ಕಟ್ಟಡ ಕೂಲಿ ಕಾರ್ಮಿಕರಿಗೆ ಸೇಫ್ಟಿ ಕಿಟ್ ಕುರಿತ ತರಬೇತಿ: ನ್ಯೂಟ್ರಿಷನ್ ಕಿಟ್ ನಿಂದ ಯಾವ ಪ್ರಯೋಜನವಿಲ್ಲ- ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷೆ ಭಾಗ್ಯಲಕ್ಷ್ಮೀ ಎಚ್.ವಿ ಆರೋಪ

ದೊಡ್ಡಬಳ್ಳಾಪುರ ನಗರದ ಕೋರ್ಟ್ ಮುಂಭಾಗದಲ್ಲಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ(ರಿ) ದಿಂದ ಅಯೋಜನೆ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಕಟ್ಟಡ ಕೂಲಿ ಕಾರ್ಮಿಕರಿಗೆ ಸೇಫ್ಟಿ ಕಿಟ್ನ್ ಬಗ್ಗೆ ತರಬೇತಿಯನ್ನ ನೀಡಲಾಗಿತು.

ತರಬೇತಿಯಲ್ಲಿ ನೂರಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದರು, ಕಟ್ಟಡ ಕಾರ್ಮಿಕರ ಮತ್ತು ಇತರೆ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಭಾಗ್ಯಲಕ್ಷ್ಮೀ ಎಚ್.ವಿ. ಮಾತನಾಡಿ, ಕಾರ್ಮಿಕ ಇಲಾಖೆ ಈ ಮೊದಲು ನ್ಯೂಟ್ರಿಷನ್ ಕಿಟ್ ಅನ್ನು ವಿತರಿಸಿದ್ದು, ಇದರಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ, ನಮಗೆ ಬೇಕಾದ ಆರೋಗ್ಯ ಸೌಲಭ್ಯವನ್ನ ನಾವೇ ಪಡೆದು ಕೊಳ್ಳುತ್ತೇವೆ. ನ್ಯೂಟ್ರಿಷನ್ ಕಿಟ್ ನಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಿಲ್ಲ. ಆ ಹಣವನ್ನ ಕಾರ್ಮಿಕರ ಖಾತೆಗೆ ಜಮಾ ಮಾಡು ಬೇಕೆಂದು ಕಾರ್ಮಿಕರು ಒತ್ತಾಯಿಸಿದರು.

ಕಾರ್ಮಿಕರ ಮನವಿಗೆ ಸ್ಪಂದಿಸಿದ ಕಾರ್ಮಿಕರ ಇಲಾಖೆ ಎಲೆಕ್ಟ್ರಿಷಿಯನ್ ಕಿಟ್, ವೆಲ್ಡಿಂಗ್ ಕಿಟ್‌ಗಳನ್ನು ನೀಡಿದ್ದು, ಅದರಲ್ಲಿ ಕಾರ್ಮಿಕ ಇಲಾಖೆ ನೀಡಿದ ಯಂತ್ರಗಳ ಕಳಪೆ ಗುಣಮಟ್ಟತಾಗಿತ್ತು, ಕಾರ್ಮಿಕ ಇಲಾಖೆ ಕಾರ್ಮಿಕರಿಗೆ ಸಹಾಯವಾಗುವಂತ ಯೋಜನೆಗಳನ್ನು ಮಾಡುವ ಬದಲಿಗೆ ಯಾವುದೋ ಸಂಸ್ಥೆಯನ್ನ ಉದ್ಧಾರ ಮಾಡುವ ಯೋಜನೆಗಳನ್ನ ಜಾರಿಗೆ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *