ಕಣ್ಮನ ಸೆಳೆದ ಮೈನವಿರೇಳಿಸುವ ಒನಕೆ ನಾಟ್ಯ ಉತ್ಸವ

ನಗರದಲ್ಲಿ ಶ್ರೀ ಸಪ್ತಮಾತೃಕ ಮಾರಿಯಮ್ಮ ದೇವತೆಯ ಕರಗ ಮಹೋತ್ಸವದ ಅಂಗವಾಗಿ ಕರಗ ದೇವಾಲಯದ ಸಮೀಪದ ಏಳು ಸುತ್ತಿನ ಕೋಟೆ ಆವರಣದಲ್ಲಿ ಒನಕೆ ನಾಟ್ಯ ಮತ್ತು ವಸಂತೋತ್ಸವ ಆಚರಣೆಯು ಬಹಳ ಸಂಭ್ರಮ, ಸಡಗರದಿಂದ ನಡೆಯಿತು.

ಕರಗ ಹೊತ್ತಿದ್ದ ಪೂಜಾರಿ ಮುನಿರತ್ನಂ ಬಾಲಾಜಿ ಅವರು ಪೂಜೆ ಸಲ್ಲಿಸಿ, ಒನಕೆ ಹಾಗೂ ಓಕುಳಿ ನೀರಿನ ತಪ್ಪಲೆಯನ್ನು ತಲೆಯ ಮೇಲಿಟ್ಟುಗೊಂಡು ನೀಡಿದ ನಾಟ್ಯ ಪ್ರದರ್ಶನ ನೆರೆದಿದ್ದ ಭಕ್ತಾದಿಗಳನ್ನು ರೋಮಾಂಚನಗೊಳಿಸಿತು.

ದೇವಾಲಯ ಹಾಗೂ ಸುತ್ತಮುತ್ತಲ ಮನೆಗಳ ಮೇಲಿಂದ ನೂರಾರು ಭಕ್ತರು ಮೈನವಿರೇಳಿಸುವ ನಾಟ್ಯವನ್ನು ಕಣ್ತುಂಬಿಕೊಂಡರು.

ಇದರೊಂದಿಗೆ ವಹ್ನಿಕುಲ ಮತಸ್ಥರು ಓಕುಳಿ ನೀರನ್ನು ಎರಚುತ್ತಾ, ಮಡಿಕೆ ಹೊಡೆಯುವ ವಸಂತೋತ್ಸವ ಆಚರಣೆಯನ್ನು ಉತ್ಸಾಹ ಸಂಭ್ರಮಗಳಿಂದ ಆಚರಿಸಿದರು.

ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಮಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಸಪ್ತಮಾತೃಕ ಮಾರಿಯಮ್ಮ ದೇವತೆಯ ಕರಗ ಮಹೋತ್ಸವ ನಗರದಲ್ಲಿ ವಿಜೃಂಭಣೆಯಿಂದ ನಡೆದಿದ್ದು, ಮೇ.5ರಂದು ಆರಂಭವಾದ ಧಾರ್ಮಿಕ ಕಾರ್ಯಭಗಳು ಮೇ.20ರಂದು ಮಾರಿಯಮ್ಮ ದೇವಿ, ಪಿಳೇಕಮ್ಮ ದೇವಿ, ಶ್ರೀ ಮುತ್ಯಾಲಮ್ಮ ದೇವಿ, ಶ್ರೀ ದೊಡ್ಡಮ್ಮ ದೇವಿಗೆ ಆರತಿಗಳನ್ನು ಬೆಳಗುವ ಮೂಲಕ ಸಮಾರೋಪಗೊಳ್ಳಲಿವೆ.

Leave a Reply

Your email address will not be published. Required fields are marked *