Categories: Trending

ಕಣ್ಣಿನ ಚೆಲುವೆ ಮೊನಾಲಿಸಾ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಟ್ರೆಂಡಿಂಗ್….ನೆಟ್ಟಿಗರ ಹಾವಳಿಯಿಂದ ಕುಂಭಮೇಳ ತೊರೆದ ಮೊನಾಲಿಸಾ…!

ಮಹಾ ಕುಂಭಮೇಳದಲ್ಲಿ ಸರ ಮಾರುತ್ತಿದ್ದ ಇಂದೂರಿನ ಕಣ್ಣಿನ ಚೆಲುವೆ ಮೊನಾಲಿಸಾ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ತಾಗಿ ಟ್ರೆಂಡಿಂಗ್ ಅಲ್ಲಿದ್ದಾಳೆ.

ಅತಿಲೋಕ ಸುಂದರಿ…. ಮೊನಾಲಿಸಾ, ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಹಾರಗಳನ್ನು ಮಾರುತ್ತಿರುವ ಮೋಹಕ ಕಣ್ಣುಗಳ ಸುಂದರಿ. ಆ ಕಂಗಳಿಗೆ ಸೋತವರೆಷ್ಟೋ, ಆ ನಗುವಿಗೆ ಮನಸೋತವರೆಷ್ಟೋ.

ಈಕೆಯ ಹೆಸರು ಮೊನಾಲಿಸ ಅಂತೆ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿರುವ ಹುಡುಗಿ.. ಈಕೆಯ ಕಣ್ಣುಗಳು ಆಕರ್ಷಕವಾಗಿವೆ. ಆಕೆಯ ನಗು ನಿಷ್ಕಲ್ಮಶವಾಗಿದೆ.

ಈಕೆ ಕೋಬ್ರಾ ಜಿಪ್ಸಿ ಜನಾಂಗದ ಹುಡುಗಿ. ಆಲ್ಮೋಸ್ಟ್ ಈ ಜನಾಂಗದ ಎಲ್ಲರಿಗೂ ಇದೇ ರೀತಿಯ ಕಣ್ಣುಗಳು ಇರುತ್ತವೆ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿರುವ ಈ ಹುಡುಗಿಯ ಜನಾಂಗದ ಹಿನ್ನೆಲೆಯನ್ನು ತಿಳಿದುಕೊಳ್ಳದೆ, ಸುಮ್ಮನೇ ಕಣ್ಣುಗಳನ್ನು ವರ್ಣಿಸುತ್ತಾ, ಇಂಥದ್ದೊಂದು ಜನಾಂಗ ಇದೆಯೇ ಎಂಬ ಸಣ್ಣ ಕುತೂಹಲವೂ ನಮ್ಮ ಜನಕ್ಕೆ ಇಲ್ಲವಾಗಿದೆ.

ಈ ರೀಲ್ಸ್,  ಟ್ರೆಂಡಿಂಗ್, ಪಬ್ಲಿಸಿಟಿ ಇದ್ಯಾವುದರ ಇಮೇಜ್ ಕೂಡ ಇರದ ಈ ಹುಡುಗಿಗೆ ಒಬ್ಬ ವ್ಯಕ್ತಿ 5000 ಕೊಡಲು ಹೋದಾಗ ಆಕೆ ಅದನ್ನು ತಿರಸ್ಕರಿಸಿ ತನ್ನ ಬಳಿ ಏನಾದರು ಕೊಂಡರಷ್ಟೆ ಹಣ ಪಡೆಯುತ್ತೇನೆ ಅನ್ನುತ್ತಾಳೆ. ಕೊನೆಗೆ ಆ ವ್ಯಕ್ತಿ ರುದ್ರಾಕ್ಷಿ ಹಾರ ಪಡೆದು 1000 ಕೊಡುತ್ತಾನೆ. ಆಕೆಯ ಪ್ರಾಮಾಣಿಕತೆ, ಆಕೆಯ ಈ ವ್ಯಕ್ತಿತ್ವ ಮತ್ತು ವೃತ್ತಿ ಧರ್ಮ ಮಾತ್ರ ಎಲ್ಲರಿಗೂ ಇಷ್ಟವಾಗಿದೆ….

ಇದೀಗ ನೆಟ್ಟಿಗರ ಹಾವಳಿಯಿಂದಾಗಿ ಅವರು ಕುಂಭಮೇಳ ತೊರೆದಿದ್ದಾರೆ ಎನ್ನಲಾಗಿದೆ. ಮಧ್ಯ ಪ್ರದೇಶ ಮೂಲದ ಮೊನಾಲಿಸಾ ರುದ್ರಾಕ್ಷಿ ಮಾಲೆ, ಮಣಿಸರಗಳ ಮಾರಾಟಕ್ಕೆಂದು ಕುಟುಂಬಸ್ಥರೊಂದಿಗೆ ಬಂದಿದ್ದರು. ಆದರೆ ರುದ್ರಾಕ್ಷಿ, ಮಾಲೆ ಖರೀದಿಸಲು ಬರುತ್ತಿದ್ದವರೆಲ್ಲ ಆಕೆ ಜತೆಗೆ ಸೆಲ್ಫಿ, ಫೋಟೋಗೆ ಮುಗಿಬಿದ್ದು, ವ್ಯಾಪಾರಕ್ಕೂ ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಆಕೆಯನ್ನು ಅವರ ತಂದೆ ಮನೆಗೆ ಕಳಿಸಿದ್ದಾರೆಂದು ಆಕೆಯ ತಂಗಿ ಹೇಳಿದ್ದಾರೆ.

Ramesh Babu

Journalist

Share
Published by
Ramesh Babu

Recent Posts

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು ಇಲ್ಲಿವೆ ನೋಡಿ…

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…

3 hours ago

ನಾಳೆ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ: ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಇಂದು ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಭೇಟಿ, ಪರಿಶೀಲನೆ

ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…

4 hours ago

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಎಲೆಕ್ಷನ್: ಗೆದ್ದ ಅಭ್ಯರ್ಥಿ ಪಡೆದ ಮತ ಎಷ್ಟು ಗೊತ್ತಾ…?

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಎಲೆಕ್ಷನ್: ಗೆದ್ದ ಅಭ್ಯರ್ಥಿ ಪಡೆದ ಮತ ಎಷ್ಟು ಗೊತ್ತಾ...? ವಾರ್ಡ್ ನಂ.: 1 ಹೆಸರು: ಶ್ವೇತಾ…

7 hours ago

ಮರ್ಯಾದಾ ಹತ್ಯೆ……..

  ಮರ್ಯಾದಾ ಹತ್ಯೆ........ ಕ್ಷಮಿಸಿ ಬಿಡು ಮಾನ್ಯ ಎಂಬ ಹುಬ್ಬಳ್ಳಿ ಹತ್ತಿರದ ನನ್ನ ಗರ್ಭಿಣಿ ತಂಗಿಯೇ..... ನಮ್ಮದೇ ದೇಶದ, ನಮ್ಮದೇ…

16 hours ago

ಅಪಘಾತದಲ್ಲಿ ಪ್ರಜ್ಞೆ ತಪ್ಪಿಬಿದ್ದ ವ್ಯಕ್ತಿ: ಆಸ್ಪತ್ರೆಗೆ ದಾಖಲಿಸುವುದಾಗಿ ನಂಬಿಸಿ ಫೋನ್ ಪೇ ಮೂಲಕ 80 ಸಾವಿರ ವಸೂಲಿ: ಆಸ್ಪತ್ರೆಗೆ ದಾಖಲಿಸದೇ ಪರಾರಿಯಾಗಿದ್ದ ಐನಾತಿಗಳ ಬಂಧನ

ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…

1 day ago