ಮಹಿಳಾ ಪ್ರಯಾಣಿಕರೊಬ್ಬರು 37,85,469 ಮೌಲ್ಯದ 611.51 ಗ್ರಾಂ ಕಚ್ಚಾ ಚಿನ್ನದ ಆಭರಣಗಳು ಮತ್ತು ಚಿನ್ನದ ತುಂಡುಗಳನ್ನು ಮೆರಮಾಚಿ ಸಾಗಾಟ ಮಾಡುವ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಶ್ರೀಲಂಕಾ ಏರ್‌ಲೈನ್ಸ್ ಮೂಲಕ ಶ್ರೀಲಂಕಾದಿಂದ ಆಗಮಿಸಿದ್ದ ಮಹಿಳಾ ಪ್ರಯಾಣಿಕರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಟೆಲಿಜೆನ್ಸ್ ಘಟಕದ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಮಹಿಳಾ ಪ್ರಯಾಣಿಕರನ್ನ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.