
ಡ್ರಿಂಕ್ & ಡ್ರೈವ್ ಪ್ರಕರಣ ಪರಿಶೀಲನೆ ವೇಳೆ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿಯ ಬೈಪಾಸ್ ನಲ್ಲಿ ನಡೆದಿದೆ…
ಕಾರು ಚಾಲಕನನ್ನ ಊದಲು ಪೊಲೀಸರು ಹೇಳಿದಾಗ ಕಾರು ಚಾಲಕ ನಿರಾಕರಿಸಿ, ಕಾರಿನಿಂದ ಕೆಳಗಿಳಿದು ಟ್ರಾಫಿಕ್ ಪೊಲೀಸರ ಮೇಲೆ ದರ್ಪ ತೋರಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ….

ಕಾರು ಚಾಲಕ ಕೆಳಗಿಳಿಯುತ್ತಲೇ ಕಾರಿನಲ್ಲಿದ್ದ ಆರೋಪಿಗಳು ಪೊಲೀಸರ ಮೇಲೆ ದಾಂಧಲೆ ನಡೆಸಿದ್ದಾರೆ.. ಪೊಲೀಸರನ್ನ ಎಳೆದಾಡಿ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವ ಆರೋಪದ ಮೇಲೆ ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕವಾಗಿ ಅವಮಾನಿಸಿರುವ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ..
ಎ1 ಕಿಶೋರ್, ಎ2ಪ್ರತಾಪ್, ಎ3ರಘುನಂದನ್,ಎ4 ಕಾರ್ತಿಕ್ ಮೇಲೆ ಎಫ್ ಐ ಆರ್ ಮಾಡಲಾಗಿದೆ..
ಟ್ರಾಫಿಕ್ ಪೊಲೀಸರು ನೀಡಿರುವ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗಿದೆ….