
ಶ್ರೀ ಮುತ್ಯಾಲಮ್ಮ ಸೇವಾ ಸಮಿತಿ ಮತ್ತು ನವಜ್ಯೋತಿ ಕಲಾ ಸಂಘದ ವತಿಯಿಂದ ದೊಡ್ಡಬಳ್ಳಾಪುರ ನಗರದ ಕನಕದಾಸ ರಸ್ತೆಯ ಕನಕದಾಸನಗರದಲ್ಲಿ ಪಂಚ ಮಾತೆಯರ ಉತ್ಸವ ವಿಜೃಂಭಣೆಯಿಂದ ಜರುಗಿತು.

ಮುತ್ಯಾಲಮ್ಮ, ದೊಡ್ಡಮ್ಮದೇವಿ, ಲಕ್ಷ್ಮಿದೇವಿ, ದೇವನಹಳ್ಳಿ ಶ್ರೀ ಚೌಡೇಶ್ವರಿ ದೇವಿ, ಕಲ್ಲುಪೇಟೆ ಮಾರಮ್ಮದೇವಿಯವರ ಉತ್ಸವ ಮೂರ್ತಿಗಳಿಗೆ ವಿವಿಧ ಪುಷ್ಪಗಳ ಹೂವಿನ ಅಲಂಕಾರ, ದೀಪಾಲಂಕಾರ, ವಿವಿಧ ಹೋಮ, ಪೂಜೆ ಪುನಸ್ಕಾರ ಅದ್ಧೂರಿಯಾಗಿ ನೆರವೇರಿಸಲಾಯಿತು.

ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಪಂಚ ಮಾತೆಯರ ದರ್ಶನ ಪಡೆದು ಪುನೀತರಾದರು. ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗಿತ್ತು.

ಈ ವೇಳೆ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

ಈ ವೇಳೆ ಉದಯ್, ಶ್ರೇಯಸ್, ಭರತ್ ಸೇರಿದಂತೆ ಇತರರು ಉಪಸ್ಥಿತರಿದ್ದರು…