ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯ- ಸಿಎಂ ಸಿದ್ದರಾಮಯ್ಯ

ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯ. ಸಂಶೋಧನಾ ಸಂಸ್ಥೆಗಳು, ಔಷಧ ಕಂಪನಿಗಳು, ವೈದ್ಯಕೀಯ ವಸ್ತುಗಳ ಉತ್ಪಾದನೆಗೆ ನಮ್ಮ ರಾಜ್ಯ ಹೆಸರುವಾಸಿಯಾಗಿದೆ. ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು ನೀಡಿರುವುದು ಈ ವಲಯದ ಅಭಿವೃದ್ಧಿಗೆ ಇಂಬು ನೀಡಿರುವುದಲ್ಲದೇ ರಾಜ್ಯದ ಆರ್ಥಿಕತೆ ಪ್ರಮುಖ ಕೊಡುಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ..

ಫಿಲಿಪ್ಸ್ ಇಂಡಿಯಾ ಇನ್ನೋವೇಶನ್ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಆರೋಗ್ಯ ಕ್ಷೇತ್ರದಲ್ಲಿ ಫಿಲಿಪ್ಸ್ ಸಂಸ್ಥೆ ಮುಂಚೂಣಿಯಲ್ಲಿದೆ. ಕಳೆದ 27 ವರ್ಷಗಳಿಂದ ಕರ್ನಾಟಕದಲ್ಲಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಬೆಂಗಳೂರಿನ ಫಿಲಿಪ್ಸ್ ಇನ್ನೊವೇಷನ್ ಕ್ಯಾಂಪಸ್ ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್  ಶಕ್ತಿಕೇಂದ್ರವಾಗಿದ್ದು, ಆರೋಗ್ಯ ಸೇವಾ ಪರಿಹಾರಗಳನ್ನು ಒದಗಿಸುವ ಮೂಲಕ ಜಾಗತಿಕವಾಗಿ ಜನರ ಬದುಕನ್ನು ಉತ್ತಮಪಡಿಸುವ ಗುರಿಯನ್ನು ಹೊಂದಿದೆ ಎಂದರು.

ಬೆಂಗಳೂರಿನಲ್ಲಿ ನೆಲೆಸಿರುವ ಫಿಲಿಪ್ಸ್ ಇನ್ನೊವೇಶನ್ ಕ್ಯಾಂಪಸ್ ಫಿಲಿಪ್ಸ್ ನ ಡಿಜಿಟಲ್ ಪರಿವರ್ತನೆಯನ್ನು ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಮಹತ್ವದ  ಪಾತ್ರವನ್ನು ವಹಿಸಲಿದೆ. 6,50,000 ಚದರ ಅಡಿ ವಿಸ್ತೀರ್ಣದ ಬೆಂಗಳೂರಿನ ಈ ಬೃಹತ್ ಆವರಣದಲ್ಲಿ ಸುಮಾರು 5,000 ವೃತ್ತಿಪರರು ಕಾರ್ಯನಿರ್ವಹಿಸಬಹುದಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ ಎಂದು ಹೇಳಿದರು.

ರೋಗಿಯ ಚಿಕಿತ್ಸಾ ಅನುಭವವನ್ನು ಉತ್ತಮಪಡಿಸುವ, ಉತ್ತಮ ಆರೋಗ್ಯ ಫಲಿತಾಂತಗಳನ್ನು ನೀಡುವ, ಸಿಬ್ಬಂದಿಗೂ ಕೂಡ ಉತ್ತಮ ಅನುಭವವನ್ನು  ಕಲ್ಪಿಸುವುದಲ್ಲದೇ. ಆರೋಗ್ಯ, ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಜಾಗತಿಕವಾಗಿ ಟೆಕ್‍ಹಬ್ ಎಂದು ಪರಿಗಣಿಸಲ್ಪಡುವ ಬೆಂಗಳೂರು ನಗರಕ್ಕೆ ಇನ್ನೊವೇಶನ್ ಕೇಂದ್ರ ಮತ್ತೊಂದು ಗರಿ ಮೂಡಿಸಲಿದೆ ಎಂದು ನಾನು ನಂಬಿದ್ದೇನೆ ಎಂದು ತಿಳಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ), ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್ ಹಾಗೂ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ( ನಿಮ್ಹಾನ್ಸ್) sಸಂಸ್ಥೆಗಳು ಅಪಾರ ಸಂಖ್ಯೆಯಲ್ಲಿ  ಅರ್ಹ ಆರೋಗ್ಯ ಸೇವಾ ವೃತ್ತಿಪರರನ್ನು ಉತ್ಪಾದಿಸುತ್ತಿದೆ. ಜಾಗತಿಕ ಆರೋಗ್ಯ ಸೇವಾ ಉದ್ಯಮದಲ್ಲಿ ಕ್ರಾಂತಿಯನ್ನು ತರಲು  ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮಾಡಲು  ಹಲವಾರು ಆರೋಗ್ಯ ಸೇವಾ ಸಂಸ್ಥೆಗಳಿಗೆ ಕರ್ನಾಟಕ ನೆಲೆಯಾಗಿದೆ ಎಂದರು.

ಕರ್ನಾಟಕದ ಸ್ಟಾರ್ಟ್ ಅಪ್ ವಾತಾವರಣದಲ್ಲಿ  ಅನೇಕ ಆರೋಗ್ಯ ಸೇವಾ ಹಾಗೂ ಜೀವ ವಿಜ್ಞಾನ ಸ್ಟಾರ್ಟ್ ಅಪ್‍ಗಳಿದ್ದು, ನಾವೀನ್ಯತಾ ಪರಿಹಾರಗಳ ಕುರಿತು ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್ ಗಳನ್ನು ಕೂಡ ಒಳಗೊಂಡಿದೆ.  ಡಿಜಿಟಲ್ ಆರೋಗ್ಯ, ವೈಯಕ್ತಿಕ ಔಷಧ ಮತ್ತು  ಔಷಧ ಅನ್ವೇಷಣೆಯತ್ತ ಈ ಸ್ಟಾರ್ಟ್ ಅಪ್‍ಗಳು ಗಮನಹರಿಸುತ್ತಿವೆ. ಕರ್ನಾಟಕ ಸರ್ಕಾರವು ಆರೋಗ್ಯ ಸೇವಾ ವಲಯದಲ್ಲಿ ತಂತ್ರಜ್ಞಾನ ನಾವೀನ್ಯತೆಗಳ ಮೂಲಕ ದಾಪುಗಾಲನ್ನು ಇರಿಸುವ ಮೂಲಕ ಸೇವಾವಲಯದಲ್ಲಿ ಮಾದರಿ ರಾಜ್ಯವೆಂದು ಗುರುತಿಸಿಕೊಂಡಿದೆ. ಬೆಂಗಳೂರು ಬಯೋ ಇನ್ನೊವೇಶನ್ ಸೆಂಟರ್ (ಬಿಬಿಸಿ), ಕರ್ನಾಟಕ ಬಯೋಟೆಕ್ನಾಲಜಿ ನೀತಿ, ಸ್ಟಾರ್ಟ್ ಅಪ್‍ಗಳನ್ನು ಪ್ರಾರಂಭಿಸಲು ಬಯೋ ವೆಂಚರ್ ನಿಧಿ, ಮತ್ತಿತರ ಸೌಲಭ್ಯಗಳನ್ನು ನಮ್ಮ ಸರ್ಕಾರ ಒದಗಿಸುತ್ತಿದೆ ಎಂದು ಹೇಳಿದ್ದಾರೆ.

