Categories: ಲೇಖನ

ಕದನ ವಿರಾಮ…., ಕೊನೆಗೆ ಗೆಲ್ಲುವುದು ಹಿಂಸೆಯಲ್ಲ ಅಹಿಂಸೆ

ಕದನ ವಿರಾಮ……

ಯುದ್ಧ ವಿರಾಮ ಘೋಷಣೆಯಾಗಿದೆ. ಸಾವಿರಾರು ಜನರ ಹತ್ಯೆಗಳ ನಂತರ,
ಅಪಾರ ಪ್ರಮಾಣದ ಭೂಪ್ರದೇಶ, ನೈಸರ್ಗಿಕ ಸಂಪನ್ಮೂಲಗಳು, ತೈಲ ಘಟಕಗಳು ಮತ್ತು ಪರಿಸರವನ್ನು ನಾಶ ಮಾಡಿದ ನಂತರ,
ಅತ್ಯಂತ ಉಪಯುಕ್ತ ಕಟ್ಟಡಗಳು, ಆಸ್ಪತ್ರೆ, ಶಾಲೆಗಳು ನಾಶವಾದ ನಂತರ,

ಈ ಕದನ ವಿರಾಮ
ಸತ್ತವರನ್ನು ಮರಳಿ ತರುವುದೇ‌ ?,
ಸತ್ತವರಿಗೆ ನ್ಯಾಯ ಕೊಡಿಸುವುದೇ ?
ಅಪಾರ ಪರಿಸರ ನಾಶಕ್ಕೆ ಹೊಣೆ ಯಾರು ?…..

ಅರ್ಥ ಮಾಡಿಕೊಳ್ಳಿ,
ಕೊನೆಗೂ ಗೆಲ್ಲುವುದು ಹಿಂಸೆಯಲ್ಲ ಅಹಿಂಸೆ,
ಕೊನೆಗೂ ಗೆಲ್ಲುವುದು ಸಂಧಾನವೇ ಹೊರತು ಸಂಘರ್ಷವಲ್ಲ,
ಕೊನೆಗೂ ಗೆಲ್ಲುವುದು ಪ್ರೀತಿಯೇ ಹೊರತು ದ್ವೇಷವಲ್ಲ….

ಸೇಡಿಗಿಂತ ಸಂಧಾನ ಅತ್ಯುತ್ತಮ,
ಸೇಡು ಶಾಪ, ಸಂಧಾನ ವರ….

ಕದನ ವಿರಾಮವೆಂಬ ಅಜ್ಞಾನದ ನಾಟಕ…..

ಸಾವಿರಾರು ಜನ ಸತ್ತು,
ನೂರಾರು ಮಕ್ಕಳು, ಮಹಿಳೆಯರು ಗಾಯಗೊಂಡು, ಅನೇಕರು ಅನಾಥರಾದ ನಂತರ ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ಹದಿನೈದು ದಿನಗಳ ಕದನ ವಿರಾಮ ಘೋಷಣೆಯಾಗಿದೆ. ಆ ನಂತರ ಯುದ್ಧ ಮುಂದುವರಿಯುತ್ತದೆ ಅಥವಾ ಇನ್ನೊಂದಿಷ್ಟು ದಿನ ಕದನ ವಿರಾಮ ಜಾರಿಯಲ್ಲಿರಬಹುದು.

ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ ಸಾವಿರಾರು ಜನರ ಜೀವ ಉಳಿಯುತ್ತಿತ್ತಲ್ಲವೇ. ಮೂರೂ ದೇಶಗಳು ಇದರಿಂದ ಮಾಡಿದ ಸಾಧನೆಯಾದರು ಏನು. ಯುದ್ಧದಿಂದ ಎಲ್ಲಾ ಕಡೆ ಸಾವು ನೋವುಗಳೇ ಎಂಬುದು ತಿಳಿದಿಲ್ಲವೇ. ಮತ್ತೆ ಯುದ್ಧ ಮಾಡಿ, ಮುಂದೆ ಯಾವುದೋ ಒಂದು ದಿನ, ಯಾವುದೋ ಹಂತದಲ್ಲಿ ಒಪ್ಪಂದ ಮಾಡಿಕೊಂಡು ಯುದ್ಧ ನಿಲ್ಲುವುದು ಖಚಿತ. ಆದರೆ ಅದು ಮಾಡಬಹುದಾದ ಘೋರ ದುರಂತವನ್ನು ಮರಳಿ ಸರಿಪಡಿಸುವುದು ಸಾಧ್ಯವೇ…..

