ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ‘ಆದಿಪುರುಷ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಕನ್ನಡಿಗರಿಗೆ ‘ಆದಿಪುರುಷ್’ ಭಾರೀ ನಿರಾಸೆ ನೀಡಿದ್ದು, ಕನ್ನಡದಲ್ಲಿ ಸಿನಿಮಾ ಶೋಗಳೇ ಇಲ್ಲ. ಕನ್ನಡ ಪ್ರೇಕ್ಷಕರ ಕೋಪಕ್ಕೆ ಸಿನಿಮಾ ಗುರಿಯಾಯ್ತಾ? ಹಿಂದಿ ಹಾಗೂ ತೆಲುಗು ಪ್ರದರ್ಶನಕ್ಕೆ ಮಣೆ ಹಾಕಿದ್ದು, ಬೆಂಗಳೂರಿನಲ್ಲೂ ತೆಲುಗು ಶೋಗಳಿಗೆ ಬೇಡಿಕೆಯಿದೆ.
‘ಆದಿಪುರುಷ್’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸಿನಿಮಾ ವೀಕ್ಷಣೆಗೆ ಈಗಾಗಲೇ ಟಿಕೆಟ್ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ. ಜೂನ್.16ಕ್ಕೆ ‘ಆದಿಪುರುಷ್’ ಬೆಳ್ಳಿ ತೆರೆಗೆ ಬರಲಿದ್ದು, ಈ ಸಿನಿಮಾದಲ್ಲಿ ನಟ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಳ್ತಿದ್ದಾರೆ. ‘ಆದಿಪುರುಷ್’ ಸಿನಿಮಾದ ಟಿಕೆಟ್ ಬಲು ದುಬಾರಿಯಾಗಿದ್ದು, ಆದರೂ ಟಿಕೆಟ್ ಬುಕ್ಕಿಂಗ್ ಭರದಿಂದ ಸಾಗುತ್ತಿದೆ. ಸಿನಿಮಾ ಟಿಕೆಟ್ 750 ರಿಂದ 1250ಕ್ಕೆ ಸಿಗ್ತಿದ್ದು, ಏಕಪರದೆಯಲ್ಲಿ ಟಿಕೆಟ್ ಗೆ 200ರೂ ಇದೆ.
ಇಂದು ಚಿತ್ರದ ಮುಂಗಡ ಬುಕಿಂಗ್ ತೆರೆಯಲ್ಪಟ್ಟಿದ್ದು, ಕರ್ನಾಟಕದಲ್ಲಿಯೂ ಸಹ ಬುಕಿಂಗ್ ಶುರುವಾಗಿದೆ. ಕಾರ್ತಿಕ್ ಗೌಡ ಒಡೆತನದ ಕೆಆರ್‌ಜಿ ಸ್ಟುಡಿಯೋಸ್ ಆದಿಪುರುಷ್ ಚಿತ್ರದ ಕರ್ನಾಟಕ ವಿತರಣಾ ಹಕ್ಕನ್ನು ಖರೀದಿಸಿದ್ದು, ರಾಜ್ಯಾದ್ಯಂತ ಚಿತ್ರವನ್ನು ವಿತರಿಸಲಿದೆ. ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ತುಮಕೂರು ಸೇರಿದಂತೆ ಹಲವು ನಗರಗಳಲ್ಲಿ ಮುಂಗಡ ಬುಕ್ಕಿಂಗ್ ತೆರೆಯಲಾಗಿದೆ.
ಚಿತ್ರಕ್ಕೆ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ. ಹಾಗೆಯೇ ಮೊದಲು ಈ ಚಿತ್ರ ಭಾರೀ ಟೀಕೆಗೆ ಗುರಿಯಾಗಿತ್ತು. ಇದೀಗ ‘ಆದಿಪುರುಷ್’ ಬಿಡುಗಡೆಗಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.