
ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು.

ಸಾರ್ವಜನಿಕರಿಗೆ ಉಚಿತವಾಗಿ ತಜ್ಞ ವೈದ್ಯರಿಂದ ಮಧುಮೇಹ, ಬಿಪಿ(ರಕ್ತದೊತ್ತಡ) ತಪಾಸಣೆ, ಇಸಿಜಿ ತಪಾಸಣೆ, ಸಾಮಾನ್ಯ ತಪಾಸಣೆ ಸೇರಿದಂತೆ ಇತರೆ ಆರೋಗ್ಯ ತಪಾಸಣೆ ನಡೆಸಲಾಯಿತು.

ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆ ಮಾಲೀಕ ಡಾ.ವೆಂಕಟೇಶ್ ಪ್ರಸಾದ್, ಕನ್ನಡ ರಾಜ್ಯೋತ್ಸವ ಅಂಗವಾಗಿ ಹೀಲಿನ್ ಆಸ್ಪತ್ರೆಯಲ್ಲಿ ಸಾರ್ವಜನಿಕರ ಒಳತಿಗಾಗಿ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬರವನ್ನು ಆಯೋಜನೆ ಮಾಡಲಾಗುವುದು ಎಂದರು.

ಪ್ರಸ್ತುತ ಚಳಿಗಾಲ ಪ್ರಾರಂಭವಾಗಿದೆ. ಚಳಿಗಾಲದಲ್ಲಿ ವಯಸ್ಸಾದವರು, ಶ್ವಾಸಕೋಶ ಸಮಸ್ಯೆ ಇರುವವರು, ಉಸಿರಾಟದ ಸಮಸ್ಯೆ ಇರುವವರು ಮುಂದಿನ ಫೆಬ್ರವರಿಯವರೆಗೆ ಸ್ವಲ್ಪ ಎಚ್ಚರದಿಂದ ಇರಬೇಕು. ಬಿಸಿ ನೀರು, ಬಿಸಿ ಊಟ, ಬಿಸಿನೀರಿನ ಸ್ನಾನ, ಬೆಚ್ಚನೆಯ ಹೊದಿಕೆಯನ್ನು ಬಳಸಬೇಕು.

ಈ ವೇಳೆ ಡಾ.ನವೀನ್ ಕುಮಾರ್ ಎನ್, ಡಾ.ತೇಜಸ್ ರಾಮ್, ಆಸ್ಪತ್ರೆ ಮಾಲೀಕ ಡಾ.ವೆಂಕಟೇಶ್ ಪ್ರಸಾದ್, ರಂಜಿತ್, ಅರವಿಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು…