ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಬಿಡುಗಡೆಗಾಗಿ ಶ್ರೀ ಘಾಟಿ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಕೆ

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮತ್ತು ಪುಟ್ಟೇಗೌಡರು ಸಣ್ಣೀರಪ್ಪ, ಕಾರ್ಯಕರ್ತರನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಕರವೇ ಮುಖಂಡರು ಶ್ರೀ ಘಾಟಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಡಿ.27ರಂದು ಕನ್ನಡದ ನಾಮಫಲಕದ ಅಭಿಯಾನದ ವೇಳೆ, ಇಂಗ್ಲಿಷ್ ಹಾಗೂ ಹಿಂದಿ ನಾಮಫಲಕಗಳನ್ನು ತೆಗೆದು ಎಸೆಯುವ ಮೂಲಕ ಕನ್ನಡ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮತ್ತು ಕಾರ್ಯಕರ್ತರನ್ನು ಬಂಧನ ಮಾಡಲಾಗಿತ್ತು.

ಕೂಡಲೇ ರಾಜ್ಯ ಸರ್ಕಾರ ಬಂಧನಕ್ಕೆ‌ ಒಳಗಾದವರನ್ನ ಬಿಡುಗಡೆ ಮಾಡಬೇಕು ಎಂದು ಕರವೇ ರಾಜ್ಯ ಮಹಿಳಾ ಉಪಾಧ್ಯಕ್ಷರಾದ ಅನ್ನಪೂರ್ಣ, ತಾಲೂಕು ಕರವೇ ಅಧ್ಯಕ್ಷ ಪುರುಷೋತ್ತಮ ಗೌಡ ನೇತೃತ್ವದಲ್ಲಿ  ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷವಾಗಿ ಅರ್ಚನೆ ಮಾಡಿ ಪೂಜೆಯನ್ನು ಸಲ್ಲಿಸಲಾಯಿತು.

ಈ ವೇಳೆ ಶ್ರೀನಾಥ್, ಮೆಹಬೂಬ್, ಸಂಜೀವ್ ನಾಯಕ್, ಶೋಭಾ, ಗಂಗಾ, ಗೀತಾ, ಭಾಗ್ಯಮ್ಮ ಸೇರಿದಂತೆ ಕರವೇ ಕಾರ್ಯಕರ್ತರು ಭಾಗಿಯಾಗಿದ್ದರು.

Ramesh Babu

Journalist

Recent Posts

ತಂದೆಯಿಂದಲೇ ಮಗನ ಕೊಲೆ: ಮಗನ ಕೊಲೆ ಆರೋಪಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ಥಳಿತ; ಪೊಲೀಸ್ ಜೀಪಿನಿಂದ ಎಳೆದು ಹಲ್ಲೆ

ಕುಣಿಗಲ್, ನ.15: ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ತಂದೆಯೇ ತನ್ನ 16 ವರ್ಷದ ಮಗನನ್ನು ಹಾರೆಕೋಲಿನಿಂದ ಹೊಡೆದು…

10 hours ago

ಜೇನುಕೃಷಿಯ ಸಿಹಿ ಬದುಕು; ವರ್ಷಕ್ಕೆ ಲಕ್ಷಾಂತರ ಆದಾಯ ಗಳಿಸುತ್ತಿರುವ ಮಧುರೆಯ ಯುವಕ

ದೊಡ್ಡಬಳ್ಳಾಪುರ: ತಿಂಗಳ ಸಂಬಳಕ್ಕಾಗಿ ಮತ್ತೊಬ್ಬರ ಬಳಿ ಕೆಲಸ ಮಾಡುವುದಕ್ಕಿಂತ ಸ್ವಂತ ಕೃಷಿ ಭೂಮಿಯಲ್ಲೇ ಹೊಸ ಉದ್ಯಮ ಆರಂಭಿಸಿ ಸ್ವಾವಲಂಬಿ ಬದುಕು…

11 hours ago

ಮಾರುತಿನಗರ ವಾರ್ಡ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಆರಂಭದಲ್ಲೇ ಕಾಯಿಲೆ ಪತ್ತೆ ಹಚ್ಚುವುದು ಮುಖ್ಯ: ಆದಿಲಕ್ಷ್ಮಿ

ದೊಡ್ಡಬಳ್ಳಾಪುರ: ನಗರದ ಮಾರುತಿನಗರದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿಸಿಡಿಸಿ (ಸೆಂಟರ್ ಫಾರ್ ಕ್ರಾನಿಕ್ ಡಿಸೀಸ್ ಕಂಟ್ರೋಲ್) ಸಂಸ್ಥೆಯ ಸಹಯೋಗದೊಂದಿಗೆ ಉಚಿತ…

15 hours ago

ಲೋಕಾಯುಕ್ತ ದಾಳಿ ವೇಳೆ ಅರಣ್ಯಾಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಖಜಾನೆಯೇ ಪತ್ತೆ..!!

ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ₹26.36 ಲಕ್ಷ ನಗದು,…

18 hours ago

ಮಕ್ಕಳ ದಿನಾಚರಣೆ: ಸರ್ವಜ್ಞನಗರದಲ್ಲಿ ನವೀಕೃತ 3 ಅಂಗನವಾಡಿ ಉದ್ಘಾಟಿಸಿದ ಸುಜಾ ಜಾರ್ಜ್

ಮಕ್ಕಳ ದಿನಾಚರಣೆಯ ಅಂಗವಾಗಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನವೀಕರಣಗೊಂಡ ಹತ್ತು ಅಂಗನವಾಡಿ ಕೇಂದ್ರ ಹಾಗೂ ಒಂದು ಶಾಲೆಯನ್ನು ಕೇಳಚಂದ್ರ ಪ್ರತಿಷ್ಠಾನದ…

1 day ago

ಹರೀಶ್ ಗೌಡರು ರಾಜಕೀಯ ಚಪಲಕ್ಕಾಗಿ ನಾಲಿಗೆ ಹರಿಬಿಡುವುದನ್ನು ನಿಲ್ಲಿಸಲಿ: ರಾಜಕೀಯ ಚಪಲ ಬಿಟ್ಟು ಬಹಿರಂಗ ಚರ್ಚೆಗೆ ಬನ್ನಿ: ಹರೀಶ್ ಗೌಡರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಪುನೀತ್ ಸವಾಲು

ದೊಡ್ಡಬಳ್ಳಾಪುರ: ರಾಜಕೀಯ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸುವುದು ಹಾಗೂ ರಾಜಕೀಯ ಚಪಲಕ್ಕಾಗಿ ಮನಬಂದಂತೆ ಮಾತನಾಡುವುದನ್ನು ಜೆಡಿಎಸ್ ತಾಲೂಕು ಅಧ್ಯಕ್ಷ ಹರೀಶ್ ಗೌಡರು…

1 day ago