ಮುಂಚೂಣಿಯಲ್ಲಿರುವ ಭಾರತೀಯ ಹಾಗೂ ಜಾಗತಿಕ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಕರ್ನಾಟಕ  ಹೂಡಿಕೆಗೆ ನೆಚ್ಚಿನ ತಾಣ ಎಂದು ಗುರುತಿಸಲ್ಪಟ್ಟಿದೆ. ಇಂದಿನ ಅವಶ್ಯಕತೆಗಳಿಗೆ ಪೂರಕವಾಗಿರುವಂತೆ ಪ್ರತಿಭೆಗಳನ್ನು ರೂಪಿಸುವ, ಸುಧಾರಿತ ಮೂಲಸೌಕರ್ಯಗಳು,  ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಹಾಗೂ ಜಾಗತಿಕ ಇನ್ನೊವೇಸನ್ ಹಬ್ ಎಂದು ಕರ್ನಾಟಕವನ್ನು ಬ್ರಾಂಡ್ ಮಾಡುವುದು  ನಮ್ಮ ಸರ್ಕಾರದ ಕೆಲವು ಆದ್ಯತೆಗಳು. ಈಝ್ ಆಫ್ ಡೂಯಿಂಗ್ ಬ್ಯುಸಿನೆಸ್ ಬಗ್ಗೆ ಮಾತನಾಡುತ್ತಿರುವ ಈ ಸಂದರ್ಭದಲ್ಲಿ – 2022 ರಲ್ಲಿ ಕರ್ನಾಟಕ ಟಾಪ್ ಅಚೀವರ್ ಶ್ರೇಣಿಯನ್ನು ಪಡೆದಿದೆ ಎಂದು ನಿಮ್ಮ ಗಮನಕ್ಕೆ ತರಲಿಚ್ಚಿಸುತ್ತೇನೆ ಎಂದರು.

ಕರ್ನಾಟಕದಲ್ಲಿ ಕೈಗಾರಿಕಾ ಸ್ನೇಹಿ, ಹೂಡಿಕೆ, ಪ್ರತಿಭೆ ಹಾಗೂ ಅವಕಾಶಗಳಿಗೆ ಪೂರಕವಾದ ನೀತಿಗಳನ್ನು ರೂಪಿಸಲು ಸರ್ಕಾರ  ಉತ್ಸುಕವಾಗಿದೆ. ಕರ್ನಾಟಕ ನಾವಿನ್ಯತೆಗೆ ಹಾಗೂ ತಮ್ಮ ವ್ಯವಹಾರವನ್ನು ವೃದ್ಧಿಸಬಹುದಾದ ಎಂಡ್ ಟು ಎಂಡ್ ವಾತಾವರಣವನ್ನು ಹೊಂದಿರುವ ಕೇಂದ್ರ ಎಂದು ಕೈಗಾರಿಕೆಗಳು ಗುರುತಿಸುವಂತಾಗಬೇಕು ಎನ್ನುವುದು ನಮ್ಮ ಆಶಯ ಎಂದು ಹೇಳಿದ್ದಾರೆ.

ಈ ಕಾರ್ಯಸೂಚಿಯನ್ನು ನಮ್ಮ ನೀತಿಗಳು ಹಾಗೂ ಕಾರ್ಯಕ್ರಮಗಳು ಬೆಂಬಲಿಸುವಂತಿದೆ.  ಸ್ಟಾರ್ಟ್ ಅಪ್, ಐಟಿ, ಎವಿಜಿಸಿ, ಬಯೋಟೆಕ್ನಾಲಜಿ ಹಾಗೂ ಇಎಸ್‍ಡಿಎಂಗಳಿಗೆ ನಿರ್ದಿಷ್ಟವಾದ ನೀತಿಗಳನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ನನ್ನ ಮಾತುಗಳನ್ನು ಮುಗಿಸುವ ಮುನ್ನ, ಬೆಂಗಳೂಟು ಟೆಕ್ ಸಮ್ಮಿಟ್- 2023 ರಲ್ಲಿ ಭಾಗವಹಿಸುವಂತೆ ತಮ್ಮೆಲ್ಲರನ್ನು ನಾನು ಆಹ್ವಾನಿಸುತ್ತೇನೆ. ಕಳೆದ 25 ವರ್ಷಗಳಿಂದ ಬೆಂಗಳೂರು ಟೆಕ್ ಸಮ್ಮಿಟ್ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ  ಕಾರ್ಯಕ್ರಮವಾಗಿದೆ. ತಂತ್ರಜ್ಞಾನ ಹಾಗೂ ನಾವೀನ್ಯತೆಯಲ್ಲಿನ ಅತ್ಯುತ್ತಮವಾದವರನ್ನು ಒಂದೆಡೆ ಸೇರಿಸುವ ಪರಿಣಾಮಕಾರಿ ವೇದಿಕೆಯಾಗಿದೆ ಎಂದಿದ್ದಾರೆ.

