ಕಂಪನಿಗಳು ಸ್ಥಳೀಯರಿಗೆ ಒಳ್ಳೆಯದು ಮಾಡಲಿ: ಇಲ್ಲ ತೊಂದರೆ ಅನುಭವಿಸಿ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಕಂಪನಿಗಳಿಂದ ವಸೂಲಿ ಮಾಡುವ ಜಾಯಮಾನ ನಮ್ಮದಲ್ಲ ನಿಮಗೆ ಬೇಕಾದರೆ ಹಣ ನಾವೇ ಕೊಡತ್ತೇವೆ ಸ್ಥಳೀಯರಿಗೆ ಒಳ್ಳೆಯದು ಮಾಡಲಿ ಇಲ್ಲದೇ ಹೋದರೆ ಕಂಪನಿಗಳಿಗೆ ತೊಂದರೆ ಕೊಡುವುದು ಗ್ಯಾರಂಟಿ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

ತಾಲೂಕಿನ ವಕ್ಕಲೇರಿ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಹೊಂಡಾ ಕಂಪನಿಯ ವತಿಯಿಂದ ನಡೆದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆಲವು ಕಂಪನಿಗಳು ನಿರಂತರವಾಗಿ ಇಂತಹ ಸಾಮಾಜಿಕ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿದ್ದಾರೆ ಇನ್ನೂ ಕೆಲವು ಕಂಪನಿಗಳಿಗೂ ನಮಗೂ ಸಂಬಂಧವೂ ಇಲ್ಲದಂತೆ ಇದ್ದಾರೆ ಅವರು ಸ್ಥಳೀಯರಿಗೆ ಒಳ್ಳೆಯದು ಮಾಡಿದರೆ ನಾವುಗಳು ಸಹ ಅವರ ಪರವಾಗಿ ಸಹಾಯಕ್ಕೆ ಸಿದ್ದ ಇಲ್ಲದೇ ಹೋದರೆ ತೊಂದರೆ ಕೊಡುವುದು ನಮಗೆ ಗೊತ್ತಿದೆ ಅವರು ಅನುಭವಿಸಬೇಕಾಗುತ್ತದೆ ಎಂದರು.

ಕೈಗಾರಿಕೆಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ( ಸಿಎಸ್ಆರ್) ಅನುದಾನವನ್ನು ಶಿಕ್ಷಣ ಹಾಗೂ ಆರೋಗ್ಯಕ್ಕೆ ಮೊದಲ ಅಧ್ಯತೆ ನೀಡಬೇಕು ನಂತರದಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಬಳಕೆಯಾಗಬೇಕು
ಬಡವರು ಮತ್ತು ವೃದ್ಧರು ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಗ್ರಾಮೀಣ ಪ್ರದೇಶದ ಜನರಿಗಾಗಿ ಇಂತಹ ದೊಡ್ಡ ಮಟ್ಟದಲ್ಲಿ ಆರೋಗ್ಯ ಮೇಳವನ್ನು ಆಯೋಜಿಸಿರುವುದು ನಿಜಕ್ಕೂ ಸಂತೋಷ ತಂದಿದೆ. ತಜ್ಞ ವೈದ್ಯರು ಬಂದಿದ್ದು, ಪ್ರತಿಯೊಬ್ಬರೂ ಈ ಆರೋಗ್ಯ ಮೇಳವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ 2013 ರಲ್ಲಿ ನರಸಾಪುರ ಕೈಗಾರಿಕಾ ಪ್ರದೇಶವು ಪ್ರಾರಂಭಕ್ಕೂ ಮುಂಚೆ ಸ್ಥಳೀಯವಾಗಿ ಶುದ್ದವಾದ ಕುಡಿಯುವ ನೀರಿಗೆ ಹಾಗೂ ಉದ್ಯೋಗಕ್ಕೆ ಸಮಸ್ಯೆಯಾಗಿತ್ತು ಇವತ್ತು ಸಾಕಷ್ಟು ಉದ್ಯೋಗ ನೀಡಿದೆ ಜೊತೆಗೆ ಕೈಗಾರಿಕೆಗಳ ಸಿಎಸ್ಆರ್ ಅನುದಾನದಿಂದ ಶುದ್ದನೀರಿನ ಘಟಕಗಳು ಸರ್ಕಾರಿ ಶಾಲೆಗಳ ದುರಸ್ತಿ, ಹೈ ಮಾಸ್ಕ್ ದೀಪಸ್ತಂಭಗಳು ಸೇರಿದಂತೆ ಸಾಮಾಜಿಕ ಚಟುವಟಿಕೆಗಳಿಗೆ ಅಧ್ಯತೆ ನೀಡಿದ್ದಾರೆ ಎಂದರು.

ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿಕೊಳ್ಳುವುದು ಅತೀ ಅಗತ್ಯವಿದೆ ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಕೈಗಾರಿಕಗಳು ಇಂತಹ ಆರೋಗ್ಯ ಮೇಳಗಳನ್ನು ನಡೆಸಿವೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಇಂತಹ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆಸಿದರೆ ಇನ್ನಷ್ಟು ಅನುಕೂಲವನ್ನು ಪಡೆಯಬಹುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಹೋಂಡಾ ಕಂಪನಿಯ ವಿಭಾಗೀಯ ಮುಖ್ಯಸ್ಥ ಸುನಿಲ್ ಕುಮಾರ್ ವಿಠ್ಠಲ್, ಆಡ್ಮೀನ್ ಜಯಂತ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಲೋಕೇಶ್, ರಾಜಣ್ಣ, ಸದಸ್ಯರಾದ ಚಿನ್ನಮ್ಮ, ಬೊಟ್ಟುರಾಜಪ್ಪ, ಮಂಜುನಾಥ್, ಜ್ಯೋತಿ ಮುನಿಯಪ್ಪ, ಮುಖಂಡರಾದ ಹಿನಾಯತ್, ರಘು, ಹನುಮಂತಣ್ಣ, ರಾಮಯ್ಯ, ಪಿಡಿಒ ಭಾರತಿ ಮುಂತಾದವರು ಇದ್ದರು.

Leave a Reply

Your email address will not be published. Required fields are marked *