ಕರ್ನಾಟಕದ ಅತ್ಯಂತ ಕಿರಿಯ ಶೂಟರ್ ಎಂಬ ಖ್ಯಾತಿ ಪಡೆದ ಉಮಾ ಕಾರ್ತಿಕ್ ಪಾಟಿಬಂಡ್ಲ

ಬೆಂಗಳೂರು : ಜ್ಞಾನಭಾರತಿ ಅವರಣದಲ್ಲಿರುವ ಸ್ಪೋರ್ಟ್ಸ್‌ ಅಥಾರಿಟಿ ಆಫ್ ಇಂಡಿಯಾ (SAI) ನಲ್ಲಿ ನಡೆದ ಕರ್ನಾಟಕ ಸ್ಟೇಟ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಉಮಾ ಕಾರ್ತಿಕ್ ಪಾಟಿಬಂಡ್ಲ ಅತ್ಯುತ್ತಮ ಸಾಧನೆ ಮಾಡುವ ಮೂಲಕ ವೈಯಕ್ತಿಕವಾಗಿ ನಾಲ್ಕು ಪದಕವನ್ನ ಪಡೆದಿದ್ದಾರೆ.

ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ಕರ್ನಾಟಕ ಸ್ಟೇಟ್ ಶೂಟಿಂಗ್ ಚಾಂಪಿಯನ್ ಶಿಪ್ ನಡೆದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ 10 ವರ್ಷದ ಬಾಲಕ ಉಮಾ ಕಾರ್ತಿಕ್ ಪಾಟಿಬಂಡ್ಲ ಅತ್ಯುತ್ತಮ ಸಾಧನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

10 ಮೀಟರ್ ಏರ್ ರೈಫಲ್ ನಲ್ಲಿ 400 ಪಾಯಿಂಟ್ಸ್ ಗಳಲ್ಲಿ 363 ಪಾಯಿಂಟ್ಸ್ ಗಳಿಸುವ ಮೂಲಕ 4 ಪದಕಗಳನ್ನ ಪಡೆದಿದ್ದಾರೆ. ವೈಯಕ್ತಿಕವಾಗಿ ಚಿನ್ನ, ಯುವಕರ ವಿಭಾಗದಲ್ಲಿ ಚಿನ್ನ, ಯುವಕರ ತಂಡದಲ್ಲಿ ಚಿನ್ನ ಹಾಗೂ ಉಪ ಯುವಕರ ತಂಡದಲ್ಲಿ ಬೆಳ್ಳಿ ಪದಕವನ್ನ ಪಡೆದಿದ್ದಾರೆ. ಈ ಸಾಧನೆಯ ಮೂಲಕ ಉಮಾ ಕಾರ್ತಿಕ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹಾಕ್-ಐ ರೈಫಲ್ ಅಂಡ್ ಶೂಟಿಂಗ್ ಅಕಾಡೆಮಿಯಲ್ಲಿ ಶೂಟಿಂಗ್ ತರಬೇತಿಯನ್ನ ಪಡೆಯುತ್ತಿದ್ದು, ತರಬೇತಿದಾರರಾದ ಶರಣೇಂದ್ರ ಕೆ.ವೈ ರವರ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಾಗಿ ತಯಾರಿ ನಡೆಸಿದ್ದಾರೆ.

ಉಮಾ ಕಾರ್ತಿಕ್ 2028ರಲ್ಲಿ ಲಾಸ್ ಎಂಜಲೀಸ್ ನಲ್ಲಿ ನಡೆಯುವ ಒಲಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತ ದೇಶದ ಪರವಾಗಿ ಸ್ಪರ್ಧಿಸುವ ಕನಸು ಕಂಡಿದ್ದಾರೆ.

ಈಗಾಗಲೇ ಕರ್ನಾಟಕದ ಅತ್ಯಂತ ಕಿರಿಯ ಶೂಟರ್ ಎಂಬ ಖ್ಯಾತಿ ಪಡೆದಿರುವ ಇವರು, ಮಾರ್ಕ್ ಮ್ಯಾನ್ ಶಿಪ್ ಸ್ಪೋರ್ಟ್ಸ್ ಶೂಟಿಂಗ್ ಚಾಂಪಿಯನ್ ಶಿಪ್ 2024 ನಲ್ಲಿ ಪ್ರತಿಷ್ಠಿತ ಎರಡು ಬೆಳ್ಳಿ ಪದಕ, ಮಿನಿ ಒಲಿಪಿಂಕ್ಸ್ 2024 ರಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಕರ್ನಾಟಕ ಅತ್ಯಂತ ಕಿರಿಯ ಶೂಟರ್ ಖ್ಯಾತಿಯನ್ನ ಗಳಿಸಿದ್ದಾರೆ.

Leave a Reply

Your email address will not be published. Required fields are marked *