ಮಹಾ ಕುಂಭಮೇಳದಲ್ಲಿ ಸರ ಮಾರುತ್ತಿದ್ದ ಇಂದೂರಿನ ಕಣ್ಣಿನ ಚೆಲುವೆ ಮೊನಾಲಿಸಾ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ತಾಗಿ ಟ್ರೆಂಡಿಂಗ್ ಅಲ್ಲಿದ್ದಾಳೆ.
ಅತಿಲೋಕ ಸುಂದರಿ…. ಮೊನಾಲಿಸಾ, ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಹಾರಗಳನ್ನು ಮಾರುತ್ತಿರುವ ಮೋಹಕ ಕಣ್ಣುಗಳ ಸುಂದರಿ. ಆ ಕಂಗಳಿಗೆ ಸೋತವರೆಷ್ಟೋ, ಆ ನಗುವಿಗೆ ಮನಸೋತವರೆಷ್ಟೋ.
ಈಕೆಯ ಹೆಸರು ಮೊನಾಲಿಸ ಅಂತೆ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿರುವ ಹುಡುಗಿ.. ಈಕೆಯ ಕಣ್ಣುಗಳು ಆಕರ್ಷಕವಾಗಿವೆ. ಆಕೆಯ ನಗು ನಿಷ್ಕಲ್ಮಶವಾಗಿದೆ.
ಈಕೆ ಕೋಬ್ರಾ ಜಿಪ್ಸಿ ಜನಾಂಗದ ಹುಡುಗಿ. ಆಲ್ಮೋಸ್ಟ್ ಈ ಜನಾಂಗದ ಎಲ್ಲರಿಗೂ ಇದೇ ರೀತಿಯ ಕಣ್ಣುಗಳು ಇರುತ್ತವೆ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿರುವ ಈ ಹುಡುಗಿಯ ಜನಾಂಗದ ಹಿನ್ನೆಲೆಯನ್ನು ತಿಳಿದುಕೊಳ್ಳದೆ, ಸುಮ್ಮನೇ ಕಣ್ಣುಗಳನ್ನು ವರ್ಣಿಸುತ್ತಾ, ಇಂಥದ್ದೊಂದು ಜನಾಂಗ ಇದೆಯೇ ಎಂಬ ಸಣ್ಣ ಕುತೂಹಲವೂ ನಮ್ಮ ಜನಕ್ಕೆ ಇಲ್ಲವಾಗಿದೆ.
ಈ ರೀಲ್ಸ್, ಟ್ರೆಂಡಿಂಗ್, ಪಬ್ಲಿಸಿಟಿ ಇದ್ಯಾವುದರ ಇಮೇಜ್ ಕೂಡ ಇರದ ಈ ಹುಡುಗಿಗೆ ಒಬ್ಬ ವ್ಯಕ್ತಿ 5000 ಕೊಡಲು ಹೋದಾಗ ಆಕೆ ಅದನ್ನು ತಿರಸ್ಕರಿಸಿ ತನ್ನ ಬಳಿ ಏನಾದರು ಕೊಂಡರಷ್ಟೆ ಹಣ ಪಡೆಯುತ್ತೇನೆ ಅನ್ನುತ್ತಾಳೆ. ಕೊನೆಗೆ ಆ ವ್ಯಕ್ತಿ ರುದ್ರಾಕ್ಷಿ ಹಾರ ಪಡೆದು 1000 ಕೊಡುತ್ತಾನೆ. ಆಕೆಯ ಪ್ರಾಮಾಣಿಕತೆ, ಆಕೆಯ ಈ ವ್ಯಕ್ತಿತ್ವ ಮತ್ತು ವೃತ್ತಿ ಧರ್ಮ ಮಾತ್ರ ಎಲ್ಲರಿಗೂ ಇಷ್ಟವಾಗಿದೆ….
ಇದೀಗ ನೆಟ್ಟಿಗರ ಹಾವಳಿಯಿಂದಾಗಿ ಅವರು ಕುಂಭಮೇಳ ತೊರೆದಿದ್ದಾರೆ ಎನ್ನಲಾಗಿದೆ. ಮಧ್ಯ ಪ್ರದೇಶ ಮೂಲದ ಮೊನಾಲಿಸಾ ರುದ್ರಾಕ್ಷಿ ಮಾಲೆ, ಮಣಿಸರಗಳ ಮಾರಾಟಕ್ಕೆಂದು ಕುಟುಂಬಸ್ಥರೊಂದಿಗೆ ಬಂದಿದ್ದರು. ಆದರೆ ರುದ್ರಾಕ್ಷಿ, ಮಾಲೆ ಖರೀದಿಸಲು ಬರುತ್ತಿದ್ದವರೆಲ್ಲ ಆಕೆ ಜತೆಗೆ ಸೆಲ್ಫಿ, ಫೋಟೋಗೆ ಮುಗಿಬಿದ್ದು, ವ್ಯಾಪಾರಕ್ಕೂ ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಆಕೆಯನ್ನು ಅವರ ತಂದೆ ಮನೆಗೆ ಕಳಿಸಿದ್ದಾರೆಂದು ಆಕೆಯ ತಂಗಿ ಹೇಳಿದ್ದಾರೆ.