ತಾಲೂಕಿನ ಕತ್ತಿಹೊಸಹಳ್ಳಿ ಬಳಿ ಹಾದುಹೋಗಿರುವ ದಾಬಸ್ ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿರುವ ಘಟನೆ ಫೆ.24ರ ಮುಂಜಾನೆ ಸುಮಾರು 5:30ರ ವೇಳೆಯಲ್ಲಿ ನಡೆದಿತ್ತು. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದವು, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಓರ್ವ ಅಸುನೀಗಿದ್ದು, ಮತ್ತಿಬ್ಬರಿಗೆ ಚಿಕಿತ್ಸೆ ಮುಂದುವರಿದಿತ್ತು.
ಕಾರು ಅಪಘಾತದ ಭೀಕರ ದೃಶ್ಯ ಹೆದ್ದಾರಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅತಿವೇಗವಾಗಿ ಬಂದ ಕಾರು ಡಿವೈಡರ್ ಮೇಲೆ ಹತ್ತಿ ಸಿನಿಮೀಯ ರೀತಿಯಲ್ಲಿ ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆಯುವಾಗಲೇ ಕಾರಿನಲ್ಲಿದ್ದ ಮೂರು ಜನ ಮೇಲಕ್ಕೆ ಹಾರಿ ರಸ್ತೆಗೆ ಬೀಳುತ್ತಾರೆ.
ಪಲ್ಟಿ ಹಿನ್ನೆಲೆ ಕಾರು ಸಂಪೂರ್ಣ ಜಖಂಗೊಂಡಿದೆ. ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿತ್ತು. ಐವರಲ್ಲಿ ವಿಜಯಪುರ ಮೂಲದ 20ವರ್ಷದ ಮಹಮದ್ ಯೂನಿಸ್ ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಮೂಲದ ಐವರು ಸ್ನೇಹಿತ ಮದುವೆ ಗದದಕ್ಕೆ ಹೋಗಿ ವಾಪಸ್ ಮನೆಗೆ ಬರುವ ವೇಳೆ ಈ ಘಟನೆ ನಡೆದಿದೆ.