ಕರ್ತವ್ಯದಲ್ಲಿದ್ದ ಯೋಧನಿಗೆ ಹೃದಯಾಘಾತವಾಗಿದ್ದು, ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗಂಗ್ಟೊಕ್ ಗಡಿ ಪ್ರದೇಶದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತೊಂಡೇಭಾವಿ ಗ್ರಾಮದ ಗಂಗಾಧರಪ್ಪ (54) ಮೃತ ಯೋಧ.
ಪಶ್ಚಿಮ ಬಂಗಾಳದ ಗಂಗ್ಟೊಕ್ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಲಾಗಿದೆ.
ಯೋಧ ಗಂಗಾಧರಪ್ಪನವರು ಮೂರು ದಶಕಗಳಿಂದ ದೇಶದ ಭದ್ರತೆಗೆ ಗಡಿ ಕಾದಿದ್ದರು. ಇಂಡೋ ಟಿಬೇಟಿಯನ್ ಬಾರ್ಡರ್ ಪೋರ್ಸ್ ನಲ್ಲಿ ಹವಾಲ್ದಾರ್ ಸಹ ಆಗಿದ್ದರು.
ಶನಿವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಐಟಿಬಿಪಿ ಪಡೆಯು ಪಾರ್ಥಿವ ಶರೀರವನ್ನು ತೊಂಡೆಭಾವಿ ಗ್ರಾಮಕ್ಕೆ ತರಲಾಗುತ್ತಿದೆ.
ಇಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ…