ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಚೇರಿಪಾಳ್ಯ ಮತಗಟ್ಟೆಯಲ್ಲಿ ಸಂಜೆ 7:30 ಆದರೂ ಮತದಾನ ಮಾಡುತ್ತಿರುವ ಮತದಾರರು.
ಸಂಜೆ 5 ಗಂಟೆಯ ನಂತರ ಅತಿ ಹೆಚ್ಚು ಮತದಾರರು ಒಟ್ಟಿಗೆ ಮತಗಟ್ಟೆಯತ್ತ ಬಂದ ಕಾರಣ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಯಿತು. ಸಂಜೆ 6 ಗಂಟೆಯೊಳಗೆ ಮತಗಟ್ಟೆಗೆ ಬಂದವರಿಗೆ ಪ್ರವೇಶ ಕೊಟ್ಟು ಕ್ರಮ ಸಂಖ್ಯೆಯ ಚೀಟಿ ನೀಡಿ ಕಾಂಪೌಂಡ್ ಗೇಟ್ ಬಂದ್ ಮಾಡಲಾಯಿತು.
ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮಾತ್ರ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಚೇರಿಪಾಳ್ಯ ಮತಗಟ್ಟೆಯಲ್ಲಿ ಸಂಜೆ 7:30 ಆದರೂ ಮತದಾನ ಪ್ರಕ್ರಿಯೆ ಮುಂದುವರಿದಿದೆ. ಮತಗಟ್ಟೆಯಲ್ಲಿ ಜಮಾಯಿಸಿದ ಮತದಾರರು. ಸಂಜೆ 6ನಂತರನೂ ಮತದಾನ ಮಾಡಲು ಅವಕಾಶ ಕಲ್ಪಿಸಿರುವ ಚುನಾವಣಾಧಿಕಾರಿಗಳು, ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದೇ ಇರಲು ಪೊಲೀಸ್ ಸಿಬ್ಬಂದಿ ನಿಯೋಜನೆ.