ಕನ್ನಡ ನಾಡಿನ ನೆಲ, ಜಲದ ಋಣವನ್ನ ತೀರಿಸುವುದಕ್ಕೆ‌ ಆಗೋದಿಲ್ಲ- ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗೆ ನಾವು ಗೌರವ ನೀಡಲೇಬೇಕು- ನಟಿ ಪೂಜಾ ಗಾಂಧಿ

ಬೇರೆ ಬೇರೆ ರಾಜ್ಯಗಳಿಂದ,‌ ದೇಶಗಳಿಂದ ಕರ್ನಾಟಕಕ್ಕೆ ಬಂದವರು ಮೊದಲು ಕನ್ನಡವನ್ನ ಕಲಿತು ಮಾತನಾಡಬೇಕು. ಕನ್ನಡ ನಾಡಿನ ನೆಲ, ಜಲದ ಋಣವನ್ನ ತೀರಿಸುವುದಕ್ಕೆ‌ ಆಗೋದಿಲ್ಲ. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗೆ ನಾವು ಗೌರವ ನೀಡಲೇಬೇಕು. ನಾನು ಬೇರೆ ರಾಜ್ಯದವರಾಗಿರಬಹುದು ಆದರೆ ನನ್ನ ಕರ್ಮ ಭೂಮಿ ಕರ್ನಾಟಕ. ನಾನು ಕನ್ನಡತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಬಯಸುತ್ತೇನೆ ಎಂದು ನಟಿ ಪೂಜಾಗಾಂಧಿ ಹೇಳಿದರು.

ನಗರದ ನಿವೇದಿತಾ ಶಾಲೆಯ 43ನೇ ವರ್ಷದ ವಾಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಮಕ್ಕಳಂತೆ ಬೆರತ ಅವರು ಪುಟಾಣಿ ಮಕ್ಕಳ ಜೊತೆ ಕನ್ನಡ ಹಾಡುಗಳನ್ನ ಹಾಡಿದ ನಂತರ ಅವರು ಮಾತನಾಡಿದರು. ಈ ನೆಲಕ್ಕೆ ಯಾರೇ ಬಂದರೂ ಕನ್ನಡ ಕಲಿಯಲೇ ಬೇಕು ಪೂರ್ತಿಯಾಗಿ ಕನ್ನಡ ಕಲಿಯದೆ ಇದ್ದರು ಸ್ವಲ್ಪ ಆದರೂ ಕನ್ನಡ ಕಲಿಯಬೇಕೆಂದು ಹೊರ ರಾಜ್ಯದ ಇಲ್ಲಿನ ನಿವಾಸಿಗಳಿಗೆ ಹೇಳಿದರು.

ಕನ್ನಡ ನಾಮಫಲಕ ಹೋರಾಟದಲ್ಲಿ ಸಿನಿಮಾ ನಟ ನಟಿಯರು ಭಾಗವಹಿಸಿಲ್ಲ ಎಂಬ ಪ್ರಶ್ನೆಗೆ ಮಾತನಾಡಿದ ಅವರು, ಕನ್ನಡ ನಾಮಫಲಕ ಹೋರಾಟಕ್ಕೆ  ನಾನು ಈಗಾಗಲೇ ಬೆಂಬಲ ಕೊಟ್ಟಿದ್ದೇನೆ, ಹಿಂಸಾತ್ಮಕವಾಗಿ ಏನು ಮಾಡಬಾರದು, ಕಾನಾನಿನ ಅಡಿಯಲ್ಲೇ ಹೋರಾಟ ಮಾಡಬೇಕು, ಕಾನೂನಿನಲ್ಲೇ 60 ರಷ್ಟು ಕನ್ನಡ ಭಾಷೆ ನಾಮಫಲಕದಲ್ಲಿ ಇರಬೇಕೆಂದ್ದು ಹೇಳಲಾಗಿದೆ ಅದನ್ನ ಎಲ್ಲರೂ ಪಾಲಿಸಬೇಕು ಎಂದರು.

ನಿವೇದಿತಾ ಶಾಲೆಯ ಕಾರ್ಯದರ್ಶಿ ಪುರುಷೋತ್ತಮ್ ಮಾತನಾಡಿ, 1981ರಲ್ಲಿ ಪ್ರಾರಂಭವಾದ ಶಾಲೆ ಇವತ್ತು 43ನೇ ವರ್ಷದ ವಾಷಿಕೋತ್ಸವವನ್ನ ಸಂಭ್ರಮ-2023 ಹೆಸರಲ್ಲಿ ಆಚರಿಸಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಕಡಿಮೆ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ನಮ್ಮ ಶಾಲೆಯೆಂಬ ಹೆಮ್ಮೆ ಇದೆ ಎಂದರು.

ನಂತರ ನಿವೃತ್ತ ಎಸಿಪಿ ಸುಬ್ಬಣ್ಣ ಮಾತನಾಡಿ, ಇದೇ ಮೊದಲ ಸಲ ಪೂಜಾಗಾಂಧಿಯವರು ದೊಡ್ಡಬಳ್ಳಾಪುರಕ್ಕೆ ಬಂದಿದ್ದಾರೆ, ಅವರನ್ನ ನೋಡಿ ಮಕ್ಕಳು ಪೋಷಕರು ಖುಷಿಪಟ್ಟಿದ್ದಾರೆ. ಹೊರ ರಾಜ್ಯದಿಂದ ಬಂದು ಕನ್ನಡ ಕಲಿತು ಮಾತನಾಡುವ ನಟಿ ಇದ್ದರೇ ಅವರು ಪೂಜಾಗಾಂಧಿ ಮಾತ್ರ ಎಂದರು.

ನಿವೇದಿತಾ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನ ನೀಡಲಾಗುತ್ತಿದೆ, ಈ ಶಾಲೆಯಲ್ಲಿ ಕಲಿತಾ ವಿದ್ಯಾರ್ಥಿಗಳು ಈಗ ಉನ್ನತ ಅಧಿಕಾರಿಗಳಾಗಿದ್ದಾರೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿರುವ ಮುನಿಕೃಷ್ಣ ಅವರು ಸಹ ಇದೇ ಶಾಲೆಯ ವಿದ್ಯಾರ್ಥಿ ಎಂದರು.

ಈ ವೇಳೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿ, ಪೋಷಕರು‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *