ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್, 2 ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದ, ಆಮೇಲೆ ಲಾಕ್ ಡೌನ್ ಅವಾಂತರಿಂದ ಕೆಲಸ ಕಳೆದುಕೊಂಡ, ಲಾಕ್ ಡೌನ್ ನಂತರ ಯಾವುದೇ ಕೆಲಸ ಇಲ್ಲ, ಎಷ್ಟೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರೂ ಸಿಗದ ಕೆಲಸ, ಇಷ್ಟಕ್ಕೆ ಮನನೊಂದ ಯುವಕ ಕೊನೆಗೆ ಸಾವಿನ ಕದ ತಟ್ಟಿದ್ದಾನೆ.
ಈ ಯುವಕನಿಗೆ ಇನ್ನೂ 29 ವರ್ಷ. ತನ್ನ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳು ಇದ್ದವು, ಆದರೆ, ಹತಾಶೆ ಮನೋಭಾವದಿಂದ ಸಾಯಬೇಕು ಎಂದು ನಿರ್ಧಾರ ಮಾಡಿ “No one is Responsible for My Death. I am Solely Responsible, I am a big failure” ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿ ಉಜ್ವಲ ಭವಿಷ್ಯ ಕಳೆದುಕೊಂಡಿದ್ದಾನೆ.
ದೊಡ್ಡಬಳ್ಳಾಪುರ ನಗರದ ವಿದ್ಯಾನಗರದ ನಿವಾಸಿ ಭರತ್ ಕುಮಾರ್ (29) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ.
ಆ.18ರ ಸಂಜೆ 5 ಗಂಟೆ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ. ಮುಗಿಲು ಮುಟ್ಟಿದ ಮೃತ ಕುಟುಂಬಸ್ಥನ ಆಕ್ರಂದನ.
ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.