ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೆಸರನ್ನು ಬಳಕೆ ಮಾಡಲಾಗಿದೆ. ಸಂಘಟನೆಯ ಹೆಸರಿನಲ್ಲಿ ಅಧ್ಯಯನ ಶಿಬಿರವನ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಂಘಟನೆಯ ಕಾರ್ಯಕರ್ತರು ಶಿಬಿರ ಬಳಿಯ ಪ್ರತಿಭಟನೆ ನಡೆಸಿದ್ದಾರೆ, ಸಂಘಟನೆಯ ಬ್ಯಾನರ್ ತೆಗೆಯುವಂತೆ ಆಗ್ರಹಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಬೆಸೆಂಟ್ ಪಾರ್ಕ್ ನಲ್ಲಿ ಹೆಣ್ಣೂರು ಶ್ರೀನಿವಾಸ್ ರವರು ರಾಜ್ಯ ಮಟ್ಟದ ಮೂರು ದಿನಗಳ ಅಧ್ಯಯನ ಶಿಬಿರವನ್ನು ನಡೆಸುತ್ತಿದ್ದಾರೆ.
ಅಧ್ಯಯನ ಶಿಬಿರವನ್ನ ಕರ್ನಾಟಕ ದಲಿತ ಸಂಘರ್ಘ ಸಮಿತಿಯ ಹೆಸರಿನಲ್ಲಿ ಮಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಬೆಸೆಂಟ್ ಪಾರ್ಕ್ ನಲ್ಲಿ ಪ್ರತಿಭಟನೆಯನ್ನ ನಡೆಸಿದರು.
ಇದೇ ವೇಳೆ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕ ಬಸವರಾಜು ನೆಲಮಂಗಲ, ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನ ಎಂ.ಗುರುಮೂರ್ತಿಯವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಘಟಿಸುವ ಮೂಲಕ ಬಲಿಷ್ಠ ಸಂಘಟನೆಯನ್ನಾಗಿ ಮಾಡಿದ್ದಾರೆ, ಸಂಘಟನೆ ಹಕ್ಕುದಾರಿಕೆಗಾಗಿ 11 ವರ್ಷಗಳ ಹೋರಾಟವನ್ನ ಮಾಡಿದ್ದಾರೆ, ಶಿವಮೊಗ್ಗ ಸಿವಿಲ್ ಕೋರ್ಟ್ , ಭದ್ರಾವತಿ ಸಿವಿಲ್ ಕೋರ್ಟ್ ಮತ್ತು ಹೈಕೋರ್ಟ್ ನಲ್ಲಿ ಸಂಘಟನೆಯೂ ಗುರುಮೂರ್ತಿಯವರಿಗೆ ಸೇರಿದ್ದು ಎಂದು ತೀರ್ಪು ನೀಡಲಾಗಿದೆ ಎಂದರು.
ತಾಲೂಕು ಅಧ್ಯಕ್ಷರಾದ ರಾಮಮೂರ್ತಿ ನೆರಳಘಟ್ಟ ಮಾತನಾಡಿ, ಕೋರ್ಟ್ ತೀರ್ಪುಗಳು ನಮ್ಮ ಪರವಾಗಿದ್ದರೂ, ಹೆಣ್ಣೂರು ಶ್ರೀನಿವಾಸ್ ನಮ್ಮ ಸಂಘಟನೆ ಹೆಸರನ್ನು ಬಳಸಿಕೊಂಡು ಶಿಬಿರವನ್ನ ನಡೆಸುತ್ತಿದ್ದಾರೆ, ಸಂಘಟನೆ ಬ್ಯಾನರ್ ಬಳಸದಂತೆ ವಿನಂತಿಯನ್ನ ಮಾಡಿದ್ದೇವು, ಸಮಾಜದಲ್ಲಿ ಬಿರುಕು ಮೂಡಿಸಲು ಮತ್ತು ಸಂಘಟನೆಗೆ ಕೆಟ್ಟ ಹೆಸರು ತರಬೇಡಿ ಎಂದು ವಿನಂತಿ ಮಾಡಿದ್ದೇವು.ಆದರೆ ಹೆಣ್ಣೂರು ಶ್ರೀನಿವಾಸ್ ಉಡಾಫೆಯ ಮಾತುಗಳನ್ನಾಡಿದ್ದಾರು, ನಾವು ಕಾರ್ಯಕ್ರಮಕ್ಕೆ ತೊಂದರೆ ನೀಡುವುದಿಲ್ಲ ನಮ್ಮ ಆಗ್ರಹ ನಮ್ಮ ಸಂಘಟನೆ ಬ್ಯಾನರ್ ಬಳಸ ಬೇಡಿ ಎನ್ನುವುದು, ಬ್ಯಾನರ್ ತೆಗೆಯುವರೆಗೂ ಪ್ರತಿಭಟನೆ ನಡೆಸುವುದ್ದಾಗಿ ಎಚ್ಚರಿಸಿದರು.