನ, ಸಾನ್ವಿ.ಎಂ.ರಾಜು 6ನೇ ಸ್ಥಾನ.

10ರಿಂದ 12 ವರ್ಷದ ಬಾಲಕರ ವಿಭಾಗದಲ್ಲಿ ಎಸ್.ಕುಶಲ್ ಪ್ರಥಮ ಸ್ಥಾನ, ನೀರಜ್.ಎಲ್ ತೃತೀಯ ಸ್ಥಾನ, ವೇದಿಕ್ ಶೆಟ್ಟಿ 5ನೇ ಸ್ಥಾನ, ಹಿತೇಶ್.ಎ 6ನೇ ಸ್ಥಾನ.

10ರಿಂದ12 ವರ್ಷದ ಬಾಲಕಿಯರ ವಿಭಾಗದಲ್ಲಿ ಗೌತಮಿ.ಹೆಚ್.ಆರ್. ಪ್ರಥಮ ಸ್ಥಾನ, ಯಶಸ್ವಿನಿ.ಟಿ. ದ್ವಿತೀಯ ಸ್ಥಾನ, ಹಿತಶ್ರೀ ಕೆ.ಎಂ ತೃತೀಯ ಸ್ಥಾನ.

12ರಿಂದ 14 ವರ್ಷದ ಬಾಲಕರ ವಿಭಾಗದಲ್ಲಿ ಶಶಾಂಕ್.ಪಿ.ಎಸ್ ಪ್ರಥಮ ಸ್ಥಾನ, ಕೆ.ಎನ್.ವಿಶ್ವನಾಥ್ ತೃತೀಯ ಸ್ಥಾನ, ಎ.ಸಂಜಯ್ ಕುಮಾರ್ 5ನೇ ಸ್ಥಾನ,

12ರಿಂದ15 ಬಾಲಕಿಯರ ವಿಭಾಗದಲ್ಲಿ ರನಿತಾ.ಆರ್ 5ನೇ ಸ್ಥಾನ.

14ರಿಂಧ16 ವರ್ಷದ ಬಾಲಕೀಯರ ವಿಭಾಗದಲ್ಲಿ ಮಧುಶಾಲಿನಿ ಡಿ.ಎಸ್ 5ನೇಸ್ಥಾನ.

16ರಿಂದ18 ವರ್ಷದ ಯುವತಿಯರ ವಿಭಾಗದಲ್ಲಿ ಎಂ.ಆರ್.ಜಾಹ್ನವಿ, ದ್ವಿತೀಯ ಸ್ಥಾನ.

18ರಿಂದ 21 ವರ್ಶದ ಯುವಕರು ಕೆ.ವಿನಯ್ ಕುಮಾರ್, ಪ್ರಥಮ ಸ್ಥಾನ, ವರಪ್ರಸಾದ್.ವಿ ದ್ವಿತೀಯ ಸ್ಥಾನ, ಚೇತನ್ ರಾಮ್.ಕೆ.ಎಮ್ 6ನೇ ಸ್ಥಾನ,

21ರಿಂದ25 ವರ್ಷದ ಯುವತಿಯರು ಗಾನಶ್ರೀ.ಎ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿರುವ ಯೋಗಪಟುಗಳಿಗೆ ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಅಭಿನಂದಿಸಿ ಶುಭಹಾರೈಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!