ಇದೇ ಪ್ರಶ್ನೆ ರಷ್ಯಾ, ಉಕ್ರೇನ್ ಯುದ್ಧದ ಬಗ್ಗೆಯೂ ಏಳುತ್ತದೆ. ನಾಶದ ನಂತರ ಶರಣಾಗುವುದಕ್ಕಿಂತ ಮೊದಲೇ ಇದನ್ನು ಗ್ರಹಿಸಿ ಸ್ವಲ್ಪ ಹೊಂದಾಣಿಕೆಯ ಒಪ್ಪಂದ ಮಾಡಿಕೊಳ್ಳಬಹುದಲ್ಲವೇ……

ಅನೇಕ ಸೈನಿಕರು, ಅಮಾಯಕರು ಯುದ್ಧದ ದಾಳಿಗೆ ಬಲಿಯಾಗಿರುವ ಈ ಸಂದರ್ಭದಲ್ಲಿ ಮನಸ್ಸು ಮತ್ತೆ ಮತ್ತೆ ಹುತಾತ್ಮ ಭಾವನೆಗಿಂತ ಜೀವ ಉಳಿಸದೆ ಕೆಲವು ರಾಜಕಾರಣಿಗಳು ಮತ್ತು ಧರ್ಮದವರು ತಮ್ಮ ತೆವಲಿಗಾಗಿ ಅಮಾಯಕ ಜನರನ್ನು ಬಲಿಕೊಡುತ್ತಿರುವ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಮೂಡುತ್ತದೆ…..

ಹಿಂಸೆಯ ಫಲಿತಾಂಶಗಳು ಮತ್ತೊಂದು ಹಿಂಸೆಗೆ ಬಿತ್ತುವ ಬೀಜ ಎಂದು ಖಚಿತವಾಗಿರುವಾಗಲೂ ಮತ್ತೆ ಮತ್ತೆ ಹಿಂಸೆಯಿಂದಲೇ ಪರಿಹಾರ ಹುಡುಕುವ ಹುಚ್ಚು ಮನಸ್ಸಿನ ಮನುಷ್ಯರ ಬಗ್ಗೆಯೇ ಕೋಪ ಬರುತ್ತದೆ. ಬದುಕಲು ಬಾರದ ಮನುಷ್ಯರು ಎಂದೇ ಕರೆಯಬೇಕಾಗುತ್ತದೆ. ರಾಜಕಾರಣಿಗಳೇನೋ ಅಧಿಕಾರಕ್ಕಾಗಿ ಹೋರಾಟ ಮಾಡುತ್ತಾರೆ. ಅವರೇನು ಯುದ್ಧ ಭೂಮಿಯಲ್ಲಿ ಹೋರಾಡುವುದಿಲ್ಲ. ಇವರ ರಕ್ಷಣೆಗಾಗಿ ಸೈನಿಕರು ಮತ್ತು ಸಾಮಾನ್ಯ ಜನರು ಜೀವ ತ್ಯಾಗ ಮಾಡಬೇಕು. ಇದು ಯಾವ ನ್ಯಾಯ……….

ಸಂಧಾನ ಸೂತ್ರಗಳು ಯಾವಾಗಲೂ ಇದ್ದೇ ಇರುತ್ತದೆ. ‌ಆದರೆ ಅದನ್ನು ಗ್ರಹಿಸುವ ಮತ್ತು ಅನುಷ್ಠಾನ ಗೊಳಿಸುವ ವಿಶಾಲ ಮನೋಭಾವ ಮತ್ತು ಒಳ್ಳೆಯತನ ಮಾತ್ರ ಕಾಣೆಯಾಗಿದೆ. ಅದರ ಪರಿಣಾಮವೇ ಬಹುತೇಕ ಈ ಜಗತ್ತಿನಲ್ಲಿ ಶಾಂತಿಗಿಂತ ಹಿಂಸೆಯ ಪ್ರಮಾಣ ಜಾಸ್ತಿಯಾಗಿದೆ……

ಹೊಡೆತ ಬೀಳುವವರೆಗೆ ತಾನು ಸೂಪರ್ ಮ್ಯಾನ್ ಎಂಬಂತೆ ವರ್ತಿಸುವ ಮನುಷ್ಯರು ಮತ್ತು ಅವರ ನಿಯಂತ್ರಣದ ದೇಶಗಳು ಒಮ್ಮೆ ಬಲವಾದ ಹೊಡೆತ ಬಿದ್ದರೆ ನರಳುತ್ತಾ ಶರಣಾಗುತ್ತಾರೆ. ಅದೂ ಸಹ ತಾತ್ಕಾಲಿಕ. ಒಳಗೊಳಗೆ ದ್ವೇಷ ಅಸೂಯೆ ಹೊಗೆಯಾಡುತ್ತಲೇ ಇರುತ್ತದೆ. ಮತ್ತೆ ಕೆಲವು ಸಮಯದ ನಂತರ ಹಿಂಸೆಗೆ ಇಳಿಯುತ್ತಾರೆ. ಇಡೀ ಮಾನವ ಇತಿಹಾಸ ಇಂತಹ ಮನಸ್ಥಿತಿಯಿಂದಲೇ ತುಂಬಿದೆ…..