ಭಾರತ ಮತ್ತು ಕರ್ನಾಟಕವನ್ನು ತಂತ್ರಜ್ಞಾನ ಹಾಗೂ ನಾವೀನ್ಯತಾ ಕೇಂದ್ರವಾಗಿಸಲು ಹಾಗೂ ನಮ್ಮ ನಡುವಿನ ಸಂಬಂಧವನ್ನು  ಎಲ್ಲಾ ಕ್ಷೇತ್ರಗಳಲ್ಲಿ ಬಲಪಡಿಸಲು ನಾವು ಒಟ್ಟಾಗಿ ಪಯಣಿಸೋಣ. ಒಟ್ಟಾಗಿ ಕಲಿತು, ಒಟ್ಟಾಗಿ ಬೆಳೆಯೋಣ ಎಂದರು.

Ramesh Babu

Journalist

Recent Posts

ಮಹಾವೀರ ಜಯಂತಿ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಇಂದು ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಅದೇರೀತಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ…

4 hours ago

ನಾನು ಯಾರ ಜಮೀನು ಕಬಳಿಕೆ‌ ಮಾಡಿಲ್ಲ- ಕಾನೂನಾತ್ಮಕವಾಗಿ ಜಮೀನು ಖರೀದಿ ಮಾಡಿದ್ದೇನೆ- ನನ್ನ ಏಳಿಗೆ ಸಹಿಸದವರಿಂದ ನನ್ನ ಮೇಲೆ ಹಲ್ಲೆ ನಡೆದಿದೆ- ಕಾನೂನು ಹೋರಾಟ ಮಾಡಿ ಗೆಲ್ಲುವೆ- ವಕೀಲ ಪ್ರತಾಪ್

ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…

5 hours ago

KIADB ಭೂಸ್ವಾಧೀನ ವಿರೋಧಿಸಿ ತಾಲೂಕು ಕಚೇರಿಗೆ ಟ್ರ್ಯಾಕ್ಟರ್ ರ್ಯಾಲಿ

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ. ನಾರನಹಳ್ಳಿ, ಸೊಣ್ಣೇನಹಳ್ಳಿ  ಗ್ರಾಮಗಳ ವ್ಯಾಪ್ತಿಯ ಸುಮಾರು 2100 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು…

13 hours ago

ಹುಟ್ಟಿಸುವವನೂ ಅವನೇ…. ಸಾಯಿಸುವವನೂ ಅವನೇ…

ದೇವರು ಎಷ್ಟೊಂದು ಒಳ್ಳೆಯವನಲ್ಲವೇ........ ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು…

18 hours ago

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ-ಎನ್.ಶೋಭಾ

ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಮಹಿಳಾ ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ ಎಂದು ಆರಕ್ಷಕ ನಿರೀಕ್ಷಕರಾದ ಎನ್.ಶೋಭಾ…

1 day ago

ಮನೆ ಹೊಸ್ತಿಲಿನಲ್ಲಿ ಪೂಜೆಗಿಟ್ಟಿದ್ದ ಒಣಗಿದ ದಾಸವಾಳ ಹೂ ನುಂಗಿ ಆರುವರೆ ತಿಂಗಳ ಮಗು ದಾರುಣ ಸಾವು

ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವನ್ನು ಆಟವಾಡುತ್ತಾ ನುಂಗಿದ ಆರುವರೆ ತಿಂಗಳ ಕಂದಮ್ಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ…

1 day ago