ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿ ಕನಸವಾಡಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಫೆ. 27ರಂದು ಚುನಾವಣೆ ನಡೆದಿತ್ತು. ಶುಕ್ರವಾರ (ಮೇ.2) ಇದರ ಫಲಿತಾಂಶ ಹೊರಬಿದ್ದಿದ್ದು, ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿತ 12 ಮಂದಿ ಗೆದ್ದು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತು “ಪಬ್ಲಿಕ್ ಮಿರ್ಚಿ” ಯೊಂದಿಗೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಮಾತನಾಡಿ, ಕಳೆದ 25 ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. 25 ವರ್ಷಗಳಿಂದಲೂ ಸೊಸೈಟಿ ಅಭಿವೃದ್ಧಿಗಾಗಿ ಅವಿರೋಧ ಆಯ್ಕೆಯ ನಿರ್ಧಾರ ಕೈಗೊಂಡು ಚುನಾವಣೆ ಕೈಬಿಡಲಾಗುತ್ತಿತ್ತು. ಆದರೆ ಈ ಬಾರಿ ಶಾಸಕ ಧೀರಜ್ ಮುನಿರಾಜ್ ಅವರು ಇಲ್ಲಿ ಚುನಾವಣೆ ಮಾಡಲೇಬೇಕು ಎಂದು ನಿರ್ಧಾರ ಮಾಡಿದರು. ಈ ಚುನಾವಣೆಯಲ್ಲಿ ನಾವೇ ಗೆದ್ದಿದ್ದೇವೆ ಎಂದರು.
ತಾಲೂಕಿನಲ್ಲಿ 15 ವರ್ಷಗಳಿಂದೆ ಸೊಸೈಟಿಗಳು 15 ಇರಲಿಲ್ಲ. ಇಂದು 28 ಸೊಸೈಟಿಗಳನ್ನ ಮಾಡಿದ್ದೇವೆ. ಪ್ರತಿಯೊಂದು ಸೊಸೈಟಿಗಳಿಂದ ರೈತರಿಗೆ ಕನಿಷ್ಟ 5 ಕೋಟಿ ಸಾಲ ನೀಡಿದ್ದೇವೆ. ಸರ್ಕಾರದಿಂದ ಎರಡೆರಡು ಬಾರಿ ಸುಮಾರು 100 ಕೋಟಿಯಷ್ಟು ಸಾಲ ಮನ್ನಾ ಆಗಿದೆ. ಕನಸವಾಡಿ ಸೊಸೈಟಿ ಸುಮಾರು 1 ಕೋಟಿ ಲಾಭದಲ್ಲಿದೆ. ಆ ಕೋಟಿ ಲಾಭದಲ್ಲಿ ಸೊಸೈಟಿ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದೇವೆ. ಸೊಸೈಟಿಗಾಗಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಸೊಸೈಟಿಗಳಿಗಾಗಿ ಇಂತಹ ಸುಮಾರು 8 ನೂತನ ಕಟ್ಟಡಗಳನ್ನ ನಿರ್ಮಾಣ ಮಾಡಿದ್ದೇನೆ. ಕಟ್ಟಡಗಳ ನಿರ್ಮಾಣಕ್ಕೆ ಒಂದು ರೂಪಾಯಿ ಸೊಸೈಟಿ ಹಣ ಬಳಕೆ ಮಾಡುತ್ತಿಲ್ಲ. ಎಂಎಲ್ಎ ಅನುದಾನ, ಎಂಎಲ್ಸಿ ಅನುದಾನ, ಜಿಲ್ಲಾ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಸೇರಿದಂತೆ ಇತರೆ ಮೂಲಗಳಿಂದ ಅನುದಾನ ತಂದು ಸುಮಾರು 8 ನೂತನ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೇವೆ. ಇನ್ನೂ 5 ಕಟ್ಟಡಗಳಿಗೆ ಅಡಿಪಾಯ ಹಾಕಿಸಿದ್ದೇನೆ. ಜನ ಈ ಎಲ್ಲಾ ಕೆಲಸಗಳನ್ನ ನೊಡಿ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದರು.
ಹೊನ್ನಾವರ ಹಾಗೂ ಕನಸವಾಡಿ ಗ್ರಾಮ ಪಂಚಾಯಿತಿಯ ಮತದಾರರು ಸೇರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಎಲ್ಲರಿಗೂ ನಾವು ಚಿರ ಋಣಿಯಾಗಿ ಇರುತ್ತೇವೆ. ಇದಕ್ಕೆ ಸಹಕರಿಸಿದ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಆಯ್ಕೆಯಾದವರ ಪಟ್ಟಿ….
ಅಭ್ಯರ್ಥಿಯ ಹೆಸರು ಪಡೆದ ಮತಗಳು
1. ಚುಂಚೇಗೌಡ. 457
2. ಎನ್.ಎಸ್ ಕೃಷ್ಣಪ್ಪ. 418
3. ಆರ್.ವಿ ಗೌಡ. 395
4. ಎಂ ಶಿವಣ್ಣ. 377
5. ಸಿದ್ದಲಿಂಗಸ್ವಾಮಿ 365
6. ಆರ್.ಎಂ ಮುನಿರಾಜು 422
7. ಟಿ ಮಂಜುನಾಥ್ 438
8. ಬಿ ಲಕ್ಷ್ಮೀಕೆಂಪಯ್ಯ. 400
9. ಎನ್ ವಿಶ್ವನಾಥ್ 352
10. ಇಂದ್ರಮ್ಮ. 388
11. ಎಂ ಪ್ರಮೀಳಾ 384
12. ಪ್ರಭಾಕರ್ 082
ಸೊಸೈಟಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಗಣ್ಯರು ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಹೂವಿನಾರ ಹಾಕಿ, ಸಿಹಿ ತಿನಿಸಿ, ಪಟಾಕಿ ಸಿಡಿಸಿ ಅಭನಂದನೆ ಸಲ್ಲಿಸಿ ಸಂಭ್ರಮಿಸಿದರು.
ಈ ವೇಳೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಅಶ್ವತ್ ನಾರಾಯಣ ಗೌಡ, ಕಾಂಗ್ರೆಸ್ ಮುಖಂಡ ದೊಡ್ಡತುಮಕೂರು ರಾಮಕೃಷ್ಣಪ್ಪ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.