ಶಾಂತಿ ಎಂಬುದು ವಿನಾಶದ ಸಿದ್ದತೆ ಎಂಬಂತಾಗಿದೆ. ಬದುಕು ಎಂಬುದು ಸಾವಿಗೆ ಸಿದ್ದತೆ ಎಂಬಂತೆ. ಒಟ್ಟಿನಲ್ಲಿ ಇದೇ ವಿಶ್ವದ ಸ್ವಾಭಾವಿಕ ಗುಣವಾಗಿರಬಹುದು. ಅದನ್ನು ಅನುಭವಿಸುತ್ತಲೇ ಬದುಕುವುದು ಅನಿವಾರ್ಯವೇ ಅಥವಾ ಅಹಿಂಸೆಯ ಪರ್ಯಾಯ ಮಾರ್ಗಗಳ ಹುಡುಕಾಟ ಸಾಧ್ಯವೇ…..

ಏಕೆಂದರೆ, ದಿನ ನಿತ್ಯ ಈ ರೀತಿ ತಮ್ಮ ದೇಶಗಳಿಗಾಗಿ ಪ್ರಾಣತ್ಯಾಗ ಮಾಡುತ್ತಿರುವ ಅನೇಕ ಯುವಕರ ಜೀವಗಳನ್ನು ಉಳಿಸಲು ಸಾಧ್ಯವಾಗದ ಈ ಜಗತ್ತಿನ ಎಲ್ಲಾ ದೇವರು, ಧರ್ಮಗಳು, ಸರ್ಕಾರಗಳಿಗೆ ದಯವಿಟ್ಟು ಮನುಷ್ಯ ಜೀವಿಗಳ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಾಪಾಡಿ, ಮನುಷ್ಯ ಪ್ರಾಣಿಯ ಘನತೆಯನ್ನು ರಕ್ಷಿಸಿ, ಉಳಿಸಿ ಎಂದು ಮನವಿ ಮಾಡಿಕೊಳ್ಳುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಯುವಕರು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು- ವಕೀಲ ಬಿ. ಸುರೇಶ್ ಗೌಡ

ಯುವಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ, ಆರೋಗ್ಯಕರ ಮತ್ತು ಸಮೃದ್ಧ ಸಮಾಜದ ನಿರ್ಮಾಣಕ್ಕೂ ಅತ್ಯಗತ್ಯವಾಗಿದೆ ಎಂದು ಹೈಕೋರ್ಟ್…

1 hour ago

ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ

ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜಿನಲ್ಲಿ ಯಾವ ಲೋಪಗಳು ಉಂಟಾಗದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳುವ ಸಲುವಾಗಿ ರಾಜ್ಯದ ಎಲ್ಲ…

12 hours ago

14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ತಪ್ಪದೇ ಎಚ್.ಪಿ.ವಿ ಲಸಿಕೆ ಹಾಕಿಸಿ- ಡಿಸಿ ಅನುರಾಧ

ಗರ್ಭಕಂಠ ಕ್ಯಾನ್ಸರ್ ಬಾರದಂತೆ ತಡೆಯುವಲ್ಲಿ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್.ಪಿ.ವಿ) ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದ್ದು 14 ರಿಂದ 15 ವರ್ಷದೊಳಗಿನ…

12 hours ago

ಕೃಷಿ ಹೊಂಡದಲ್ಲಿ ಈಜಲು ಹೋಗಿ 34 ವರ್ಷದ ವ್ಯಕ್ತಿ ಸಾವು

ಕೃಷಿ ಹೊಂಡದಲ್ಲಿ ಈಜಲು ಹೋಗಿ 34ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಇಂದು…

12 hours ago

ನಾಳೆ (ಏ.9ಕ್ಕೆ) ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ

ಮಾ.9ರ ಗುರುವಾರ ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ…

16 hours ago

ಕರ್ನಾಟಕ ವಿರೋಧಿ ‘ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಬಿಟ್ಟು ತೊಲಗಲಿ’- ಕರ್ನಾಟಕ ರಕ್ಷಣಾ ವೇದಿಕೆ‌ ಜಿಲ್ಲಾಧ್ಯಕ್ಷ ಪುರುಷೋತ್ತಮಗೌಡ ಆಗ್ರಹ

ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸರ್ಕಾರ…

18 hours ago