ಕದ್ದ ಚಿನ್ನ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಅಟ್ಟಿಕಾ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು ಅವರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರು ಕಳ್ಳರಿಂದ ಕಳ್ಳತನ ಮಾಡಿದ ಚಿನ್ನ ಖರೀದಿ ಆರೋಪದಲ್ಲಿ ಬೊಮ್ಮನಹಳ್ಳಿ ಬಾಬು ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ.
ಅರೆಸ್ಟ್ ಮಾಡಿ ಪೊಲೀಸ್ ಠಾಣೆಯಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದುಕೊಂಡ ಹೊಗಲಾಗಿದೆ.
2016 ರಲ್ಲಿ ನಾನು ಅಟಿಕಾ ಗೋಲ್ಡ್ ಕಂಪನಿಗೆ ರಾಜೀನಾಮೆ ಮಾಡಿದ್ದೇನೆ. ನ್ಯಾಯಾಲಯ ನಿನ್ನೆಯೂ ಕೂಡ ಒಂದು ಕೇಸ್ ನಲ್ಲಿ ಅಟಿಕಾ ಗೊಲ್ಡ್ ಗೆ ಬಾಬು ನ ಭಾಗಿ ಮಾಡಬೇಡಿ ಎಂದು ಆದೇಶ ಮಾಡಿದೆ. ಆದರೂ, ವಿನಾಕಾರಣ ಪೊಲೀಸರು ನನ್ನನ್ನ ಟಾರ್ಗೆಟ್ ಮಾಡಿ ಸುಳ್ಳು ಕೇಸ್ ದಾಖಲು ಮಾಡ್ತಿದ್ದಾರೆ ಪೊಲೀಸ್ ಠಾಣೆ ಮುಂದೆ ಅಟಿಕಾ ಗೊಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಹೇಳಿಕೆ ನೀಡಿದ್ದಾರೆ.
ಕೆಲ ಕೇಸ್ ಗಳಲ್ಲಿ ನಾನು ತಡೆಯಾಜ್ಞೆ ತಂದಿದ್ದೇನೆ. ಆದರೂ, ನನ್ನನ್ನು ವಿನಾಕಾರಣ ಕೇಸ್ ಗಳಲ್ಲಿ ಸಿಕ್ಕಿಸೋ ಸಂಚು ನಡೆಯುತ್ತಿದೆ. ಇದು ರಾಜಕೀಯ ಪಿತೂರಿ ಎಂದು ಆರೋಪಿಸಿದ್ದಾರೆ.