ದೊಡ್ಡಬಳ್ಳಾಪುರ: ಕಂದಾಯ ಇಲಾಖೆಯು ಭೂ ಸುರಕ್ಷಾ ಮಹತ್ವಾಕಾಂಕ್ಷಿ ಯೋಜನೆಯಡಿಯಲ್ಲಿ ತಾಲ್ಲೂಕು ಕಚೇರಿ, ಎ.ಸಿ ಕಚೇರಿ ಮತ್ತು ಡಿ.ಸಿ ಕಚೇರಿಗಳಲ್ಲಿರುವ ಪ್ರಮುಖ ಭೂದಾಖಲೆಗಳ ವರ್ಗೀಕರಣ ಹಾಗೂ ಸ್ಕ್ಯಾನಿಂಗ್ ಮಾಡುವ ಮೂಲಕ ಡಿಜಿಟಲೀಕರಣ ನಡೆಯುತ್ತಿದೆ. ಇದರಿಂದ ಭೂ ದಾಖಲೆಗಳ ರಕ್ಷಣೆ ಮತ್ತು ನಕಲಿಯಾಗುವುದು ತಪ್ಪಲಿದೆ ಹಾಗೆಯೇ ಸಾರ್ವಜನಿಕರು ಭೂ ದಾಖಲೆಗಳು ಸೇರಿದಂತೆ ವಿವಿಧ ಆದೇಶಗಳ ದೃಢೀಕೃತ ಪ್ರತಿಗಳಿಗಾಗಿ ಕಚೇರಿಗೆ ಬರುವುದು ತಪ್ಪಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
ಈ ಕಂದಾಯ ಇಲಾಖೆಯ ವಿವಿಧ ಆನ್ ಲೈನ್ ಸೇವೆಗಳ ಕುರಿತು ಮಾಹಿತಿ ನೀಡಿ, ತಾಲ್ಲೂಕು ಕಚೇರಿಯಲ್ಲಿನ ಅಭಿಲೇಖಾಲಯಗಳಲ್ಲಿ ಶಿರಸ್ತೇದಾರರಿಂದ ಪರಿಶೀಲನೆ ಮಾಡಿರುವ ದಾಖಲೆಗಳನ್ನು ‘ಕಂದಾಯ ದಾಖಲೆಗಳ ಗಣಕೀಕರಣ’ ತಂತ್ರಾಂಶದಲ್ಲಿ ಆನ್ ಲೈನ್ ಮೂಲಕ ಸ್ವತಹ ಸಾರ್ವಜನಿಕರೇ ಪಡೆಯಬಹುದು ಅಥವಾ ಅಭಿಲೇಖಾಲಯಗಳ ಕೇಂದ್ರಗಳಿಗೆ ಭೇಟಿ ನೀಡಿಯೂ ಸಹ ಡಿಜಿಟಲ್ ಸಹಿ ಇರುವ ದಾಖಲೆಗಳನ್ನು ಪಡೆಯ ಬಹುದಾಗಿದೆ ಎಂದು ತಿಳಿಸಿದ್ದಾರೆ.
ಆಕಸ್ಮಿಕವಾಗಿ ಭೂ ದಾಖಲೆ ಸ್ಕ್ಯಾನಿಂಗ್ ಆಗದೇ ಇದ್ದರೆ ಶಿರಸ್ತೆದಾರರಿಂದ ದೃಢೀಕರಿಸಿ ಡಿಜಿಟಲ್ ತಂತ್ರಾಂಶದ ಮೂಲಕವೇ ಸಾರ್ವಜನಿಕರಿಗೆ ವಿತರಿಸುವಂತೆ ಸರ್ಕಾರ ಆದೇಶ ಮಾಡಿದೆ ಎಂದು ಹೇಳಿದ್ದಾರೆ.
ಡಿಜಿಟಲ್ ಭೂ ದಾಖಲೆಗಳನ್ನು ಪಡೆಯಲು ಇರುವ ಲಿಂಕ್ https: //recordroom. karnataka. gov. in/ ERECORDROOM
ಸರ್ವೆ ಇಲಾಖೆಯ ದಾಖಲೆ:
ಸರ್ವೆ ಇಲಾಖೆಯ ದಾಖಲೆಗಳಾದ ಅಟ್ಲಾಸ್, ಟಿಪ್ಪಣಿ, ಪಕ್ಕಬುಕ್, ರೀ ಸರ್ವೇಪ್ರತಿ, ಖರ್ದಾ ಪ್ರತಿ, ಆಕಾರ ಬಂದ್ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಈಗಾಗಲೇ ಸ್ಕ್ಯಾನಿಂಗ್ ಮಾಡಲಾಗಿದ್ದು, ಡಿಜಿಟಲ್ ಪ್ರತಿಗಳು ಸಾರ್ವಜನಿಕರಿಗೆ ಲಭ್ಯವಿದೆ.
ಸಾರ್ವಜನಿಕರು ಸರ್ವೆ ಇಲಾಖೆಯ ಅಭಿಲೇಖಾಲಯದ ದೃಢೀಕೃತ ದಾಖಲೆಗಳನ್ನು ಆನ್ ಲೈನ್ ಮೂಲಕ ಸ್ವತಹ ತಾವೇ ಪಡೆಯ ಬಹುದು. ಸರ್ವೇ ದಾಖಲೆಗಾಗಿ ಅರ್ಜಿಯನ್ನು ಸಲ್ಲಿಸಲು https: //bhoomojini karnataka.gov.in/oscitizen ಈ ಲಿಂಕ್ ಬಳಸಬಹುದು. ಹಾಗೆಯೇ ಆನ್ ಲೈನ್ ಮೂಲಕ ಆಕಾರ ಬಂದುನ್ನು ವೀಕ್ಷಿಸಲು https://bhoomojini.karnataka.gov.in/service39/ ಲಿಂಕ್ ನ್ನು ಬಳಸಬಹುದಾಗಿದೆ.
ಕಂದಾಯ ನ್ಯಾಯಾಲಯ ಆದೇಶಗಳು ಈಗ ಡಿಜಿಟಲ್ ಸಹಿಯಲ್ಲಿ ಲಭ್ಯ:
ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಂದಾಯ ನ್ಯಾಯಾಲಯದ ಪ್ರಕರಣಗಳನ್ನು ಸಂಪೂರ್ಣವಾಗಿ ಆರ್.ಸಿ.ಸಿ.ಎಂ.ಎಸ್ (REVENUE COURT CASE MONITORING SYSTEM) ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತಿದೆ. ಕಂದಾಯ ಅಧಿಕಾರಿಗಳು ಹೊರಡಿಸಿದ ಆದೇಶಗಳು ಆರ್.ಸಿ.ಸಿ.ಎಂ.ಎಸ್ ವೆಬ್ ಸೈಟ್ ನಲ್ಲಿ ಲಭ್ಯವಾಗುತ್ತಿವೆ.
ಸಾರ್ವಜನಿಕರು ಆರ್.ಸಿ.ಸಿ.ಎಂ.ಎಸ್ ಮೂಲಕ ಆದೇಶದ ಪ್ರತಿ ಹಾಗೂ ಪ್ರಕರಣದ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಕಂದಾಯ ಇಲಾಖೆಯು ಕಂದಾಯ ಇಲಾಖೆಯ ಕೋರ್ಟ್ ಆದೇಶಗಳಿಗೆ ಡಿಜಿಟಲ್ ಸಹಿಯನ್ನು ಕಡ್ಡಾಯಗೊಳಿಸಿದ್ದು ಸಾರ್ವಜನಿಕರು ಡಿಜಿಟಲ್ ಸಹಿಯನ್ನು ಹೊಂದಿರುವ ಆದೇಶಗಳನ್ನು ಆರ್.ಸಿ.ಸಿ.ಎಂ.ಎಸ್ ಪೋರ್ಲ್ ಟಲ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಡಿಜಿಟಲ್ ಸಹಿ ಇರುವ ಆದೇಶಗಳಿಗೆ ಮತ್ತೊಮ್ಮೆ ಸಂಭಂದಪಟ್ಟ ಕಚೇರಿಯಿಂದ ದೃಢೀಕೃತ ಆದೇಶದ ಪ್ರತಿಗಳನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ.ಆದೇಶದ ಪ್ರತಿಗಳಿಗಾಗಿ ಲಿಂಕ್ https://rccms.karnataka.gov.in/rccms
ಇ-ಚಾವಡಿ:
ರೈತರು ತಮ್ಮ ಜಮೀನಿನ ಮೇಲೆನ ನಡೆಯುತ್ತಿರುವ ಮ್ಯೂಟೆಷನ್(ಎಂ.ಆರ್)ವಹಿವಾಟು,ಕಂದಾಯ ನ್ಯಾಯಾಲಯದ ಪ್ರಕರಣಗಳ ವಿವರ ಹಾಗೂ ಭೂ ಪರಿವರ್ತನೆ ಮಾಹಿತಿಯನ್ನು spatial platform (Google map )ನಲ್ಲಿ ವೀಕ್ಷಿಸಲು ಕಂದಾಯ ಇಲಾಖೆ ಇ-ಚಾವಡಿ ತಂತ್ರಾಂಶವನ್ನುಅಭಿವೃದ್ಧಿಪಡಿಸಿದೆ.
ಗ್ರಾಮವಾರು ಮ್ಯೂಟೆಷನ್ ಹಿವಾಟಿನ ಮಾಹಿತಿಯನ್ನು ನೋಡಬಹುದು ಹಾಗು ನಮೋನೆ -21ಯನ್ನು ಇ-ಚಾವಡಿ ತಂತ್ರಾಂಶದ ಮೂಲಕವೇ ಡೌನ್ ಲೋಡ್ ಮಾಡಿಕೊಳ್ಳಬಹುದು.
ಕಂದಾಯ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು,ಮುಕ್ತಾಯಗೊಂಡಿರುವ ಪ್ರಕರಣಗಳು ಹಾಗೂ ತಿರಸ್ಕೃತಗೊಂಡಿರುವ ಪ್ರಕರಣಗಳನ್ನು ಸಹ ಇ-ಚಾವಡಿ ವೆಬ್ಸೈಟ್ನಲ್ಲಿ ನೋಡಬಹುದು. ಇದರ ಲಿಂಕ್ https://rdservices.karnataka.gov.in/echawadi/
ಭೂ ಪರಿವರ್ತನೆ ಆದೇಶ:
ಜಿಲ್ಲಾಧಿಕಾರಿಗಳು ಡಿಜಿಟಲ್ ಸಹಿ ಮಾಡಿರುವ ಭೂ ಪರಿವರ್ತನೆ ಆದೇಶಗಳನ್ನು ಆನ್ಲೈನ್ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳಬಹುದು. ಡಿಜಿಟಲ್ ಸಹಿ ಯಾಗಿರುವ ಭೂ ಪರಿವರ್ತನೆ ಆದೇಶಗಳನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಧೃಢೀಕೃತ ಪ್ರತಿ ಪಡೆಯುವ ಅವಶ್ಯಕತೆ ಇರುವುದಿಲ್ಲ. ಇದರ ಲಿಂಕ್https://landconversion.karnataka.gov.in/service80/
ನಮೂನೆ 1 ರಿಂದ 5 (ಮಂಜೂರಿ ಜಮೀನಿನ ಫೋಡಿ ದುರಸ್ತಿ) ಅರ್ಜಿ ಸ್ಥಿತಿ:
ಸರ್ಕಾರಿ ಜಮೀನುಗಳಲ್ಲಿ ಮಂಜೂರಿಯಾಗಿ ಫೋಡಿ ದುರಸ್ತಿ ಯಾಗದೇ ಇರುವ ಜಮೀನುಗಳನ್ನು ಗುರುತಿಸಿ ಮೂನೆ 1 ರಿಂದ 5 ಅನ್ನು ತಯಾರಿಸಿ ಫೋಡಿ ಮಾಡಿಕೊಡುವ ಪ್ರಕ್ರಿಯೆಗೆ ಸರ್ಕಾರವು ಚಾಲನೆ ನೀಡಿದೆ.
ಮಂಜೂರಿದಾರರು ತನ್ನ ಫೋಡಿ ಅರ್ಜಿಯ ಸ್ಥಿತಿಯನ್ನು ತಿಳಿಯಲು ತಾಲ್ಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆಯು ವೆಬ್ಪೊರ್ಟ್ಲ್ ಅನ್ನು ಸಿದ್ದಪಡಿಸಿದೆ. ಮಂಜೂರಿದಾರರು ತಮ್ಮ ಸರ್ವೆ ನಂಬರ್ ನಮೂನೆ 1ರಿಂದ 5ರಸ್ಥಿತಿಯನ್ನು ಈ ಲಿಂಕ್ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ. https://rdservices.karnataka.gov.in/service81
ಬಗರ್ ಹುಕುಂ ಅರ್ಜಿಗಳ (ಫಾರಂ 50, 53, 57) ಸ್ಥಿತಿಗಳ ಮಾಹಿತಿ:
ಬಗರ್ ಹುಕುಂ (ಫಾರಂ 50,53, 57) ಅರ್ಜಿಗಳಿಗೆ ಸಂಭಂದಿಸಿದಂತೆ ಅರ್ಜಿಯ ಸ್ಥಿತಿಯನ್ನು ಸಹ ಈಗ ಆನ್ ಲೈನ್ ಮೂಲಕವೇ ಸಾರ್ವಜನಿಕರು ವೀಕ್ಷಿಸಬಹುದು. ಇದರ ಲಿಂಕ್ https://rdservices.karnataka.gov.in/service87
ಭೂಮಿ ಮೊಬೈಲ್ ತಂತ್ರಾಂಶ:
ಸಾರ್ವಜನಿಕರು ತಮ್ಮ ಜಮೀನಿಗೆ ಸಂಭಂದಿಸಿದ ಪಹಣಿ(ಆರ್.ಟಿ.ಸಿ) ಮಾಹಿತಿಯನ್ನು ಮೊಬೈಲ್ ತಂತ್ರಾಂಶದಲ್ಲಿ ವೀಕ್ಷಿಸಬಹುದು. ಜಮೀನಿಗೆ ಸಂಭಂದಿಸಿದ ಡಿಜಿಟಲ್ ನಕ್ಷೆಯನ್ನು ಮೊಬೈಲ್ನಲ್ಲಿ ವೀಕ್ಷಿಸಬಹುದು. ಮೊಬೈಲ್ ತಂತ್ರಾಂಶದಲ್ಲಿ ಪಹಣಿಯ ಪಿಡಿಎಫ್ ಪ್ರತಿಯನ್ನು ಪಡೆಯಬಹುದು. ಗ್ರಾಮದಲ್ಲಿರುವ ಮ್ಯೂಟೇಷನ್ ವಹಿವಾಟಿನ ವಿವರಗಳನ್ನು ವೀಕ್ಷಿಸಬಹುದು. ಜಮೀನಿನ ಮೇಲೆ ಯಾವುದಾದರೂ ನ್ಯಾಯಾಲಯದ ಪ್ರಕರಣ ದಾಖಲಾಗಿದ್ದಾರೆ ಅಂತಹ ಮಾಹಿತಿಯನ್ನು ವೀಕ್ಷಿಸಬಹುದು. ಭೂ ಪರಿವರ್ತನೆಗೆ ಸಂಭಂದಿಸಿದ ಅರ್ಜಿಯ ಸ್ಥಿತಿ ಹಾಗೂ ಆದೇಶದ ಪ್ರತಿಯನ್ನು ಪಡೆಯಬಹುದು. ಈ ಮೊಬೈಲ್ ತಂತ್ರಾಂಶವು ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ.https://play.google.com/store/apps/details?id=com.bmc.bhoomilandrecords&hl=en_IN
ದೊಡ್ಡಬಳ್ಳಾಪುರ ತಾಯಿ-ಮಗು ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ 9 ತಿಂಗಳ ತುಂಬು ಗರ್ಭಿಣಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು…
ಎರಡು ಮುಖಗಳ, ವಿವಿಧ ಆಯಾಮಗಳ ಒಂದು ವಿಮರ್ಶೆ. ಭಾರತದ ಸಂವಿಧಾನ ಪ್ರತಿಪಾದಿಸುವ ಆಶಯಗಳ ಹಿನ್ನೆಲೆಯಲ್ಲಿ....... ಭಾರತದ ಸಂವಿಧಾನ ಮತ್ತು ಅದರ…
ದೊಡ್ಡಬಳ್ಳಾಪುರದ ಹಲವು ಭಾಗಗಳಲ್ಲಿ ಕೆಲವು ಕಾರ್ಖಾನೆಗಳು ಕಲುಷಿತ ಕೆಮಿಕಲ್ ತ್ಯಾಜ್ಯ, ಇನ್ನಿತರ ತ್ಯಾಜ್ಯವನ್ನು ಕೆರೆಗಳಿಗೆ, ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ. ಇದರಿಂದ…
ಕೂಸು ಇದ್ದ ಮನಿಗ ಬೀಸಣಿಕೆ ಯಾತಕ ? ಕೂಸು ಕಂದಯ್ಯ ಒಳ ಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ. ನಮ್ಮ…
ದೊಡ್ಡಬಳ್ಳಾಪುರ ತಾಲೂಕಿಗೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆಯನ್ನು ದೇವನಹಳ್ಳಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಸುಳ್ಳು ಮಾಹಿತಿ ತಾಲೂಕಿನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ…
ದೊಡ್ಡಬಳ್ಳಾಪುರ : ಬಡವರು ನಿರ್ಗತಿಕರಿಗೆ ಹಂಚಿಕೆ ಮಾಡಲಾದ ಆಶ್ರಯ ಮನೆಗಳು ಬಲಾಢ್ಯರ ಪಾಲಾಗಿವೆ, ಅಕ್ರಮವಾಗಿ ಮನೆಗಳ ಬೀಗ ಹೊಡೆದು ಅಶ್ರಯ…