ಕನ್ನಡ ಸಾಹಿತ್ಯಕ್ಕೆ ಕುವೆಂಪು ಕೊಡುಗೆ ಅನನ್ಯ- ಜಿ.ಎಸ್.ಸ್ಮಿತಾ

ಕುವೆಂಪು ಅವರ ಸಾಹಿತ್ಯವು ವೈಚಾರಿಕತೆಯಿಂದ ಹಿಡಿದು ಆಧ್ಯಾತ್ಮಿಕತೆಯ ತನಕ ಎಲ್ಲಾ ವಿಚಾರಗಳನ್ನು ಒಳಗೊಂಡಿದೆ. ಜನಸಾಮಾನ್ಯರನ್ನು ಶ್ರೀಸಾಮಾನ್ಯ ಎಂದು ಕರೆದ ಕುವೆಂಪು ಅವರು ಶತಮಾನದ ಶ್ರೇಷ್ಠ ಸಾಹಿತಿಯಾಗಿದ್ದಾರೆ ಎಂದು ದೊಡ್ಡಬಳ್ಳಾಪುರ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾದ ಜಿ.ಎಸ್.ಸ್ಮಿತಾ ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಂಸ್ಕೃತಿ ಟ್ರಸ್ಟ್ ಸಹಯೋಗದಲ್ಲಿ ಡಾ.ಹುಲಿಕಲ್ ನಟರಾಜು ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಕನ್ನಡದ ಗಾನ ಪಯಣ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಕಾವ್ಯ ಕುರಿತು ಮಾತನಾಡಿದರು.

ಸಮಸಮಾಜ ನಿರ್ಮಾಣವಾಗಬೇಕು, ಸಾಹಿತ್ಯ ಜನಸಾಮಾನ್ಯರನ್ನು ತಲುಪುಬೇಕು. ಮೌಢ್ಯತೆ, ಕಂದಾಚಾರ, ಅಂಧಭಕ್ತಿಯಿಂದ ಜನರು ಹೊರಬಂದು ನಿಜ ದೇಶಭಕ್ತಿ ಮತ್ತು ವಿಶ್ವಮಾನವ ಪ್ರಜ್ಞೆ. ನಾಡು ನುಡಿ, ದೇಶಪ್ರೇಮ, ವಿಶ್ವಮಾನವತೆ, ಪ್ರಕೃತಿ ಸೌಂದರ್ಯ, ಸಾಮಾಜಿಕ ಪ್ರಜ್ಞೆ, ಜನಸಾಮಾನ್ಯರ ಬದುಕು ಬವಣೆಗಳನ್ನು ಕುವೆಂಪು ತಮ್ಮ ಕೃತಿಗಳಲ್ಲಿ  ಅನಾವಣಗೊಳಿಸಿದ್ದಾರೆ ಎಂದರು.

ಮಕ್ಕಳ ಸಾಹಿತ್ಯ ಬೊಮ್ಮನಹಳ್ಳಿ ಕಿಂದರಜೋಗಿಯಿಂದ ಹಿಡಿದು ಮಹಾಕಾವ್ಯ ಶ್ರೀರಾಮಾಯಣದರ್ಶನಂ ತನಕ ಕುವೆಂಪು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ. ಕುವೆಂಪು ಅವರ ಸಾಹಿತ್ಯ ಸಮಾಜಮುಖಿ, ಸಮಾಜ ಪರಿವರ್ತನೆ ಸಹಕಾರಿಯಾಗಿದೆ ಎಂದರು.

ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು, ನೇಗಿಲಮೇಲೆ ನಿಂತಿದೆ ಧರ್ಮ, ಮಂತ್ರಮಾಂಗಲ್ಯ, ವಿಶ್ವ ಮಾನವ ಸಂದೇಶ ಮುಂತಾದ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸಿದ ಕುವೆಂಪು ಅವರು ಕನ್ನಡ ಸಾಹಿತ್ಯವನ್ನು ವಿಶ್ವಮಾನ್ಯಗೊಳಿಸಿದರು ಎಂದರು.

ಜವಾಹರ ನವೋದಯ ವಿದ್ಯಾಲಯದ ನಿವೃತ್ತ ಕನ್ನಡ ಅಧ್ಯಾಪಕ ಹೆಗಡೆ ಮಾತನಾಡಿ, ಕುವೆಂಪು ಅವರ ಸೃಜನಶೀಲ ಪ್ರತಿಭೆ ಸಾಕ್ಷಿ ಎಂದರೆ ಪಕ್ಷಿಗಳ ಹಾರಾಟ ನೋಡಿದ  ದೇವರು ರುಜು ಮಾಡಿದನು ಎಂಬ ರೂಪಕದಲ್ಲಿ ನೋಡಬಹುದಾಗಿದೆ. ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೇ ದೇವಿ ಪೂಜಿಸುವ ಬಾರಾ ಕವಿತೆಯ ಸಾಲು ನಿಜದೇಶಭಕ್ತಿಯನ್ನು ಪ್ರತಿಪಾದಿಸುತ್ತವೆ. ಜೀವಪರವಾದ ಕುವೆಂಪು ಸ್ತ್ರೀಪರ ನಿಲುವುಗಳನ್ನು ಮಹಾಕಾವ್ಯದಲ್ಲಿ ಬರುವ ಮಂಥರೆ, ಊರ್ವಿಳೆ ಪಾತ್ರಗಳಲ್ಲಿ ಕಾಣಬಹುದಾಗಿದೆ. ಕುವೆಂಪು ಅವರ ಸಾಹಿತ್ಯ ಸಾಮಾಜಿಕ ಬದಲಾವಣೆಗೆ ಪ್ರೇರಕಶಕ್ತಿಯಾಗಿದೆ ಎಂದರು.

ಕುವೆಂಪು ಅವರ ಭಾವಗೀತೆಗಳನ್ನು ಕಲಾವಿದರಾದ ರವಿರಾಜ್,  ನಾಗರತ್ಮ‌ಮಹಾಬಲೇಶ್ವರ್, ಚಂದ್ರಶೇಖರ್, ನಾಗರತ್ನಮ್ಮ, ಎಂ.ಪಿ.ಸಿ.ವೆಂಕಟೇಶ್, ಷಫೀರ್, ನಾಗದಳ ನಟರಾಜ್, ದರ್ಗಾಜೋಗಿಹಳ್ಳಿ ಮಲ್ಲೇಶ್     ಮುಂತಾದವರು ಹಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಫೋಟೋಗ್ರಾಫರ್ ಸಂಘದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಂಪತ್ತಕುಮಾರ್ ಅವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನೆ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಗೌರವ ಅಧ್ಯಕ್ಷ. ಕಂಟನುಕುಂಟೆ ಕೃಷ್ಣಮೂರ್ತಿ, ಕನ್ನಡಪರ ಹಿರಿಯ ಹೋರಾಟಗಾರ ತ.ನ.ಪ್ರಭುದೇವ್,  ನಿವೃತ್ತ ಪ್ರಾಂಶುಪಾಲ ಮೇಜರ್ ಎಸ್.ಮಹಾಬಲೇಶ್ವರ್, ಲಯನ್ಸ್ ಕ್ಲಬ್ ‌ಕೋಶಾಧ್ಯಕ್ಷ ಕೆ.ಪಿ.ಲಕ್ಷ್ಮೀನಾರಾಯಣ್, ಮಾಜಿ ಅಧ್ಯಕ್ಷ ಆರ್
ಎಸ್.ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮತ್ತು  ಪದಾಧಿಕಾರಿಗಳು, ಸಂಸ್ಕೃತಿ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ನಾಗೇಶ್ ಮತ್ತು ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.

Ramesh Babu

Journalist

Recent Posts

ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ: ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ

"ಕುಮಾರಸ್ವಾಮಿ ಯಾರು? Who is kumaraswmay. ಡಿ.ಕೆ. ಶಿವಕುಮಾರ್ ಸಿಎಂ ಆಗಿರುವುದನ್ನು ಒಪ್ಪದಿರುವುದಕ್ಕೆ ಅವರು ಯಾರು? ಅವರಿಗೂ ಇದಕ್ಕೂ ಏನು…

2 hours ago

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ: ಅ.21 ರಿಂದ ಅ.23 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2026ರ ಸಂಬಂಧ ಅಕ್ಟೋಬರ್ 23 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ…

6 hours ago

ಸಮಾಜಸೇವೆ ಮೂಲಕ ಹುಟ್ಟುಹಬ್ಬ ಆಚರಣೆ ಎಲ್ಲರಿಗೂ ಮಾದರಿ: ಸಂಜೀವ್ ನಾಯಕ್

ದೊಡ್ಡಬಳ್ಳಾಪುರ: ಅದ್ದೂರಿ ಆಚರಣೆಗಳಿಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸುವುದು ಇತರರಿಗೂ ಮಾದರಿಯಾಗಲಿದೆ ಎಂದು ಕನ್ನಡ ಪಕ್ಷದ ರಾಜ್ಯ…

8 hours ago

ನಾಡಕಚೇರಿ, ಕಾವೇರಿ ತಂತ್ರಾಂಶಕ್ಕೆ ತಾಂತ್ರಿಕ ಗ್ರಹಣ! ಸರ್ವರ್ ಸಮಸ್ಯೆಯಿಂದ ಸರ್ಕಾರಿ ಸೇವೆಗಳಿಗೆ ಬ್ರೇಕ್‌; ಕಚೇರಿಗಳಿಗೆ ಅಲೆದು ಹೈರಾಣಾದ ಜನರು

ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ, ತ್ವರಿತವಾಗಿ ತಲುಪಿಸಬೇಕೆಂಬ ಉದ್ದೇಶದಿಂದ ಜಾರಿಗೆ ತಂದಿರುವ ಡಿಜಿಟಲ್ ವ್ಯವಸ್ಥೆಗಳೇ ಇದೀಗ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿವೆ.…

8 hours ago

ದೊಡ್ಡಬಳ್ಳಾಪುರದಲ್ಲಿ 4 ಲಕ್ಷ ಮೌಲ್ಯದ ಗಾಂಜಾ ವಶ: ಆರೋಪಿ ಬಂಧನ

ದೊಡ್ಡಬಳ್ಳಾಪುರ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ,…

10 hours ago

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

13 hours ago